ದ್ವಿತೀಯ ಪಿಯುಸಿ ಪರೀಕ್ಷೆ: ಕೆ.ಆರ್.ಪೇಟೆ ತಾಲೂಕಿಗೆ ಪೂರ್ವಿಕಗೆ 2ನೇ ಸ್ಥಾನ

KannadaprabhaNewsNetwork | Published : Apr 11, 2025 12:32 AM

ಸಾರಾಂಶ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಟ್ಟಣದ ಸ್ಕಾಲರ್ ಪದವಿ ಪೂರ್ವ ಕಾಲೇಜು ಸತತ 8ನೇ ವರ್ಷವು ಉತ್ತಮ ಫಲಿತಾಂಶ ಪಡೆದಿದೆ. ಕಾಲೇಜಿನಲ್ಲಿ ಒಟ್ಡು 110 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 35 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 28 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಟ್ಟಣದ ಸ್ಕಾಲರ್ ಪದವಿ ಪೂರ್ವ ಕಾಲೇಜು ಸತತ 8ನೇ ವರ್ಷವು ಉತ್ತಮ ಫಲಿತಾಂಶ ಪಡೆದಿದೆ.

ಕಾಲೇಜಿನಲ್ಲಿ ಒಟ್ಡು 110 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 35 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 28 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೂರ್ವಿಕ ಟಿ.ಎನ್. ಕನ್ನಡ -97, ಇಂಗ್ಲೀಷ್ - 95 ಭೌತಶಾಸ್ತ್ರ-97,ರಸಾಯನಶಾಸ್ತ್ರ -93, ಗಣಿತ -99, ಜೀವಶಾಸ್ತ್ರ -99 ಒಟ್ಟು 580 ಅಂಕಗಳನ್ನು ಪಡೆಯುವ ಮೂಲಕ ತಾಲೂಕು ಮಟ್ಟದಲ್ಲಿ ಎರಡನೇ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ. ಮತ್ತೊಬ್ಬ ವಿದ್ಯಾರ್ಥಿ ಶ್ರೇಯಸ್ ಭೌತಶಾಸ್ತ್ರ -100, ರಸಾಯನಶಾಸ್ತ್ರ -98, ಗಣಿತ -100, ಜೀವಶಾಸ್ತ್ರ -96 ಅಂಕಗಳನ್ನು ಪಡೆದಿದ್ದಾನೆ.

ಅತ್ಯುತ್ತಮ ಸಾಧನೆ ಮೂಲಕ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳು ಮತ್ತು ಅದಕ್ಕೆ ಶ್ರಮಿಸಿದ ಉಪನ್ಯಾಸಕರು ಹಾಗೂ ಪೋಷಕ ವೃಂದವನ್ನು ಪ್ರಾಂಶುಪಾಲ ಎಸ್.ಮಂಜುನಾಥ್, ಸಂಸ್ಥೆ ಕಾರ್ಯದರ್ಶಿ ವಿದ್ಯಾ ಅಭಿನಂದಿಸಿದ್ದಾರೆ.

ಶಾಂತಿ ಕಾಲೇಜಿಗೆ ಶೇ.65 ರಷ್ಟು ಫಲಿತಾಂಶ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಶಾಂತಿ ಪದವಿ ಪೂರ್ವ ಕಾಲೇಜಿಗೆ 2024-25ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ.65ರಷ್ಟು ಫಲಿತಾಂಶ ಬಂದಿದೆ.

ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ 172 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ 107 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದವರ ಪೈಕಿ 15 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 65 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 27 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಎ.ಬಿ.ಭಾನುಪ್ರಿಯಾ (ಶೇ.95.16) ತಾಲೂಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ತಹೂರ ತಜಿಮ್ (ಶೇ.87.66) ಹಾಗೂ ಕಲಾ ವಿಭಾಗದಲ್ಲಿ ಅಮೀರ(ಶೇ.79.33) ಅಂಕ ಗಳಿಸುವ ಮೂಲಕ ಶಾಂತಿ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಿ.ಅನಿತಾ ತಿಳಿಸಿದ್ದಾರೆ.

ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷೆ ಎಂ.ಕೆ.ನಾಗಮಣಿ ನಾಗೇಗೌಡ, ಪದಾಧಿಕಾರಿಗಳು, ಉಪನ್ಯಾಸಕ ವೃಂದದವರು ಹಾಗೂ ಬೋಧಕೇತರ ವರ್ಗದವರು ಅಭಿನಂದಿಸಿದ್ದಾರೆ.ಸೇಂಟ್ ಆನ್ಸ್ ಗೆ ಶೇ.90.32 ರಷ್ಟು ಫಲಿತಾಂಶ

ಮಳವಳ್ಳಿ: ಪಟ್ಟಣದ ಸೇಂಟ್ ಆನ್ಸ್ ಪದವಿ ಪೂರ್ವ ಕಾಲೇಜು 2024-25ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ.90.32ರಷ್ಟು ಫಲಿತಾಂಶ ಪಡೆದುಕೊಂಡಿದೆ.

ವಿದ್ಯಾರ್ಥಿನಿ ಫರಾ ಶಬನಮ್(ಶೇ.88.66) ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎಂ.ಲಾವಣ್ಯ(ಶೇ.95.83) ತಾಲೂಕಿನ ಪ್ರಥಮ ಸ್ಥಾನ ಪಡೆದಿದ್ದಾರೆ. ಎಂ.ಎಸ್.ಕೋಮಲ(ಶೇ.94.83), ಪಿ.ದೀಪಿಕಾ(ಶೇ.92.66), ಬಿ.ಬಿ.ಹಾಜೀರ(ಶೇ.92.50) ಹಾಗೂ ಪಿ.ಸಂಗೀತಾ(ಶೇ.92.16) ಹಾಗೂ ಐವರು ವಿದ್ಯಾರ್ಥಿನಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪ್ರಾಂಶುಪಾಲೆ ಆಶಾ ತಿಳಿಸಿದ್ದಾರೆ.ಬಾಲಕಿಯರ ಕಾಲೇಜಿಗೆ ಶೇ.58.26 ರಷ್ಟು ಫಲಿತಾಂಶ

ಮಳವಳ್ಳಿ:

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 2024-25ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ.58.26ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 172 ವಿದ್ಯಾರ್ಥಿಗಳಲ್ಲಿ 67 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಲಕ್ಷ್ಮಿ(ಶೇ.94.5) ಅಂಕ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಳಿದಂತೆ ಅಪೂರ್ವ(ಶೇ.91), ಭಾಗ್ಯಲಕ್ಷ್ಮಿ(88.33) ಹಾಗೂ ವಾಣಿಜ್ಯ ವಿಭಾಗದಲ್ಲಿ ಎಂ.ದೀಕ್ಷಾ(85.33) ಹಾಗೂ 11 ವಿದ್ಯಾರ್ಥಿನಿಯರು ಹಾಗೂ ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪಿ.ಕಾವೇರಿ ತಿಳಿಸಿದ್ದಾರೆ.

Share this article