-ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ
-------ಕನ್ನಡಪ್ರಭ ವಾರ್ತೆ ಯಾದಗಿರಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದ ಬಳಿ ದಲಿತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ದಲಿತ ಸಂಘಟನೆಗಳು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತಾನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದು ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಅಮಿತ್ ಶಾ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ರಾಷ್ಟ್ರಪತಿಗಳು ಅವರನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.ಸಂಸತ್‌ನಲ್ಲಿ ಮಾತನಾಡುವ ವೇಳೆ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿ ಅಂಬೇಡ್ಕರ್ ಅನ್ನುವುದು ಒಂದು ಪ್ಯಾಷನ್ ಆಗಿದೆ. ಅಂಬೇಡ್ಕರ್ ಬದಲಾಗಿ ದೇವರ ಹೆಸರು ಹೇಳಿದ್ರೆ ಏಳು ಜನ್ಮದ ಸ್ವರ್ಗ ಪ್ರಾಪ್ತಿ ಆಗುತ್ತಿತ್ತು ಎಂದು ಅಪಮಾನ ಮಾಡಿರುವುದು ನಿಜವಾದ ದೇಶದ್ರೋಹದ ಕೃತ್ಯ. ಇಂತಹ ಕೀಳುಮಟ್ಟದ ರಾಜಕೀಯ ಮಾಡುತ್ತಿರುವ ದೇಶದ ಗೃಹ ಸಚಿವ ಆಗಿರುವುದು ನಮ್ಮ ದೇಶದ ದುರಂತ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಹಿರಿಯ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ, ಡಾ. ಭೀಮಣ್ಣ ಮೇಟಿ, ನಾಗಣ್ಣ ಬಡಿಗೇರ, ನೀಲಕಂಠ ಬಡಿಗೇರ, ರಾಮಣ್ಣ ಕಲ್ಲದೇವನಹಳ್ಳಿ, ಡಾ. ಭಗವಂತ ಅನ್ವಾರ, ಮಾನಪ್ಪ ಕಟ್ಟಿಮನಿ, ಗೋಪಾಲ ತೆಳಗೇರಿ, ಭಾಷುಮೀಯಾ ವಡಿಗೇರಾ, ನಿಂಗಪ್ಪ ಕೋಲ್ಲೂರಕರ್, ಸುದರ್ಶನ ನಾಯಕ, ಪರಶುರಾಮ ಒಡೆಯರ್, ನಿಂಗಪ್ಪ ಬಿರನಾಳ, ಬಸವರಾಜ ಗುಡಿಮನಿ, ಪ್ರಭು ಬುಕ್ಕಲ್, ವಸಂತ ಸುಂಗಲಕರ್, ಸಂಪತ್ ಚಿನ್ನಾಕರ್, ರಾಯಪ್ಪ ಸಾಲಿಮನಿ, ಮನ್ಸೂರ ಹಮ್ಮದ್, ಸಂತೋಷ ನಿರ್ಮೂಲಕರ್, ಹಣಮಂತರಾಯ ಮೀಲ್ಟ್ರೀ ಬಸವರಾಜ ಗುಡಿಮನಿ ಇತರರಿದ್ದರು.---
ಫೋಟೊ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಶುಕ್ರವಾರ ಯಾದಗಿರಿ ನಗರದ ಅಂಬೇಡ್ಕರ್ ವೃತ್ತದ ಬಳಿ ದಲಿತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.20ವೈಡಿಆರ್9