ಪ್ರಕೃತಿ ಪೋಷಿಸದಿದ್ದರೆ ಜೀವವೈವಿಧ್ಯದ ಅಳಿವು: ಎಸ್.ಎಸ್. ಪಾಟೀಲ

KannadaprabhaNewsNetwork |  
Published : Jun 06, 2025, 12:25 AM IST
ಪೋಟೊ ಶಿರ್ಷಕೆ05 ಎಚ್ ಕೆ ಅರ್ 04  | Kannada Prabha

ಸಾರಾಂಶ

ಪರಿಸರ ಮಾನವನ ಹಾಗೂ ಭೂಮಿಯ ಮೇಲಿನ ಎಲ್ಲ ಜೀವಿಗಳ ರಕ್ಷಾ ಕವಚವಾಗಿದೆ. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಹಿರೇಕೆರೂರು: ವಿಶ್ವ ಪರಿಸರ ದಿನವು ಹವಾಮಾನ ಬದಲಾವಣೆ, ಮಾಲಿನ್ಯ, ಅರಣ್ಯನಾಶ ಮತ್ತು ಜೀವ ವೈವಿಧ್ಯದ ನಷ್ಟದಂತಹ ಪರಿಸರದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ದಿನವಾಗಿದೆ ಎಂದು ಸಿಇಎಸ್‌ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ತಿಳಿಸಿದರು.ಪಟ್ಟಣದ ಸಿಇಎಸ್ ವಿದ್ಯಾ ಸಂಸ್ಥೆಯ ತಂಬಾಕದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ, ರಸಾಯನಶಾಸ್ತ್ರ, ಭೂಗೋಳಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ಪರಿಸರ ಮಾನವನ ಹಾಗೂ ಭೂಮಿಯ ಮೇಲಿನ ಎಲ್ಲ ಜೀವಿಗಳ ರಕ್ಷಾ ಕವಚವಾಗಿದೆ. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರಕೃತಿಮಾತೆ ನಮ್ಮೆಲ್ಲರನ್ನು ಸಲಹುವ ಮಹಾತಾಯಿ. ಭೂಮಿಯು ಜಗತ್ತಿನ ಸಕಲ ಜೀವಿಗಳು ವಾಸಿಸುವ ವಿಶಾಲವಾದ ಮನೆಯಿದ್ದಂತೆ. ಪ್ರಕೃತಿಯನ್ನು ಪೋಷಿಸದೇ ಹೋದರೆ ನಮ್ಮ ಅಳಿವು ಶತಸಿದ್ಧ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಎಸ್.ಬಿ. ಚನ್ನಗೌಡ್ರ ಅವರು, ಅಭಿವೃದ್ಧಿ ನೆಪದಲ್ಲಿ ಸರ್ವನಾಶ ಮಾಡುತ್ತಿರುವ ಪರಿಸರವನ್ನು ಸಂರಕ್ಷಿಸದೇ ಹೋದರೆ ಜಾಗತಿಕ ತಾಪಮಾನ ಹೆಚ್ಚಾಗಿ ಪ್ರಕೃತಿಯಲ್ಲಿ ಅನೇಕ ವಿಕೋಪಗಳು ಉಂಟಾಗುತ್ತವೆ ಎಂದರು.

ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಉಪನ್ಯಾಸಕರಾದ ಸಿ.ಆರ್. ದೂದಿಹಳ್ಳಿ, ಕೀರ್ತಿವರ್ಮ ಕಾರಗಿ, ಸಾವಿತ್ರಮ್ಮ ಬಿ., ಲಿಂಗರಾಜ ಹಲವಾಲ, ವಿರುಪಾಕ್ಷಪ್ಪ ಎಸ್.ಕೆ., ಸತೀಶ ಲಮಾಣಿ, ಶಶಿಕುಮಾರ ಕಡೂರ, ಪ್ರವೀಣ ಅಂಗಡಿ ಇತರರು ಇದ್ದರು. ಉಪನ್ಯಾಸಕ ಆರ್.ಎಫ್. ದೊಡ್ಡಮನಿ ಸ್ವಾಗತಿಸಿದರು. ಲಿಂಗರಾಜ ಎಚ್. ವಂದಿಸಿದರು. ಹುಟ್ಟಿನಿಂದ ಸಾಯುವ ವರೆಗೂ ಕಾನೂನು ಅವಶ್ಯ: ಸುಭಾಸ ಸಾವುಕಾರ

ರಾಣಿಬೆನ್ನೂರು: ಹುಟ್ಟಿನಿಂದ ಸಾಯುವ ವರೆಗೂ ಕಾನೂನಿನ ಅವಶ್ಯಕತೆಯಿದ್ದು, ಕಾನೂನು ವೃತ್ತಿಯಲ್ಲಿ ತಾಳ್ಮೆ, ಜಾಣ್ಮೆಯ ಅವಶ್ಯಕತೆಯಿದೆ ಎಂದು ಆರ್‌ಟಿಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ ಸಾವುಕಾರ ತಿಳಿಸಿದರು.ನಗರದ ಆರ್‌ಟಿಇಎಸ್ ಕಾನೂನು ಮಹಾವಿದ್ಯಾಲಯದ ಸಭಾಭವನದಲ್ಲಿ ಏರ್ಪಡಿಸಿದ್ದ 2024- 25ನೇ ಸಾಲಿನ ತೃತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಆರ್‌ಟಿಇಎಸ್ ಪದವಿ ಕಾಲೇಜಿನ ಪ್ರಾ. ಸಿ.ಎ. ಹರಿಹರ ಮಾತನಾಡಿ, ಕಾನೂನು ವೃತ್ತಿ ಕೈಗೊಳ್ಳುವವರು ನಡವಳಿಕೆ, ನಂಬಿಕೆ, ಬದ್ಧತೆಯನ್ನು ಅಳವಡಿಸಿಕೊಳ್ಳುವುದು ಅತ್ಯಾವಶ್ಯಕ. ಕಷ್ಟ ಮತ್ತು ಸಮಸ್ಯೆಗಳಿಗೆ ದುಡಿಮೆ ಹಾಗೂ ತಾಳ್ಮೆ ಪರಿಹಾರವಾಗಿದೆ ಎಂದರು.

ಪ್ರಾ. ಬಿ. ರಮೇಶ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಬಿ.ಆರ್. ರುದ್ರೇಶ, ಶುಭಾಂಗಿ ದೇಶಪಾಂಡೆ, ರೇಣುಕಾ ಮರಡೂರ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸೀತಾ ಕೋಟಿ ಮಾತನಾಡಿದರು.

ಬಸವರಾಜ ಪಿ., ಸೌಜನ್ಯ, ಬಸವನಗೌಡ ಮೇಳಗಟ್ಟಿ, ಸುನೀಲಕುಮಾರ ಬೆಂದ್ರೆ, ವಿನಯ್ ಹುಲ್ಲತ್ತಿ, ಸತೀಶ, ಸುಧಾ, ಬಸವರಾಜ ಎಸ್., ನಂದೀಶ, ವೀರೇಶ, ಅಜೇಯ ಕೊಡ್ಲೆರ, ಸಂತೋಷ, ಆನಂದ ಬಡಿಗೇರ, ಎಂ.ಕೆ. ಕಮದೋಡ, ವಿಜಯಲಕ್ಷ್ಮಿ, ಅಕ್ಷತಾ ಸೊಪ್ಪಿನ, ಅರುಣ ಬಣಕಾರ, ಕೃತಿ ಎಂ.ಕೆ., ಸುಮಾ ಜಿ.ಜಿ., ಮಹಾವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ