ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ವಿವಿ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಮಂಗಳವಾರ ಶೈಕ್ಷಣಿಕ ಮಂಡಳಿಯ ದ್ವಿತೀಯ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರಂಭಿಕ ಹಂತದಲ್ಲಿ ಬಯೋ ಸಾಯನ್ಸ್‌ನ್ನು ‘ಸ್ಕೂಲ್ ಆಫ್ ಬಯೋಲಾಜಿಕಲ್ ಸಾಯನ್ಸ್’ ಆಗಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು. ಇದರ ಅಡಿಯಲ್ಲಿ ಬಯೋ ಸಾಯನ್ಸ್‌ಗೆ ಸಂಬಂಧಿಸಿದ ಎಲ್ಲ ಆನ್ವಯಿಕ ವಿಭಾಗಗಳು ಒಂದಾಗಿ ಕಾರ್ಯನಿರ್ವಹಿಸಲಿವೆ. ಇದರಿಂದಾಗಿ ವಿಭಾಗದ ಎಲ್ಲ ಉಪನ್ಯಾಸಕರಿಗೆ ಬೋಧನೆಗೆ ಅವಕಾಶ ಲಭಿಸುತ್ತದೆ ಅಲ್ಲದೆ, ಹಿರಿಯ ಪ್ರಾಧ್ಯಾಪಕರ ಅನುಭವ ಪಡೆಯಲೂ ಸಾಧ್ಯವಾಗುತ್ತದೆ. ಆದರೆ ಮೂಲ ಪಠ್ಯ, ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅರ್ಥಶಾಸ್ತ್ರ ಮರು ಸೇರ್ಪಡೆ ಪ್ರಸ್ತಾಪ:ಪ್ರಸಕ್ತ ಪದವಿ ತರಗತಿಗಳಲ್ಲಿ ಕಲಾ ವಿಭಾಗದಲ್ಲಿ ಮಾತ್ರ ಅರ್ಥಶಾಸ್ತ್ರ ಕಲಿಕೆಗೆ ಅವಕಾಶ ಇದೆ. ಆದರೆ ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ ಕಲಿಕೆಗೆ ಈ ಹಿಂದೆ ಅವಕಾಶ ಇತ್ತು. ಈಗ ಪಠ್ಯ ಕ್ರಮವನ್ನು ಬದಲಾಯಿಸಿರುವುದರಿಂದ ಅರ್ಥಶಾಸ್ತ್ರ ಉಪನ್ಯಾಸಕರಿಗೆ ಕೆಲಸವಿಲ್ಲದಂತಾಗಿದೆ. ಈ ಬಗ್ಗೆ ಅರ್ಥಶಾಸ್ತ್ರ ಉಪನ್ಯಾಸಕರ ಸಂಘಟನೆ ಜನಪ್ರತಿನಿಧಿಗಳು ಹಾಗೂ ವಿವಿಗೆ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮಾವೀಯತೆ ನೆಲೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ ಸೇರ್ಪಡೆಗೆ ಪರಸ್ಪರರು ಚರ್ಚೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬಂದರೆ ಉತ್ತಮ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ಇದೇ ಸಂದರ್ಭ ಕಳೆದ ಎರಡು ಸೆಮಿಸ್ಟರ್‌ಗಳ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಹಾಗೂ ಈ ಸಾಲಿಗೆ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಪರಿಷ್ಕೃತ ಪಠ್ಯಗಳಿಗೆ ಅನುಮೋದನೆ ಪಡೆಯಲಾಯಿತು.
ಇನ್ನು ಮುಂದೆ ಬಿಎಡ್ ಪದವಿ ಕಾರ್ಯಕ್ರಮದಡಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಸಂಬಂಧಿಸಿ ಕರಡು ಮಾರ್ಗಸೂಚಿಗೆ ಅನುಮೋದನೆ ಪಡೆಯಲಾಯಿತು.
ಪರೀಕ್ಷಾಂಗ ಕುಲಸಚಿವ ಡಾ.ದೇವೇಂದ್ರಪ್ಪ, ಆಡಳಿತ ವಿಭಾಗ ಕುಲಸಚಿವ ರಾಜು ಮೊಗವೀರ ಇದ್ದರು.
ಹಣಕಾಸು ವಿಭಾಗದ ಅಧಿಕಾರಿ ಪ್ರೊ.ಸಂಗಪ್ಪ ಅವರು 2024-25ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಕಳೆದ ಸಾಲಿನ ಪರಿಷ್ಕೃತ ಬಜೆಟ್‌ಗೆ ಅನುಮೋದನೆ ಪಡೆಯಲಾಯಿತು.
ಡಿಜಿ ಲಾಕರ್ ಅಂಕಪಟ್ಟಿ ಬದಲಿಲ್ಲ
ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಎಲ್ಲ ಪದವಿ ತರಗತಿಗಳು ಆ.12ರಿಂದ ಆರಂಭವಾಗಲಿದೆ. ಪ್ರಸಕ್ತ ಕೊನೆ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನ ಶೇ.70ರಷ್ಟು ಪೂರ್ಣಗೊಂಡಿದೆ. ಕಳೆದ ಸಾಲಿನಲ್ಲಿ ಬಾಕಿಯಾದ ಮೌಲ್ಯಮಾಪಕರ ಗೌರವಧನ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ಬಾರಿ ಸ್ನಾತಕೋತ್ತರ ಪದವಿ ತರಗತಿಗಳು ಸೆಪ್ಟೆಂಬರ್ 9ರಿಂದ ಆರಂಭವಾಗಲಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.