ವಿಜ್ಞಾನ ಎಂದರೆ ಅದು ನಿಖರವಾದ ಮಾಹಿತಿ: ಸುನಿತಾ ಕಿರಣ್

KannadaprabhaNewsNetwork |  
Published : Aug 30, 2025, 01:00 AM IST
ರೋಟರಿ ವಿದ್ಯಾ ಸಂಸ್ಥೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ   | Kannada Prabha

ಸಾರಾಂಶ

ತರೀಕೆರೆ, ವಿಜ್ಞಾನ ಅಂದರೆ ಉಹಾಪೊಹಗಳಲ್ಲ ಅಥವಾ ನಮ್ಮ ಭಾವನೆಗಳು ಅಲ್ಲ ಅದು ನಿಖರವಾದ ಮಾಹಿತಿ. ಇದಮಿತ್ತಮ್ ಅಂತಾರಲ್ಲ ಹಾಗೆ ಅಲ್ಲಿ ಎಲ್ಲಾ ವಿಚಾರಗಳು ದಾಖಲೆ ಹಾಗೂ ವಿಶಿಷ್ಟ ವಾಗಿರುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಹೇಳಿದ್ದಾರೆ.

- ರೋಟರಿ ವಿದ್ಯಾ ಸಂಸ್ಥೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ವಿಜ್ಞಾನ ಅಂದರೆ ಉಹಾಪೊಹಗಳಲ್ಲ ಅಥವಾ ನಮ್ಮ ಭಾವನೆಗಳು ಅಲ್ಲ ಅದು ನಿಖರವಾದ ಮಾಹಿತಿ. ಇದಮಿತ್ತಮ್ ಅಂತಾರಲ್ಲ ಹಾಗೆ ಅಲ್ಲಿ ಎಲ್ಲಾ ವಿಚಾರಗಳು ದಾಖಲೆ ಹಾಗೂ ವಿಶಿಷ್ಟ ವಾಗಿರುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಹೇಳಿದ್ದಾರೆ.

ತಾಲೂಕು ಕಸಾಪ ಮತ್ತು ರೋಟರಿ ವಿದ್ಯಾ ಸಂಸ್ಥೆಯಿಂದ ರೋಟರಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಹೊರಗಡೆ ಬರೋದೆ ಕಷ್ಟವಾಗಿದ್ದಾಗ ತಮ್ಮ ಪರಿಶ್ರಮ , ಆಸಕ್ತಿಯಿಂದ ಸಾಧನೆ ಮಾಡಿದಂಥ ಮಹಿಳೆಯರ ಬಗ್ಗೆ ಮಾಹಿತಿ ನೀಡಿದರು.

ನಂಜನಗೂಡಿನ ಕನ್ನಡತಿ ರಾಜೇಶ್ವರಿ ಚಟರ್ಜಿ ಕರ್ನಾಟಕದ ಮೊತ್ತಮೊದಲ ಮಹಿಳಾ ಎಂಜಿನಿಯರ್ ಹಾಗೂ ಭಾರತೀಯ ವಿಜ್ಞಾನ ಮಂದಿರಕ್ಕೆ ನೇಮಕವಾದ ಮೊದಲ ಮಹಿಳಾ ಉದ್ಯೋಗಿ. 1953ರಲ್ಲಿ ವಿದೇಶಕ್ಕೆ ತೆರಳಿ ಪಿಎಚ್ ಡಿ ಪದವಿ ಪಡೆದರು. ಮೈಕ್ರೋ ವೇವ್ ತಂತ್ರಜ್ಞಾನ ಮತ್ತು ರೇಡಿಯೋ ಎಂಜಿನಿಯರಿಂಗ್ ಸಂಶೋಧನೆ ಮಾಡಿದ ಅವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ಹೇಳಿದರು.

ಅಲೋಪತಿ ಕ್ಷೇತ್ರದ ಭಾರತದ ಮೊದಲ ಮಹಿಳಾ ವೈದ್ಯೆ ಆನಂದಿಬಾಯ್ ಜೋಶಿ ಪೆನ್ಸಲ್ವೇನಿಣಿಯ ವೈದ್ಯಕೀಯ ವಿವಿಯಲ್ಲಿ ಹೊರ ದೇಶಕ್ಕೆ ಹೋಗಿ ವೈದ್ಯರಾಗಿ ಭಾರತಕ್ಕೆ ಬಂದು ಸೇವೆ ಮಾಡಿದರು. ಸಸ್ಯ ವಿಜ್ಞಾನದಲ್ಲಿ ಸಾಧನೆ ಮಾಡಿದ ಜಾನಕೀ ಅಮ್ಮಳ್ ಸಾಧನೆ ಅವರು ಮಾಡಿದಂತಹ ಆವಿಷ್ಕಾರಗಳ, ಭೂ ವಿಜ್ಞಾನ, ಸಸ್ಯಗಳ ಮಿಶ್ರತಳಿ ಅಭಿವೃದ್ಧಿ ಪಡಿಸಿದರು. ಬದನೆಕಾಯಿ, ಕಬ್ಬಿನಲ್ಲಿ ಹೊಸ ತಳಿ ಸೃಷ್ಟಿ ಮಾಡಿದರು ಎಂದರು.ಮತ್ತೊರ್ವ ವಿಜ್ಞಾನಿ ಮಾರಿಯಾ ಟೆಲ್ಕೆಸ್ ಸೌರಶಕ್ತಿ ಯ ಬಗ್ಗೆ ಅನೇಕ ಸಂಶೋಧನೆ ಮಾಡಿದ್ದಾರೆ. ಆಸೀಮಾ ಚಟರ್ಜಿ ಕ್ಯಾನ್ಸರ್ ಕಾಯಿಲೆಗೆ ವಿಂಕಾ ಅಲ್ಕಲಾಯ್ಡ್ ಬಳಸಿ ಕಿಮೊಥೆರಪಿಗೆ ಪರಿಹಾರ, ಔಷಧಿ ಕಂಡು ಹಿಡಿದರು. ಕಾನ್ಸರ್ ರೋಗಿಗಳಿಗೆ ಇದೊಂದು ವಾರದಾನ ಎಂದು ಹೇಳಿದರು.ಕಸಾಪ ತಾಲೂಕು ಅಧ್ಯಕ್ಷ ರವಿ ದಳವಾಯಿ ಮಾತನಾಡಿ ಕನ್ನಡ ಭಾಷೆ ಹಿರಿಮೆ ಹಾಗೂ ಶ್ರಾವಣ ಮಾಸ ದಲ್ಲಿ ಶಾಲೆ ಕಾಲೇಜು ಗಳಲ್ಲಿ ನಡೆಸುತ್ತಿರುವ ಕಾರ್ಯಕ್ರಮಗಳಿಗೆ ಎಲ್ಲ ಕಡೆ ಹೆಚ್ಚಿನ ಸಹಕಾರ ಸಿಗುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿ ರೋಟರಿ ಶಾಲೆ ವ್ಯವಸ್ಥಾಪಕರಿಗೆ ಧನ್ಯವಾದ ತಿಳಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ರವಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ಉಪಯುಕ್ತ ವಿಚಾರಗಳನ್ನು ಸಾಹಿತ್ಯ ಪರಿಷತ್ತು ಶಾಲೆಗಳಲ್ಲಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ರೋಟರಿ ಕ್ಲಬ್ ಸಹಾಯಕ ಗವರ್ನರ್ ಪ್ರವೀಣ್ ನಾಹರ್, ರೋಟರಿ ಕ್ಲಬ್ ಕಾರ್ಯದರ್ಶಿ ಪ್ರವೀಣ್ ಪಿ. ಡಾ.ಜಿ.ಸಿ.ಶರತ್, ಇನ್ನರ್ ವೀಲ್ ಅಧ್ಯಕೆ ಮೀರಾ ವಾಸು, ಉಮಾ ದಯಾನದ್, ಶಾಲೆ ಶಿಕ್ಷಕರ ಉಪಸ್ಥಿತರಿದ್ದರು--

26ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾ.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ರೋಟರಿ ಕ್ಲಬ್ , ರೋಟರಿ ಕ್ಲಬ್ ಸಹಾಯಕ ಗವರ್ನರ್ ಪ್ರವೀಣ್ ನಾಹರ್, ರೋಟರಿ ಕ್ಲಬ್ ಅದ್ಯಕ್ಷ ಬಿ.ಪಿ,.ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ