ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆತ್ಮವಿಶ್ವಾಸ ವೃದ್ಧಿ ಹಾಗೂ ಮನೋನಿರ್ವಹಣೆ ಎಂಬ ವಿಷಯದ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಿನಲ್ಲಿ ಬರೀ ಗೆಲವು ಕಂಡವನು ಎಂದೂ ಯಶಸ್ವಿಯಾಗಲಾರ. ಸೋತು ಗೆದ್ದವರು ಮಾತ್ರ ಯಶಸ್ವಿಯಾಗುತ್ತಾರೆ. ಆ ಸಾಧನೆಯ ಮಾರ್ಗದಲ್ಲಿ ಸಾಗುವಾಗ ನನ್ನಿಂದ ಎಲ್ಲವೂ ಸಾಧ್ಯ. ನಾನು ಅಂದುಕೊಂಡದ್ದನ್ನು ಮಾಡಿ ತೋರಿಸುತ್ತೇನೆ ಎನ್ನುವ ಛಲಮೂಡಿಸಿಕೊಳ್ಳಬೇಕು. ಸೋಲುತ್ತೇನೆಂಬ ಭಯವೂ ಇರಬಾರದು, ಸೋತೆನೆಂಬ ಹತಾಸೆಯು ಇರಬಾರದು. ಸೋತರು ಸರಿ ಮತ್ತೆ ಮತ್ತೆ ಯತ್ನಿಸಿ ಗೆಲ್ಲುತ್ತೇನೆಂಭ ಮನೋದಾರ್ಢ್ಯತೆ ಇರಬೇಕು. ಆಗ ಮಾತ್ರ ಯಶಸ್ಸು ಸಿಗುತ್ತದೆ. ಸ್ವಾಮಿ ವಿವೇಕಾನಂದರು ಹೇಳುವಂತೆ ನಕಾರಾತ್ಮ ವಿಚಾರಗಳನ್ನು ಸಕಾರಾತ್ಮಕ ಚಿಂತನೆಗಳ ಮೂಲಕ ಹೊಡೆದೋಡಿಸಬೇಕು. ವಿಚಾರಗಳು ಶುದ್ಧವಾಗಿದ್ದರೆ ಮನಸ್ಸು ಸಹ ನಿರ್ಮಲವಾಗುತ್ತದೆ. ಮನಸ್ಸು ನಿರ್ಮಲವಾದರೆ ಮನವೇ ಮಂದಿರವಾಗುತ್ತದೆ. ಆ ನಿಟ್ಟಿನಲ್ಲಿ ಬದಲಾವಣೆಯ ಪರ್ವಕ್ಕೆ ಮನಸ್ಸು ತೆರೆದುಕೊಳ್ಳಬೇಕು ಎಂದರು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ ಬಸವರಾಜ ಕೌಲಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪನ್ಯಾಸಕ ಮಂಡಳಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ನಿರೂಪಿಸಿದರು.