ಕುಕನೂರು: ಮಹಿಳೆ ದೃಢ ಆತ್ಮವಿಶ್ವಾಸ ಹೊಂದಿದರೆ ಮುಂದಿನ ಪೀಳಿಗೆ ಸಹ ಸದೃಢ ಆತ್ಮವಿಶ್ವಾಸ ಹೊಂದಲು ಸಾಧ್ಯ ಎಂದು ಆರಾಮ್ ಸಂಸ್ಥೆ ಅಧ್ಯಕ್ಷೆ ಹಾಗೂ ಹೈ ಕೋರ್ಟ ವಕೀಲೆ ಮಮತಾ ರಾಯರಡ್ಡಿ ಹೇಳಿದರು.
ಮಹಿಳೆ ಅಂದರೆ ತಾಯಿ ಮತ್ತು ಮಗಳು ಮಾತ್ರವಲ್ಲ. ಮನೆ ಹಾಗೂ ಸಮಾಜದ ಭಾವನಾತ್ಮಕ ಶಕ್ತಿ.ಎಲ್ಲರಿಗಿಂತಲೂ ಮನೆಯಲ್ಲಿ ಮೊದಲು ಎದ್ದು ಎಲ್ಲರಿಗಿಂತಲೂ ನಂತರ ಮಲಗುವವಳು ಮಹಿಳೆ.ಅಷ್ಟು ಕೌಟುಂಬಿಕ ಜವಾಬ್ದಾರಿ ಮಹಿಳೆಯದ್ದು.ಅವಳ ಗುರುತು ಮನೆಯ ಸಮೃದ್ಧಿ ಎಂದರು.
ಮಹಿಳೆ ತಾಳ್ಮೆ, ಶಕ್ತಿ, ಸಂಯಮ,ಜವಾಬ್ದಾರಿಗಳ ಪ್ರತೀಕ. ತ್ಯಾಗ ಹಾಗೂ ತನ್ನ ಶಕ್ತಿಯಿಂದ ಮಹಿಳೆಯಲ್ಲಿ ನಾಯಕತ್ವ ಗುಣ ಸದಾ ಇರುತ್ತದೆ. ಕುಟುಂಬದ ಕಲಹ, ಮನಸ್ತಾಪ, ಸಾಮಾಜಿಕ ಪಿಡುಗು,ಟೀಕೆ ಮಹಿಳೆ ಎದುರಿಸಬೇಕಾಗುತ್ತದೆ. ಇಷ್ಟಾದರೂ ಸಹ ಸಮಾಜ ಅಡ್ಜಸ್ಟ್ ಮಾಡಿಕೊಳ್ಳಮ್ಮ ಎಂದು ಮಹಿಳೆಗೆ ಬುದ್ಧಿ ಹೇಳುತ್ತದೆ.ಗೃಹ ಹಿಂಸೆ, ಭಾವನಾತ್ಮಕ ಭಾರ,ಸಾಮಾಜಿಕ ಒತ್ತಡ, ಆರ್ಥಿಕ ಒತ್ತಡ ಮೆಟ್ಟಿ ಜೀವನದಲ್ಲಿ ಎಲ್ಲರನ್ನೂ ಸಲಹುವ ಆತ್ಮವಿಶ್ವಾಸ ಮಹಿಳೆಯದ್ದಾಗಿರುತ್ತದೆ.ಅಂತಹ ಮಹಿಳೆಯ ಆತ್ಮವಿಶ್ವಾಸ ಮುಂದಿನ ಪೀಳಿಗೆಯ ಸಹ ಸದೃಢ ಆಗಲು ಕಾರಣ ಆಗುತ್ತದೆ ಎಂದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಹಲವಾರು ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ 14 ಮಹಿಳೆಯರ ಸಾಧನೆ ಅನನ್ಯ. ಮಹಿಳೆ ಒಂದು ಶಕ್ತಿಯಾಗಿ ಕೆಲಸ ಮಾಡುತ್ತಾರೆ. ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಕಾರ್ಯಕ್ರಮ ಉದ್ಘಾಟಿಸಿದರು. ಕೆಪಿಸಿಸಿ ಸದಸ್ಯೆ ಗಿರಿಜಾ ಸಂಗಟಿ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫರೀದಾ ಬೇಗಂ, ಯಲಬುರ್ಗಾದ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಾವಿತ್ರಿ ಗೊಲ್ಲರ, ಪಪಂ ಅಧ್ಯಕ್ಷೆ ಲೀಲಾವತಿ ಮೂಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ದಿಶಾ ಸಮಿತಿ ಸದಸ್ಯೆ ನಂದಿತಾ ದಾನರಡ್ಡಿ, ಅಂಬಿಕಾ, ಸವಿತಾ ನಾಗರೆಡ್ಡಿ, ಭಾಗೀರಥಿ, ಪ್ರೇಮಾ ಮುದಗಲ್ಲ ಇತರರಿದ್ದರು.
ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಡೊಳ್ಳು ಕುಣಿತ, ಮಹಿಳಾ ಮಲ್ಲಗಂಭ, ಕಿನ್ನಾಳ ಕಲೆಯ ಪ್ರದರ್ಶನ ಹಾಗೂ ಇತರೆ ಕಲಾ ಪ್ರದರ್ಶನ ಜರುಗಿದವು.ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ, ಪಪಂ ಸದಸ್ಯ ರಾಮಣ್ಣ ಬಂಕದಮನಿ, ಪ್ರಶಾಂತ ಆರಬೆಳಿನ್, ಸಂಗಮೇಶ ಗುತ್ತಿ, ಶರಣಪ್ಪ ಗಾಂಜಿ, ಮಲ್ಲು ಜಕ್ಕಳಿ, ನಿಂಗಪ್ಪ ಗೊರ್ಲೆಕೊಪ್ಪ, ಸಂತೋಷ ಬೆಣಕಲ್ಲ, ಮಂಜುನಾಥ ಯಡಿಯಾಪೂರ, ಹೊನ್ನಪ್ಪ ಮರಡಿ ಇತರರಿದ್ದರು.