ಈವರೆಗೂ ವಿಜ್ಞಾನದಿಂದ ರಕ್ತ ಉತ್ಪಾದಿಸಲು ಆಗಿಲ್ಲ

KannadaprabhaNewsNetwork |  
Published : Jun 28, 2025, 12:18 AM IST
27ಎಚ್ಎಸ್ಎನ್16 : ಹೊಳೆನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಆಡಳಿತ ವೈದ್ಯಾಧಿಕಾರಿ ಡಾ. ನಾಗೇಂದ್ರ ಉದ್ಘಾಟಸಿದರು. ಡಾ ರೇಖಾ, ಡಾ. ನಾಗಲಕ್ಷ್ಮೀ, ಡಾ. ದಿನೇಶ್, ಡಾ ಅಶ್ವಥಿ ಇದ್ದರು. | Kannada Prabha

ಸಾರಾಂಶ

ಅತ್ಯಗತ್ಯ ಹಾಗೂ ತುರ್ತು ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ರಕ್ತ ಬೇಕಾದರೆ ಮತ್ತೊಬ್ಬರ ರಕ್ತವನ್ನೇ ನೀಡಬೇಕು. ರಕ್ತಕ್ಕೆ ಬದಲಾಗಿ ಬೆರೇನನ್ನೂ ನೀಡಲು ಸಾಧ್ಯವಿಲ್ಲ ಹಾಗೂ ವಿಜ್ಞಾನಕ್ಕೆ ರಕ್ತವನ್ನು ತಯಾರಿಸಲು ಸಾಧ್ಯ ಆಗಿಲ್ಲ. ಆದ್ದರಿಂದ ಜನರು ಹೆಚ್ಚೆಚ್ಚು ರಕ್ತದಾನ ಮಾಡಬೇಕು. ರಕ್ತದಾನ ಮಾಡಿ ಜನರ ಪ್ರಾಣ ಉಳಿಸಿ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನಾಗೇಂದ್ರ ವಿನಂತಿಸಿದರು. ನಿಯಮಿತವಾಗಿ ರಕ್ತದಾನ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ ಹಾಗೂ ರಕ್ತದಲ್ಲಿನ ಬಿಳಿ ಮತ್ತು ಕೆಂಪು ರಕ್ತ ಕಣಗಳ ಸಂಖ್ಯೆಯ ಸಮತೋಲನ ಚೆನ್ನಾಗಿರುತ್ತದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಅತ್ಯಗತ್ಯ ಹಾಗೂ ತುರ್ತು ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ರಕ್ತ ಬೇಕಾದರೆ ಮತ್ತೊಬ್ಬರ ರಕ್ತವನ್ನೇ ನೀಡಬೇಕು. ರಕ್ತಕ್ಕೆ ಬದಲಾಗಿ ಬೆರೇನನ್ನೂ ನೀಡಲು ಸಾಧ್ಯವಿಲ್ಲ ಹಾಗೂ ವಿಜ್ಞಾನಕ್ಕೆ ರಕ್ತವನ್ನು ತಯಾರಿಸಲು ಸಾಧ್ಯ ಆಗಿಲ್ಲ. ಆದ್ದರಿಂದ ಜನರು ಹೆಚ್ಚೆಚ್ಚು ರಕ್ತದಾನ ಮಾಡಬೇಕು. ರಕ್ತದಾನ ಮಾಡಿ ಜನರ ಪ್ರಾಣ ಉಳಿಸಿ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನಾಗೇಂದ್ರ ವಿನಂತಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಸನ ಹಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ನಿಯಮಿತವಾಗಿ ರಕ್ತದಾನ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ ಹಾಗೂ ರಕ್ತದಲ್ಲಿನ ಬಿಳಿ ಮತ್ತು ಕೆಂಪು ರಕ್ತ ಕಣಗಳ ಸಂಖ್ಯೆಯ ಸಮತೋಲನ ಚೆನ್ನಾಗಿರುತ್ತದೆ. ನಮ್ಮ ಜಿಲ್ಲೆಯ ಹಾಗೂ ಹೆಮ್ಮೆಯ ಹಿಮ್ಸ್ ಆಸ್ಪತ್ರೆಗೆ ರಕ್ತದಾನ ಮಾಡಿದರೆ ಅದು ನಮ್ಮ ಜಿಲ್ಲೆಯ ಜನರಿಗೇ ಉಪಯೋಗವಾಗುತ್ತದೆ. ಅನೇಕರ ಪ್ರಾಣ ಉಳಿಸಿದ ಪುಣ್ಯವೂ ನಿಮಗೆ ಲಭ್ಯ ಆಗುತ್ತದೆ ಎಂದರು. ಹಾಸನ ಹಿಮ್ಸ್ ರಕ್ತನಿಧಿ ಕೇಂದ್ರದ ಡಾ. ನಾಗಲಕ್ಷ್ಮೀ ಮಾತನಾಡಿ, ನಮ್ಮ ಆಸ್ಪತ್ರೆಗೆ ಅಗತ್ಯ ಇರುವಷ್ಟು ರಕ್ತ ಸಂಗ್ರಹ ಆಗುತ್ತಿಲ್ಲ. ಆದ್ದರಿಂದ ನಾವು ಎಲ್ಲ ಕಡೆ ರಕ್ತದಾನ ಶಿಬಿರ ಆಯೋಜಿಸಿ ನಿಮ್ಮವರಿಗಾಗಿ ರಕ್ತ ಸಂಗ್ರಹಿಸಿ ಇಡುತ್ತಿದ್ದೇವೆ. ಯಾರಿಗೆ ತುರ್ತುಗಿ ಯಾರಿಗೆ ರಕ್ತಬೇಕಾಗುತ್ತದೆ ಎಂದು ಗೊತ್ತಿರುವುದಿಲ್ಲ. ನಮ್ಮಲ್ಲಿ ಬ್ಲಡ್ ಬ್ಯಾಂಕಿನಲ್ಲಿ ರಕ್ತಸಂಗ್ರಹ ಇದ್ದರೆ ಅನೇಕರ ಪ್ರಾಣ ಉಳಿಸಬಹುದು, ಅದಕ್ಕಾಗಿ ಮುಂಚಿತವಾಗಿ ರಕ್ತದಾನ ಮಾಡಿ ಎಂದರು.

ಡಾ. ರೇಖಾ ಮಾತನಾಡಿ, ಜೂನ್ ೧೪ ವಿಶ್ವ ರಕ್ತದಾನಿಗಳ ದಿನ. ಈ ದಿನದ ನೆನಪಿಗಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ನಮ್ಮ ಆಸ್ಪತ್ರೆಯ ಸಿಬ್ಬಂದಿ ರಕ್ತದಾನ ಮಾಡುತ್ತಿದ್ದಾರೆ. ಸಾರ್ವಜನಿಕರು, ಯುವಕ, ಯುವತಿಯರು ರಕ್ತದಾನ ಮಾಡಿ ಪ್ರಾಣ ಉಳಿಸಿ ಎಂದರು. ಡಾ. ದಿನೇಶ್, ಡಾ ಅಶ್ವಥಿ, ಶುಶ್ರೂಷಕ ಅಧೀಕ್ಷಕಿ ಮೀನಾಕ್ಷಿ, ಆಸ್ಪತ್ರೆಯ ಭಾನುಶ್ರೀ, ಜ್ಯೋತಿ, ಸ್ವಾಮಿ, ಇತರರು ಇದ್ದರು.

PREV

Recommended Stories

ಸಂಜೆ ಕೋರ್ಟ್‌ಗೆ ವಕೀಲರ ಸಂಘಗಳ ವಿರೋಧ
ಕಾರ್ಯಕ್ರಮಕ್ಕೆ ಸಾರಿಗೆ ಬಸ್ಸಲ್ಲಿ ಬಂದ ಹೈಕೋರ್ಟ್‌ ನ್ಯಾಯಾಧೀಶರು!