ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರತಿವರ್ಷ ರಾಜ್ಯದಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಸೈನಿಕ, ಕಿತ್ತೂರು, ನವೋದಯ, ಆರ್‌ಎಂಎಸ್ ಸೇರಿ ಹತ್ತಾರು ಶಾಲೆಗಳಿಗೆ ಆಯ್ಕೆಯಾಗುವ ಎಕ್ಸಲಂಟ್ ಕೋಚಿಂಗ್ ಕ್ಲಾಸಿಸ್ ತನ್ನ ಸಾಧನೆಯನ್ನು ಮುಂದುವರಿಸಿದೆ. ೨೦೨೫-೨೬ ನೇ ಸಾಲಿಗೆ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ಶಾಲೆಯ ೬ನೇ ತರಗತಿಯ ಪ್ರವೇಶಕ್ಕಾಗಿ ನಡೆಸಿದ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ ೭೪ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಗುಣಮಟ್ಟದ ತರಬೇತಿ ನೀಡುವ ಮೂಲಕ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ನಮ್ಮ ಗೆಲುವಿನ ಯಾತ್ರೆ ಮುಂದುವರಿದಿರುವುದು ಸಂತಸ ತಂದಿದೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.ನಗರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಸೈನಿಕ ಶಾಲೆಯ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಿಂದ ಪಾಲಕರು ತಮ್ಮ ಮಕ್ಕಳನ್ನು ನಮ್ಮಲ್ಲಿ ತರಬೇತಿ ಪಡೆದಯುವುದಕ್ಕೆ ಕಳುಹಿಸುತ್ತಿದ್ದಾರೆ. ನಮ್ಮ ಸಂಸ್ಥೆಯೂ ಪಾಲಕರ ನಿರೀಕ್ಷೆ ಹುಸಿಗೊಳಿಸದೇ ಸದಾ ಧನಾತ್ಮಕ ಫಲಿತಾಂಶ ನೀಡುತ್ತಿದೆ. ಅದರ ಮುಂದುವರಿದ ಭಾಗವಾಗಿವೇ ಇಂದಿನ ಫಲಿತಾಂಶ. ಕೆಲವೇ ದಿನಗಳ ಹಿಂದೆ ರಾಷ್ಟ್ರೀಯ ಮಿಲಟರಿ ಶಾಲೆಯ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಈಗ ಬಂದಿರುವ ಫಲಿತಾಂಶ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಆದ್ದರಿಂದಲೇ ಮುಂದಿನ ದಿನಗಳಲ್ಲಿ ಪಾಲಕರ ನಿರೀಕ್ಷೆಗೆ ತಕ್ಕಂತೆ ಹೆಚ್ಚಿನ ತರಬೇತಿಯನ್ನು ನೀಡಿ ಮತ್ತಷ್ಟು ಮಕ್ಕಳು ಆಯ್ಕೆಯಾಗುವಂತೆ ಮಾಡಲಾಗುವುದು ಎಂದರು.
ವಿದ್ಯಾರ್ಥಿಗಳಾದ ದೀಪ್ತಿ.ಎನ್.ಹೋನ್ನಮನಿ, ಖುಷಿ.ಪಿ.ರಾಠೋಡ, ಭಕ್ತಿ.ಬಿ.ಬಿರಾದಾರ, ಸ್ಫೂರ್ತಿ.ಪಿ.ಶೇಡಬಳಕರ, ನಿಹಾರಿಕಾ.ಆರ್.ಮಾಲೋಜಿ, ನವ್ಯಾ ಎನ್.ಕೋಣ್ಣೂರ, ಶ್ರೇಯಾ.ಎಸ್.ತಳವಾರ, ವೈಷ್ಣವಿ.ಎಮ್.ಸಂಖ, ಅಕ್ಷರಾ.ವ್ಹಿ.ಕಂಠಿ, ಸಿಂಚನಾ.ಎ.ಮುನವಳ್ಳಿ, ಅನನ್ಯಾ.ಜೆ.ಬಸುತ್ಕರ, ಶ್ರೀನಿಧಿ.ಎಸ್.ಪತ್ತಾರ, ಶ್ರಾವಣಿ.ಎಸ್.ಸುಂಬದ, ಆರಾಧ್ಯಾ.ಎಮ್.ಪೂಜಾರಿ, ಶಾಂತಾ.ಬಿ.ಬಿರಾದಾರ, ಸಿಂಚನಾ.ಬಿ.ಹಿರೇಮಠ, ಆರಾಧ್ಯಾ.ಆರ್.ನಂದಗಾಂವಿ, ಪ್ರನೂಷಾ.ವ್ಹಿ.ಪಾಟೀಲ, ಸನ್ನಿಧಿ.ಎಮ್.ಪಾಟೀಲ, ನಿಧಿ.ಎಸ್.ಪಾಟೀಲ ಉತ್ತಮ ಅಂಕ ಪಡೆದು ಅತ್ತ್ಯುತ್ತಮ ಸಾಧನೆಗೈದಿದ್ದಾರೆ. ಆಡಳಿತ ಮಂಡಳಿಯ ಸರ್ವ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮಕ್ಕಳಿಗೆ ಶುಭಾಷಯಗಳನ್ನು ಕೋರಿದ್ದಾರೆ.