ಕನ್ನಡಪ್ರಭ ವಾರ್ತೆ,
ತಾಲೂಕು ಕುರುಬರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಎರಡನೇ ಬಾರಿಗೆ ಸಂಘದ ಅಧ್ಯಕ್ಷರಾಗಿ ಎಸ್‌ಪಿಕೆ ಉಮೇಶ್ ಅವಿರೋಧವಾಗಿ ಆಯ್ಕೆಯಾದರು. ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂಘದ ಕಚೇರಿ ಸಭಾಂಗಣದಲ್ಲಿ
ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಚುನಾವಣಾಧಿಕಾರಿಯಾಗಿದ್ದ ಕೆ.ಎಂ. ತ್ಯಾಗರಾಜ್ ಪ್ರಸಾದ್ ಅವರು ಪದಾಧಿಕಾರಿಗಳ ಚುನಾವಣೆ ನಡೆಸಿ, ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಸಭೆಯಲ್ಲಿ ಸಂಘದ ೨೯ ಮಂದಿ ನಿರ್ದೇಶಕರು ಭಾಗವಹಿಸಿ, ಸಹಮತ ವ್ಯಕ್ತಪಡಿಸಿದರು.
ಸಮಾಜದ ಪ್ರತಿಯೊಬ್ಬರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸಹಕಾರ ಸಂಘವನ್ನು ರಚನೆ ಮಾಡಿ, ಆ ಮೂಲಕ ಅವರಿಗೆ ಸಾಲ ಸೌಲಭ್ಯಗಳನ್ನು ನೀಡಿ, ಉದ್ಯಮ ಹಾಗು ವ್ಯವಹಾರಗಳಲ್ಲಿ ಅವರನ್ನು ಆರ್ಥಿಕ ಪ್ರಗತಿಗೊಳಿಸುವುದು, ಕನಕ ಭವನ ಕಲ್ಯಾಣ ಮಂಟಪ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡುವುದು , ನಗರದ ಹೊರ ವಲಯದಲ್ಲಿರುವ ಶಿರಗಳ್ಳಿ ಲಕ್ಷೀದೇವಿ ದೇವಸ್ಥಾನ ಅಭಿವೃದ್ದಿ, ಸಮಾಜದ ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ. ರಾಜ್ಯದಲ್ಲಿಯೇ ಕುರುಬರ ಸಂಘ ಮಾದರಿಯನ್ನಾಗಿ ಮಾಡಲು ತಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಉಮೇಶ್ ತಿಳಿಸಿದರು. ಸಂಘದ ನೂತನ ಪದಾಧಿಕಾರಿಗಳ ವಿವರ : ಅಧ್ಯಕ್ಷರಾಗಿ ಎಸ್‌ಪಿಕೆ ಉಮೇಶ್, ಗೌರವ ಅಧ್ಯಕ್ಷರಾಗಿ ಹಳೇಪುರ ಬೆಳ್ಳೇಗೌಡ, ಉಪಾಧ್ಯಕ್ಷರಾಗಿ ಹೆಬಚಳ್ಳಿ ಜಿ. ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ಕೆ.ಪಿ. ನಾಗರಾಜು, ಸಹಕಾರ್ಯದರ್ಶಿ ಯಾಗಿ ಮಹದೇವಸ್ವಾಮಿ, ಖಜಾಂಚಿಯಾಗಿ ರಾಮಸಮುದ್ರದ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ ಗೋವಿಂದ, ಪ್ರಭು, ಕೆ. ಪುನೀತ್‌ಕುಮಾರ್, ಡಿ. ಮಂಜು, ಚನ್ನೇಗೌಡ, ರಾಜೇಶ್ ಅವರು ಅವಿರೋಧವಾಗಿ ಆಯ್ಕೆಯಾದರು. ಸಭೆಯಲ್ಲಿ ನೂತನ ನಿರ್ದೇಶಕರಾದ ಮರಿಸ್ವಾಮಿ, ಜಯರಾಮ್, ಎಂ.ಪಿ.ರಾಜು, ಬಿ. ಮಂಜು, ಶಿವಸ್ವಾಮಿ, ಉಷಾ ಎಸ್, ಜಿ.ನಟರಾಜು, ಕೆ.ಎಸ್.ಕುಮಾರ್, ಚಿಕ್ಕರಾಜು, ಎನ್.ಚಂದ್ರ, ಎಚ್.ಎಂ. ಶಿವಕುಮಾರ್, ಎಂ.ಮಹೇಶ್, ರೇವಣ್ಣ, ರಾಜೇಶ್ ಕೆ. ಬಂಗಾರೇಗೌಡ, ಪಿ. ಬಸವಣ್ಣ, ಮಹದೇವ್, ಶಿವಕುಮಾರ್, ಮಹದೇವಸ್ವಾಮಿ ಹಾಗೂ ಮಾಜಿ ಗೌರವ ಅಧ್ಯಕ್ಷ ಸೋಮಣ್ಣೇಗೌಡ ಮುಖಂಡರು ಹಾಗೂ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. -----------------------