ಆಚಾರ್ಯತ್ರಯರಲ್ಲಿ ಓರ್ವರಾದ, ಉಡುಪಿಯ ಪಾಜಕದಲ್ಲಿ ಜನಿಸಿ ಮಾಧ್ವ ಸಿದ್ಧಾಂತವನ್ನು ಪ್ರತಿಪಾದಿಸಿ ಲೋಕಕ್ಕೆ ಪ್ರಚುರಪಡಿಸಿದವರು ಮಧ್ವಾಚಾರ್ಯರು. ಭಕ್ತಿ ಪಂತದ ಆರಾಧನೆಯ ಮುಖೇನ ದೇಹ ಧಾರ್ಡ್ಯ, ತಾಲೀಮು, ವ್ಯಾಯಾಮ, ಭಜನೆ ಸಂಕೀರ್ತನೆಗಳ ಮೂಲಕ ಜನರಲ್ಲಿ ಜನಾರ್ದನನನ್ನು ಕಾಣಬೇಕು ಎಂದು ಮಧ್ವರು ಸಂದೇಶ ನೀಡಿದ್ದರು ಎಂದರು ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.
ಮಂಗಳೂರು : ಆಚಾರ್ಯತ್ರಯರಲ್ಲಿ ಓರ್ವರಾದ, ಉಡುಪಿಯ ಪಾಜಕದಲ್ಲಿ ಜನಿಸಿ ಮಾಧ್ವ ಸಿದ್ಧಾಂತವನ್ನು ಪ್ರತಿಪಾದಿಸಿ ಲೋಕಕ್ಕೆ ಪ್ರಚುರಪಡಿಸಿದವರು ಮಧ್ವಾಚಾರ್ಯರು. ಭಕ್ತಿ ಪಂತದ ಆರಾಧನೆಯ ಮುಖೇನ ದೇಹ ಧಾರ್ಡ್ಯ, ತಾಲೀಮು, ವ್ಯಾಯಾಮ, ಭಜನೆ ಸಂಕೀರ್ತನೆಗಳ ಮೂಲಕ ಜನರಲ್ಲಿ ಜನಾರ್ದನನನ್ನು ಕಾಣಬೇಕು ಎಂದು ಮಧ್ವರು ಸಂದೇಶ ನೀಡಿದ್ದರು ಎಂದರು ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.
ಕಲ್ಕೂರ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಮಧ್ವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಧ್ವಾಚಾರ್ಯ ರಚಿತ ತಂತ್ರಸಾರ ಕೃತಿ ವಾಸ್ತು ವಿಜ್ಞಾನದ ವೈಶಿಷ್ಟ್ಯತೆಯನ್ನು ಬಿಂಬಿಸುತ್ತದೆ. ಜ್ಞಾನ ವಿಜ್ಞಾನ ಭಕ್ತಿ ಪಂಥದ ಗ್ರಂಥಗಳಿಗೆ ಭಾಷ್ಯವನ್ನು ಬರೆದಿರುವ ಮಧ್ವರು, ಅಷ್ಟ ಮಠಗಳನ್ನು ಸ್ಥಾಪಿಸಿ ಕೃಷ್ಣ ಪೂಜೆಯ ಪರ್ಯಾಯ ಪದ್ಧತಿಯ ಕಲ್ಪನೆಯನ್ನು ಕಾರ್ಯರೂಪಕ್ಕೆ ತಂದರು. ರಾಘವೇಂದ್ರ ಸ್ವಾಮಿಗಳು, ವಾದಿರಾಜ ಸ್ವಾಮಿಗಳು, ಅಲ್ಲದೆ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಇವರೆಲ್ಲರೂ ಸಮಾನತೆಯ ಪ್ರತಿಪಾದಕರಾಗಿ ಉದಾಹರಣೆಯಾಗಿ ನಮಗೆ ಕಾಣಿಸಿಕೊಳ್ಳುತ್ತಾರೆ. ಇದರ ಫಲವಾಗಿ ಇಂದಿಗೂ ಉಡುಪಿ ಕ್ಷೇತ್ರದಲ್ಲಿ ಸರ್ವರಿಗೂ ಅನ್ನ ಪ್ರಸಾದ ವಿತರಣೆಯಾಗುವ ಮೂಲಕ ಮಾದರಿ ಕ್ಷೇತ್ರವಾಗಿ ಬೆಳೆದಿದೆ. ಇದು ಇಸ್ಕಾನ್ ನಂತಹ ಸಂಸ್ಥೆಗಳಿಗೂ ಪ್ರೇರಣೆ ನೀಡಿದೆ. ಒಟ್ಟಿನಲ್ಲಿ ಮಧ್ವ ಸಂದೇಶ ಸರ್ವರಿಗೂ ಪ್ರೇರಣಾದಾಯಕವಾದುದು ಎಂದರು.ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿನ ಮಂಜು ಪ್ರಾಸಾದ ನಿಲಯದ ವಾದಿರಾಜ ಮಂಟಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಜಯದಶಮಿ ಪ್ರಯುಕ್ತ ವಿದ್ಯಾರಂಭ ಅಕ್ಷರಾಭ್ಯಾಸ ನಡೆಯಿತು.
ವೇದಮೂರ್ತಿ ಕದ್ರಿ ಪ್ರಭಾಕರ ಅಡಿಗ, ಹಿರಿಯ ಧಾರ್ಮಿಕ ನೇತಾರ ಬಿ.ಕೆ.ರಾಮಕೃಷ್ಣ ರಾವ್, ಪ್ರಭಾಕರ ರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ಸುಮಾ ಪ್ರಸಾದ್, ಶಶಿಪ್ರಭಾ ಐತಾಳ್, ಸುಮಿತ್ರಾ ಆಚಾರ್ ಮತ್ತಿತರರು ಇದ್ದರು.ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ದಯಾನಂದ ಕಟೀಲ್ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.