ಲಾಟರಿಯಿಂದ ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆ

KannadaprabhaNewsNetwork |  
Published : Jun 26, 2025, 01:32 AM IST
ಮನಗೂಳಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಆಶ್ರಯ ಯೋಜನೆಯ ಮನೆಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಪಾರದರ್ಶಕತೆಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಆಶ್ರಯ ಯೋಜನೆಯ ಮನೆಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಪಾರದರ್ಶಕತೆಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ಜರುಗಿದ ಆಶ್ರಯ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. 2021-22ನೇ ಸಾಲಿನ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಡಿ 750 ಹೆಚ್ಚುವರಿ ಮನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯಿರಬೇಕು. ವರ್ಗವಾರು ಆಯ್ಕೆಯಾಗಬೇಕು. 750 ವಸತಿ ಯೋಜನೆಯ ಮನೆಗಳಲ್ಲಿ 494 ಸಾಮಾನ್ಯ, 129 ಪರಿಶಿಷ್ಟ ಜಾತಿ, 52 ಪರಿಶಿಷ್ಟ ಪಂಗಡ ಹಾಗೂ 75 ಅಲ್ಪಸಂಖ್ಯಾತರಿಗೆ ಹಂಚಿಕೆಯಾಗಬೇಕು. ಈಗಾಗಲೇ 389 ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಇನ್ನುಳಿದ ಫಲಾನುಭವಿಗಳನ್ನು ವರ್ಗವಾರು ಆಯ್ಕೆ ಮಾಡಬೇಕು. ನಿಗದಿತ ಸಂಖ್ಯೆಯಂತೆ ವರ್ಗವಾರು ಫಲಾನುಭವಿಗಳ ಆಯ್ಕೆಯಾಗಬೇಕು ಎಂದು ಹೇಳಿದರು.175 ಅನರ್ಹ ಫಲಾನುಭವಿಗಳು ಎಂದು ಗುರುತಿಸಲಾಗಿದೆ. ಅವರನ್ನು ಹಿಂದಿನ ಠರಾವದಿಂದ ಕೈಬಿಡಲಾಗುವುದು. 750 ಹೆಚ್ಚುವರಿ ಮನೆಗಳ ಫಲಾನುಭವಿಗಳನ್ನು ಸ್ಥಳೀಯರನ್ನು ಆಯ್ಕೆ ಮಾಡಲಾಗುವುದು. ಸ್ಥಳೀಯ ವಾಸಸ್ಥಳದ ದಾಖಲೆ ನೀಡಬೇಕು. ಆಶ್ರಯ ಯೋಜನೆಯ ಮನೆಗಳ ಆಯ್ಕೆಯನ್ನು ನಿಗದಿ ಪಡಿಸಿದಂತೆ ವರ್ಗವಾರು ಪಾರದರ್ಶಕತೆಯಿಂದ ಆಯ್ಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.129 ಪರಿಶಿಷ್ಟ ಫಲಾನುಭವಿಗಳಲ್ಲಿ ಈಗಾಗಲೇ 65 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂಳಿದ 64 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ವಸತಿ ಯೋಜನೆಗಳ ಹಂಚಿಕೆಯಲ್ಲಿ ಶಾಸಕರು, ಪುರಸಭೆ ಅಧ್ಯಕ್ಷರಿಗೆ, ಅಧಿಕಾರಿಗಳಿಗೆ ಜವಾಬ್ದಾರಿಯಿದೆ. ಅಷ್ಟೇ ಸಾರ್ವಜನಿಕರ ಜವಾಬ್ದಾರಿಯಿದೆ. ನೋಟಿಫಿಕೇಶನ್‌ ಕರೆಯಲಾಗುವುದು. ಸರಿಯಾಗಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದರು.

ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಆಶ್ರಯ ಕಮೀಟಿ ಸದಸ್ಯರಾದ ಮಲ್ಲಿಕಾರ್ಜುನ ಸದುಗೋಳ, ಶೈಲಾ ಪೂಜಾರಿ, ಭೀಮಾಶಂಕರ ರೋಡಗಿ, ರಾಜಾಅಹ್ಮದ ಖೇಡ, ಮುಖ್ಯಾಧಿಕಾರಿ ಎಸ್.ರಾಜಶೇಖರ, ಹಿರಿಯ ಆರೋಗ್ಯ ನಿರೀಕ್ಷಕ ನಬಿರಸೂಲ ಉಸ್ತಾದ, ಅಧಿಕಾರಿ ಸಿದ್ದು ಅಂಗಡಿ, ಅಭಿಯಂತರ ದಯಾನಂದ ಇವಣಿ, ಸಚಿನ ಮೋರಟಗಿ, ಖ್ಯಾತಪ್ಪ ಕುಂಬಾರ, ದತ್ತಾತ್ರೇಯ ಹಳ್ಳಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ