ಧಾರವಾಡ:
ವಿಡಿಯೋ ಸಂದೇಶ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಎಕ್ಸ್‌ಪೋ ಆಯೋಜಿಸುವಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಪ್ರಯತ್ನ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ನೆಟ್ವ್‌ರ್ಕಿಂಗ್ ವೇದಿಕೆಯಾಗಿ ರೂಪಿತವಾಗಿರುವ ಈ ಕಾರ್ಯಕ್ರಮದ ಮಹತ್ವ ಪಡೆದಿದೆ ಎಂದರು.
ಎಸ್‌ಡಿಎಂ ಸೊಸೈಟಿ ಕಾರ್ಯದರ್ಶಿ ಜೀವಂಧರ ಕುಮಾರ, ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಒಂದು ರೀತಿಯ ಮುಕ್ತ ತರಗತಿ. ಹಳೆ ವಿದ್ಯಾರ್ಥಿಗಳು ನಾವೀನ್ಯತೆ ಮತ್ತು ನೆಟ್ವರ್ಕಿಂಗ್ ಮೂಲಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಬೆಳವಣಿಗೆಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ ಎಂದರು.ಉದ್ಯಮಿ ಗುರುದತ್ತ ಪ್ರಭು, ಹಳೆಯ ವಿದ್ಯಾರ್ಥಿಗಳ ಯಶಸ್ಸು ಮತ್ತು ಜೀವನ ವಿಧಾನಕ್ಕೆ ಸಂಸ್ಥೆ ಹೇಗೆ ಕೊಡುಗೆ ನೀಡಿದೆ ಎಂಬುದನ್ನು ಸ್ಮರಿಸಿದರು.
ಸಂಚಾಲಕ ಪ್ರದೀಪ್ ದೇಸಾಯಿ, ಕೆ.ಆರ್. ಕುಲಕರ್ಣಿ, ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ, ಡಾ. ಸುನೀಲ ಹೊನ್ನುಂಗರ, ಡಾ. ಜಗದೀಶ ಪೂಜಾರಿ. ಪ್ರಮೋದ ಝಳಕೀಕರ್ ಇದ್ದರು. ಪ್ರೊ. ಕುಶಾಲ್ ಕಪಾಲಿ ಪರಿಚಯಿಸಿದರು, ಶ್ರವಣಕುಮಾರ ನಿರೂಪಿಸಿದರು.