ಪರವಾನಗಿ ಇಲ್ಲದೆ 30 ಟನ್ ಟೆಕ್ನಿಕಲ್ ಯೂರಿಯಾ ಸಾಗಾಣಿಕಾ ವಾಹನ ಜಪ್ತಿ

KannadaprabhaNewsNetwork |  
Published : Jun 06, 2025, 12:31 AM IST
ಪರವಾನಗಿ ಇಲ್ಲದೆ ಯೂರಿಯಾ ಸಾಗಾಣಿಕೆ – ವಾಹನ ಜಪ್ತಿ | Kannada Prabha

ಸಾರಾಂಶ

ನಿಯಮವನ್ನು ಉಲ್ಲಂಘಿಸಿ ಪರವಾನಗಿ ಇಲ್ಲದೆ ದೋಷಪೂರಿತ ದಾಖಲೆಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಬಳಸುವ ₹7,78,800 ಮೌಲ್ಯದ 30 ಟನ್ ಟೆಕ್ನಿಕಲ್ ಯೂರಿಯಾ ರಸಗೊಬ್ಬರವನ್ನು ಸಾಗಾಣಿಕೆ ಮಾಡುತ್ತಿದ್ದ ಸರಕು ವಾಹನ ಜಪ್ತಿ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುನಿಯಮವನ್ನು ಉಲ್ಲಂಘಿಸಿ ಪರವಾನಗಿ ಇಲ್ಲದೆ ದೋಷಪೂರಿತ ದಾಖಲೆಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಬಳಸುವ ₹7,78,800 ಮೌಲ್ಯದ 30 ಟನ್ ಟೆಕ್ನಿಕಲ್ ಯೂರಿಯಾ ರಸಗೊಬ್ಬರವನ್ನು ಸಾಗಾಣಿಕೆ ಮಾಡುತ್ತಿದ್ದ ಸರಕು ವಾಹನ ಜಪ್ತಿ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ. ನಗರದ ರಾಷ್ಟ್ರೀಯ ಹೆದ್ದಾರಿ ಕ್ಯಾತ್ಸಂದ್ರ ಜಾಸ್‌ಟೋಲ್ ಬಳಿ ಜಾಗೃತಿ ಕಾರ್ಯಕ್ರಮದಲ್ಲಿ ಪರಿಶೀಲಿಸಿದಾಗ ನಿಯಮ ಉಲ್ಲಂಘನೆ ಪ್ರಕರಣ ಬೆಳಕಿಗೆ ಬಂದಿದ್ದರಿಂದ ವಾಣಿಜ್ಯ ತೆರಿಗೆ ಅಧಿಕಾರಿ ನಾಗರಾಜು ಜಪ್ತಿ ಮಾಡಿ ಕೃಷಿ ಇಲಾಖೆ ಮಾಹಿತಿ ನೀಡಿದ್ದರು. ಮಾಹಿತಿಯನ್ನಾಧರಿಸಿ ಕೃಷಿ ಇಲಾಖೆ ಅಧಿಕಾರಿಗಳು ದಾಖಲೆಯನ್ನು ಪರಿಶೀಲಿಸಿ ಸರಕನ್ನು ವಿಶ್ಲೇಷಣೆಗಾಗಿ ಪ್ರಯೋಗಾಲಕ್ಕೆ ಕಳುಹಿಸಿದ್ದು, ಪ್ರಯೋಗಾಲಯದ ವರದಿಯಲ್ಲಿ ಸಾಗಾಣಿಕೆ ಮಾಡುತ್ತಿದ್ದ ರಸಗೊಬ್ಬರವು ಕಾರ್ಖಾನೆಗಳಿಗೆ ಬಳಸುವ ರಸಗೊಬ್ಬರವೆಂದು ತಿಳಿದು ಬಂದಿದೆ. ಪರವಾನಗಿ ಇಲ್ಲದೆ ಇಂತಹ ರಸಗೊಬ್ಬರವನ್ನು ಸರಬರಾಜು, ಸಾಗಾಣಿಕೆ, ವಿತರಣೆ ಮಾಡುವುದು ಅಪರಾಧ. ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದಿಂದ ಪರವಾನಗಿ ಹೊಂದಿರುವವರು ಮಾತ್ರ ರಸಗೊಬ್ಬರವನ್ನು ಸರಬರಾಜು ಮಾಡಬೇಕೆಂಬ ನಿಯಮವಿದ್ದು, ಜಪ್ತಿ ಮಾಡಿದ ರಸಗೊಬ್ಬರಕ್ಕೆ ಪರವಾನಗಿ ಹಾಗೂ ಸೂಕ್ತ ದಾಖಲೆಗಳನ್ನು ಹೊಂದಿಲ್ಲದೆ ಇದ್ದುದರಿಂದ ರಸಗೊಬ್ಬರದ ಸರಕು ವಾಹನವನ್ನು ಕೃಷಿ ಇಲಾಖೆ ವಶಕ್ಕೆ ಪಡೆಯಲಾಗಿದೆ. ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಹೆಚ್ಚಿನ ತನಿಖೆಗಾಗಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಜೂನ್ 3 ರಂದು ಪ್ರಕರಣವನ್ನು ದಾಖಲಿಸಲಾಗಿದೆ.ಜಪ್ತಿ ಕಾರ್ಯದಲ್ಲಿ ಸಹಾಯಕ ಕೃಷಿ ನಿರ್ದೇಶಕ ಅಶ್ವತ್ಥನಾರಾಯಣ ವೈ., ಪೊಲೀಸ್ ಇಲಾಖೆಯ ತನಿಖಾಧಿಕಾರಿ ಎಸ್.ಎಸ್.ಚೇತನ್ ಕುಮಾರ್ ಹಾಗೂ ಸಿಬ್ಬಂದಿ ಶಶಿಧರ್ ಎಸ್.ಎಲ್., ಮಂಜುನಾಥ ಎಲ್. ದೇವರಾಜ್, ಓಂಕಾರೇಶ್ವರ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ