ಓದುವ ಮಕ್ಕಳಿಗೆ ಆತ್ಮಸ್ಥೈರ್ಯ ಬಹಳ ಮುಖ್ಯ: ಡಾ.ಎಚ್.ಕೃಷ್ಣ

KannadaprabhaNewsNetwork |  
Published : Mar 13, 2026, 01:45 AM IST
12ಕೆಎಂಎನ್ ಡಿ15 | Kannada Prabha

ಸಾರಾಂಶ

ಮಕ್ಕಳು ಹಣ ಸಂಪಾದನೆ ಮಾಡುವುದಕ್ಕಿಂತ ವಿದ್ಯೆ ಸಂಪಾದನೆ ಮಾಡುವ ಕಡೆಗೆ ಮುಂದಾಗಬೇಕು, ವಿದ್ಯೆ ಸಂಪಾದಿಸಿದ ವ್ಯಕ್ತಿ ಹಣವನ್ನು ಯಾವಾಗಬೇಕಾದರು ಸಂಪಾದನೆ ಮಾಡಬಹುದು. ಆದರೆ, ವಿದ್ಯೆ ಸಂಪಾಸದೆ ಹಣ ಸಂಪಾಸಿದರೆ ಮುಂದೆ ಎಂದಿಗೂ ವಿದ್ಯೆ ಸಂಪಾದಿಸಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಓದುವ ಮಕ್ಕಳಿಗೆ ಆತ್ಮಸ್ಥೈರ್ಯ ಬಹಳ ಮುಖ್ಯ. ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ಪಾಠ ಹೇಳಿಕೊಟ್ಟ ಶಿಕ್ಷಕರು ಮತ್ತು ಶಾಲೆಯನ್ನು ಸದಾ ಗೌರವಿಸಬೇಕು ಎಂದು ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹೇಳಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಕ್ಕಳಿಗೆ ಪದವಿ ವಿತರಣೆ ಹಾಗೂ ಶಾರದಾ ದೇವಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಜೀವನದಲ್ಲಿ ಶ್ರದ್ಧೆ, ಗುರುಗಳ ಮೇಲಿನ ಶಕ್ತಿ, ಮನಸ್ಥೈರ್ಯ ಬಹಳ ಮುಖ್ಯವಾಗುತ್ತದೆ. ಮನಸ್ಥೈರ್ಯ ಮಕ್ಕಳ ಓದಿನ ಗ್ರಹಿಕೆಗೆ ಬಹಳ ಸಹಕಾರಿ. ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮಾನವಾಗಿ ಎದುರಿಸಲು ಸಾಧ್ಯ ಎಂದರು.

ಮಕ್ಕಳು ಹಣ ಸಂಪಾದನೆ ಮಾಡುವುದಕ್ಕಿಂತ ವಿದ್ಯೆ ಸಂಪಾದನೆ ಮಾಡುವ ಕಡೆಗೆ ಮುಂದಾಗಬೇಕು, ವಿದ್ಯೆ ಸಂಪಾದಿಸಿದ ವ್ಯಕ್ತಿ ಹಣವನ್ನು ಯಾವಾಗಬೇಕಾದರು ಸಂಪಾದನೆ ಮಾಡಬಹುದು. ಆದರೆ, ವಿದ್ಯೆ ಸಂಪಾಸದೆ ಹಣ ಸಂಪಾಸಿದರೆ ಮುಂದೆ ಎಂದಿಗೂ ವಿದ್ಯೆ ಸಂಪಾದಿಸಲು ಸಾಧ್ಯವಿಲ್ಲ ಎಂದರು.

ಪ್ರತಿಯೊಂದು ಮಕ್ಕಳಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿಕೊಡುವುದು ಶಿಕ್ಷಕರು, ಶಾಲೆಗಳು ಹಾಗಾಗಿ ಓದಿದಂತಹ ಪ್ರತಿಯೊಬ್ಬರು ಓದಿದ ಶಾಲೆ ಮತ್ತು ಶಿಕ್ಷಕರನ್ನು ಗೌರವಿಸಬೇಕು, ಯಾವೊಬ್ಬ ಶಿಕ್ಷಕರು ಸಹ ಮಕ್ಕಳ ಯಶಸ್ಸು, ಶ್ರೇಯೋಭಿವೃದ್ಧಿ ಬಯಸಿ ಮಕ್ಕಳ ಶಿಕ್ಷಣಿಕ ಪ್ರಗತಿ ಸಾಧನೆಗೆ ಸಹಕಾರಿಯಾಗಲಿದ್ದಾರೆ ಎಂದರು.

ಶಿಕ್ಷಣ ಸಂಸ್ಥೆಯನ್ನು ಕಟ್ಟಿ ನಡೆಸೋದು ಬಹಳ ಕಷ್ಟ. ಈ ನಡುವೆ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರು ಬಿಜಿಎಸ್ ಶಿಕ್ಷಣ ಸಂಸ್ಥೆ ಕಟ್ಟಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಎಂದು ಬಣ್ಣಿಸಿದರು.

ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಉದ್ದೇಶದಿಂದ ಬಿಜಿಎಸ್ ಶಿಕ್ಷಣ ಸಂಸ್ಥೆಯೂ ಆರಂಭಿಸಿ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಈ ವೇಳೆ ಪ್ರಾಂಶುಪಾಲರು ರಘು ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರಾಶ್ರಿತರಿಗೆ ವಾತ್ಸಲ್ಯ ತುಂಬುವ ಕೆಲಸವಾಗಬೇಕು: ಮಲ್ಲಿಕಾರ್ಜುನ್
ಹಾವಿನಮಾರನಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ಧ ಪ್ರತಿಭಟನೆ