ಜಿಲೆಟಿನ್‌ ಕಡ್ಡಿ ಸಂಗ್ರಹ; ಎನ್ಐಎ ತಂಡ ಮಹಜರು

KannadaprabhaNewsNetwork |  
Published : Aug 20, 2026, 04:15 AM IST
ದಿನಸ,ಕಮಮೂಡ್, ಚೌಹಾಣ್ ತಾಂಡ ಸೇರಿದಂತೆ ಮೂರ್ನಾಲ್ಕು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ಕಸದ ರಾಶಿ ಬಿದ್ದಿರುವುದು. | Kannada Prabha

ಸಾರಾಂಶ

ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ದೇವರಹಿಪ್ಪರಗಿ ತಾಲೂಕಿನ ಯಾಳವಾರ ಹಾಗೂ ಪೊಲೀಸ್ ಠಾಣೆ ವ್ಯಾಪ್ತಿಯ ಬನಹಟ್ಟಿ ಪಿ.ಎ. ಗ್ರಾಮಗಳಿಗೆ ರಾಷ್ಟ್ರೀಯ ತನಿಖಾ ದಳದ(ಎನ್ಐಎ)ನ ಮೂರು ತಂಡಗಳು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ದೇವರಹಿಪ್ಪರಗಿ ತಾಲೂಕಿನ ಯಾಳವಾರ ಹಾಗೂ ಪೊಲೀಸ್ ಠಾಣೆ ವ್ಯಾಪ್ತಿಯ ಬನಹಟ್ಟಿ ಪಿ.ಎ. ಗ್ರಾಮಗಳಿಗೆ ರಾಷ್ಟ್ರೀಯ ತನಿಖಾ ದಳದ(ಎನ್ಐಎ)ನ ಮೂರು ತಂಡಗಳು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ದೇವರಹಿಪ್ಪರಗಿ ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾಲೂಕಿನ ಯಾಳವಾರ ಹಾಗೂ ಬನಹಟ್ಟಿ ಪಿ.ಎ. ಗ್ರಾಮದಲ್ಲಿ ಜಿಲೆಟಿನ್ ಕಡ್ಡಿಗಳ ಶೇಖರಣೆ ಮಾಡಿಟ್ಟ ಮದ್ದಿನ ಗೋದಾಮುಗಳಿಗೆ ಸ್ಥಳೀಯ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಸಹಾಯದೊಂದಿಗೆ ಭೇಟಿ ನೀಡಿ ಮಹಜರು ಮಾಡಿ ಪರಿಶೀಲನೆ ನಡೆಸಿದ್ದಾರೆ. ಎನ್ಐಎ ತಂಡದ ಭೇಟಿ ಹಾಗೂ ಪರಿಶೀಲನೆಯ ಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವೇಳೆ ಎನ್ಐಎ ತಂಡದ ಅಧಿಕಾರಿಗಳು ಹಾಗೂ ಸ್ಥಳೀಯ ಠಾಣೆಯ ಪಿಎಸ್ಐ ಅಜಯ ಪಾಟೀಲ, ಸಚಿನ್ ಆಲಮೇಲಕರ, ಸಿಪಿಸಿ ಸತೀಶ ಹಾಗೂ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳಾದ ಸಂಗಮೇಶ ಗವಡ್ಡಿ, ರಮಾನಂದ ಚಕ್ಕಡಿ ಸೇರಿ ಹಲವು ಜನರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲುಮತದವರೇ ಜಿಪಂ ಅಧ್ಯಕ್ಷರಾಗಲು ಎಂಬಿಪಾ ಕಾರಣ: ಸೋಮನಾಥ ಕಳ್ಳಿಮನಿ
ಮಾನವೀಯತೆಯೇ ಎಲ್ಲ ಧರ್ಮಗಳ ತಿರುಳು