ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಹೊರವಲಯದ ಮಾರೇಹಳ್ಳಿ ಪಿಎಂಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಖ್ಯಾತ ಭೌತವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು 1928ರ ಫೆಬ್ರವರಿ 28ರಂದು ತಮ್ಮ ಪ್ರಸಿದ್ಧ ಸಂಶೋಧನೆಯಾದ ‘ರಾಮನ್ ಎಫೆಕ್ಟ್’ನ್ನು ಜಗತ್ತಿಗೆ ಪರಿಚಯಿಸಿದರು. ಸಾಧನೆಯ ನೆನಪಿಗಾಗಿ ಮತ್ತು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ವಿಜ್ಞಾನ ದಿನಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ದೈನಂದಿನ ಜೀವನದಲ್ಲಿ ವಿಜ್ಞಾನ ಮುಖ್ಯ. ವಿಜ್ಞಾನದ ವಿಸ್ಮಯಗಳು ಜಗತ್ತನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ವಿಜ್ಞಾನ ದಿನಾಚರಣೆಯಲ್ಲಿ ವಿಜ್ಞಾನವನ್ನು ಸಂಭ್ರಮಿಸಿ ಜಗತ್ತಿನ ವಿಸ್ಮಯಗಳನ್ನು ಅರಿತುಕೊಳ್ಳಲು ಮತ್ತು ಮಾನವ ಜನಾಂಗಕ್ಕೆ ನೆರವಾಗಬಲ್ಲ ಹೊಸ ಅನ್ವೇಷಣೆಗಳನ್ನು ನಡೆಸಲು ಮುಂದಿನ ತಲೆಮಾರುಗಳಿಗೆ ಸ್ಪೂರ್ತಿ ನೀಡುವ ಅಗತ್ಯವಿದೆ ಎಂದರು.ಬಾಹ್ಯಕಾಶದ ಮಕ್ಕಳಲ್ಲಿ ಇದ್ದ ಅನುಮಾನಗಳಿಗೆ ಉತ್ತರ ನೀಡಲಾಯಿತು. ಮುಖ್ಯ ಶಿಕ್ಷಕ ಶಿವರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಪ್ರಶಾಂತ್‌ಬಾಬು ಸೇರಿದಂತೆ ಇತರರು ಇದ್ದರು.ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ವಿದ್ಯಾರ್ಥಿಗಳಿಂದ ವಿವರಣೆಗೆ ಪೋಷಕರ ಮೆಚ್ಚುಗೆ
ತಾಲೂಕಿನ ಸಂತೆಕಸಲಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ವಿದ್ಯಾರ್ಥಿಗಳು ನೀಡಿದ ವಿವರಣೆಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಸಿನೀರು ಹಾಗೂ ತಣ್ಣೀರಲ್ಲಿ ಬಣ್ಣ ಹಾಕಿದಾಗ ಬಿಸಿನೀರಲ್ಲಿ ಬೇಗ ಹರಡುವಿಕೆ, ಶಬ್ಧ ತರಂಗಗಳ ಪ್ರಸರಣ, ಹೂವಿನಲ್ಲಿ ಪರಾಗಸ್ಪರ್ಶ, ಬೆಳಕಿನ ವಿಕಿರಣ, ಇಂತಹ ಅನೇಕ ಸಂಶೋಧನೆಗಳನ್ನು ವಿವರಿಸಿ ಸಣ್ಣ ವಯಸ್ಸು ತಮ್ಮ ತಿಳಿವಳಿಕೆ ಸಾಮರ್ಥ್ಯವನ್ನು ಮಕ್ಕಳು ಪ್ರದರ್ಶಿಸಿದ್ದು ವಿಶೇಷವಾಗಿತ್ತು.