ಕಡೂರು: ಪಟ್ಟಣದ ಪ್ರತಿಷ್ಠಿತ ಹೈವೇ ಇಂಗ್ಲೀಷ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ರೋಹಿತ್ ಶ್ರೀವತ್ಸ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಶಾಲೆ ಮುಖ್ಯ ಶಿಕ್ಷಕ ಗಣೇಶ್ ತಿಳಿಸಿದರು. ವಿದ್ಯಾರ್ಥಿ ರೋಹಿತ್ ಶ್ರೀವತ್ಸ ಪಟ್ಟಣದ ನಿವಾಸಿ ಯಶೋಧರ ಹಾಗೂ ಚೈತ್ರ ದಂಪತಿ ಪುತ್ರನಾಗಿದ್ದು, ಜಿಲ್ಲಾ ಮಟ್ಟದಲ್ಲಿ ನಡೆದ ಚೆಸ್ ಪಂದ್ಯಾವಳಿಯಲ್ಲಿ ವಿದ್ಯಾರ್ಥಿ ರೋಹಿತ್ ಶ್ರೀವತ್ಸ ಮಾಡಿದ ಸಾಧನೆಗೆ ಶಾಲೆ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದು, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜಯಗಳಿಸುವಂತೆ ಶುಭಕೋದ್ದಾರೆ. 5ಕೆಕೆಡಿಯು2. ರೋಹಿತ್ ಶ್ರೀವತ್ಸ