ಕನ್ನಡಪ್ರಭ ವಾರ್ತೆ ಬೆಂಗಳೂರು
ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದೆ. ಬುಧವಾರದಿಂದ ಆರಂಭವಾಗಿರುವ ಸ್ವಯಂ ಗಣತಿ ಏ. 15ರವರೆಗೆ ನಡೆಯಲಿದೆ. ಸಾರ್ವಜನಿಕರು ಅಧಿಕೃತ ವೆಬ್‌ಸೈಟ್ www.se.census.gov.in ಮೂಲಕ ತಮ್ಮ ಮಾಹಿತಿ ಹಂಚಿಕೊಳ್ಳಬಹುದು. ಮೊದಲ ದಿನವಾದ ಬುಧವಾರದ ಮಧ್ಯಾಹ್ನದ 3 ಗಂಟೆ ವೇಳೆಗೆ 23,000ಕ್ಕೂ ಹೆಚ್ಚಿನ ಮಂದಿ ಸ್ವಯಂ ಗಣತಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಿದ್ದು, 12 ಸಾವಿರಕ್ಕೂ ಹೆಚ್ಚಿನ ಮಂದಿ ತಮ್ಮ ಮಾಹಿತಿ ಸಲ್ಲಿಸಿದ್ದಾರೆ. ಸ್ವಯಂ ಗಣತಿ ಆರಂಭವಾಗಿರುವ ಎಂಟು ರಾಜ್ಯಗಳ ಪೈಕಿ ರಾಜ್ಯದಲ್ಲಿ ಅತಿಹೆಚ್ಚು ಮಂದಿ ಸ್ವಯಂ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ಹೇಗಿರಲಿದೆ ಸ್ವಯಂ ಗಣತಿ?:ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳಲು ಜನ ಅಧಿಕೃತ ವೆಬ್‌ಸೈಟ್ www.se.census.gov.inಗೆ ಭೇಟಿ ನೀಡಿ ಮೊದಲಿಗೆ ತಮ್ಮ ರಾಜ್ಯವನ್ನು ಆಯ್ಕೆ ಮಾಡಬೇಕು. ನಂತರ ಮನೆ ಯಜಮಾನರು, ಮೊಬೈಲ್ ಸಂಖ್ಯೆ ನಮೂದಿಸಬೇಕು. ನಮೂದಿಸಲಾದ ಮೊಬೈಲ್ ಸಂಖ್ಯೆಗೆ ಒನ್ ಟೈಂ ಪಾಸ್‌ವರ್ಡ್ (ಒಟಿಪಿ) ಬರಲಿದ್ದು, ಅದನ್ನು ದಾಖಲಿಸಿದ ನಂತರ ಮುಂದಿನ ಹಂತದ ಪ್ರಕ್ರಿಯೆಗೆ ಮುಂದುವರಿಯಬಹುದಾಗಿದೆ.
ಹೀಗೆ ಸ್ವಯಂ ಗಣತಿ ಮಾಡಿದ ಕುರಿತು ಏ.16ರಿಂದ ಆರಂಭವಾಗಲಿರುವ ಮನೆಮನೆ ಗಣತಿ ಪ್ರಕ್ರಿಯೆ ವೇಳೆ ಗಣತಿದಾರರು ಮನೆಗೆ ಬಂದಾಗ ಮಾಹಿತಿ ಹಂಚಿಕೊಳ್ಳಬೇಕಿದೆ. ಅಲ್ಲಿ ಏನಾದರೂ ಮಾಹಿತಿ ಬದಲಿಸಬೇಕೆಂದರೆ ಅದನ್ನು ಗಣತಿದಾರರಿಗೆ ತಿಳಿಸಿ, ತಮ್ಮ ಯುನಿಕ್ ಐಡಿ ಸಂಖ್ಯೆ ನೀಡಬೇಕಿದೆ. ಅವರು ಅದನ್ನು ಪಡೆದು ಮಾಹಿತಿಯನ್ನು ಬದಲಿಸಲಿದ್ದಾರೆ.16 ಭಾಷೆಯಲ್ಲಿ ಸ್ವಯಂ ಗಣತಿ: