ಸಹಕಾರ ಸಂಘದಿಂದ ಸ್ವಾವಲಂಬಿ: ಶಾಸಕ ಎ.ಆರ್.ಕೃಷ್ಣಮೂರ್ತಿ

KannadaprabhaNewsNetwork | Published : Sep 14, 2024 1:45 AM

ಸಾರಾಂಶ

ಸಹಕಾರ ಸಂಘಗಳಿಂದ ಇದರ ಸದಸ್ಯರು ಇದರಿಂದ ಲಭಿಸುವ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗಕ್ಕೆ ಬಳಸಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು. ಯಳಂದೂರಿನಲ್ಲಿ ಕೃಷಿ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು.

ಕೃಷಿ ಸಹಕಾರ ಸಂಘಕ್ಕೆ ಚಾಲನೆ

ಯಳಂದೂರು: ಸಹಕಾರ ಸಂಘಗಳಿಂದ ಇದರ ಸದಸ್ಯರು ಇದರಿಂದ ಲಭಿಸುವ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗಕ್ಕೆ ಬಳಸಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.

ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಸಹಕಾರ ಸಂಘಗಳು ಉತ್ತಮವಾಗಿ ನಿರ್ವಹಿಸಲ್ಪಡುತ್ತಿದ್ದು ಕೋಟ್ಯಂತರ ರು. ವ್ಯವಹಾರವನ್ನು ನಡೆಸುತ್ತಿದೆ. ಅನೇಕರು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಯರಗಂಬಳ್ಳಿ ಗ್ರಾಮದಲ್ಲಿ 16 ಕೋಮುಗಳಿದ್ದು ಎಲ್ಲರೂ ಜೊತೆಗೂಡಿ ಒಂದು ಸಹಕಾರವನ್ನು ಸ್ಥಾಪಿಸಿರುವುದು ಉತ್ತಮ ಬೆಳವಣಿಗೆ. ಕೆ.ದೇವರಹಳ್ಳಿ, ದಾಸನಹುಂಡಿ, ಗಂಗವಾಡಿ ಗ್ರಾಮಗಳು ಒಳಪಟ್ಟಿದ್ದು ಎಲ್ಲರೂ ಇದನ್ನು ಉತ್ತಮವಾಗಿ ನಿರ್ವಹಿಸಿ ಸಹಕಾರ ಧುರೀಣರಾಗಬೇಕು ಎಂದು ಸಲಹೆ ನೀಡಿದರು.

ಸಹಕಾರ ಸಂಘಕ್ಕೆ 5 ಲಕ್ಷ ರು. ಅನುದಾನವನ್ನು ನೀಡಲಾಗುವುದು. ಗುಂಬಳ್ಳಿ ಗ್ರಾಮದಿಂದ ಯರಗಂಬಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿಗೆ ಗಣಿ ಮತ್ತು ಭೂ ವಿಜ್ಞಾನ ನಿಧಿಯಿಂದ 75 ಲಕ್ಷ ರು. ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

ಸಹಕಾರ ಸಂಘಗಳ ಉಪ ನಿಬಂಧಕಿ ಜ್ಯೋತಿ ಅರಸ್, ಸಂಘದ ಅಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ಡಿ.ಸಿ. ಕುಮಾರ್ ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಮುಖ್ಯ ಪ್ರವರ್ತಕ ಡಿ. ಪರಶಿವಮೂರ್ತಿ ಗ್ರಾಪಂ ಅಧ್ಯಕ್ಷ ಭಾಗ್ಯಮ್ಮ, ಉಪಾಧ್ಯಕ್ಷೆ ಶಾಂತಮ್ಮ, ಸಹಕಾರ ಸಂಘಗಳ ಉಪ ನಿಬಂಧಕಿ ಶೋಭಾ, ಸಹಕಾರ ಅಭಿವೃದ್ಧಿ ಅಧಿಕಾರಿ ಸುಭಾಷಿಣಿ, ಎಪಿಎಂಸಿ ಸದಸ್ಯ ಮಹೇಶ್, ಡಿ.ಸಿ. ಬಾಬು ಪಿಡಿಒ ಮಂಜುನಾಥ್, ಪ್ರಭಾರ ಇಒ ಮಲ್ಲಣ್ಣ ನಿರ್ದೇಶಕರಾದ ಕೆ. ವಿರೂಪಾಕ್ಷ, ಎಸ್. ರವಿಚಂದ್ರ, ಗೋವಿಂದೇಗೌಡ, ತ್ಯಾಗರಾಜು, ಹರೀಶ್, ಕೃಷ್ಣಮೂರ್ತಿ, ಮಣಿಕಂಠ, ಕುಸುಮ, ಕಮಲಮ್ಮ ಗ್ರಾಪಂ ಸದಸ್ಯರಾದ ಸಿದ್ಧರಾಜು, ಮಲ್ಲಿಕಾರ್ಜುನಸ್ವಾಮಿ, ಶೋಭಾ ಇದ್ದರು.

Share this article