ಕನ್ನಡಪ್ರಭ ವಾರ್ತೆ ಬಾಗಲಕೋಟೆಕನ್ನಡ ವೃತ್ತಿರಂಗಭೂಮಿ ಮೇರು ನಾಟಕಕಾರ ಪಿ.ಬಿ.ದುತ್ತರಗಿ ಅವರ ಹೆಸರಿನಲ್ಲಿ ರಚಿಸಲಾದ ಪಿ.ಬಿ.ದುತ್ತರಗಿ ಟ್ರಸ್ಟ್ ನಿಂದ ರಂಗಭೂಮಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಮಹನೀಯರನ್ನು 2022-23, 2023-24 ಹಾಗೂ 2024-25ನೇ ನೇ ಸಾಲಿನ ವಾರ್ಷಿಕ ಗೌರವ ಹಾಗೂ ರಂಗಗೌರವ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಪಿ.ಬಿ.ದುತ್ತರಗಿ ಟ್ರಸ್ಟ್ ನ ಸದಸ್ಯ ಕಾರ್ಯದರ್ಶಿ ಸಂತೋಷ ಭೋವಿ ತಿಳಿಸಿದ್ದಾರೆ.

2022-23ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ವಿರುಪಾಕ್ಷಪ್ಪ ಗಾಯದ ಆಯ್ಕೆಯಾದರೆ, ರಂಗಗೌರವ ಪ್ರಶಸ್ತಿಗೆ ಕುಸುಮಾ ಕಂದಗಲ್ಲ, ಅರುಣ ಕೃಷ್ಣಾಜಿ ಥೋರತ ಆಯ್ಕೆಯಾಗಿದ್ದಾರೆ. 2023-24ನೇ ಸಾಲಿಗೆ ವಾರ್ಷಿಕ ಗೌರವ ಪ್ರಶಸ್ತಿಗೆ ಬೆಬಿಜಾನ ಕಂದಗಲ್ಲ, ರಂಗಗೌರವ ಪ್ರಶಸ್ತಿಗೆ ಭೀಮರಾಯ ಭಂಡಾರಿ, ವೀರಭದ್ರಪ್ಪ ಬಡಿಗೇರ, 2024-25ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಅನಂತ ಬಬಲೇಶ್ವರ, ರಂಗಗೌರವ ಪ್ರಶಸ್ತಿಗೆ ಬಸವರಾಜ ಮಠ, ಬಂಗಾರೇವ್ವ ಚಿಮಲ ಆಯ್ಕೆಯಾಗಿದ್ದಾರೆ. ವಾರ್ಷಿಕ ಗೌರವ ಪ್ರಶಸ್ತಿ 25 ಸಾವಿರ ರೂ. ಹಾಗೂ ರಂಗಗೌವರ ಪ್ರಶಸ್ತಿ ₹ 10 ಸಾವಿರ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.