ಮಹಿಳೆಗೆ ಸ್ವಾವಲಂಬಿ ಬದುಕೇ ನೈಜ ಗ್ಯಾರಂಟಿ: ಸಂಸದ

KannadaprabhaNewsNetwork |  
Published : May 13, 2026, 12:15 AM IST
ಸಿಕೆಬಿ-2 ನಗರಹೊರವಲಯ ಜಿಲ್ಲಾಡಳಿತ ಭವನದ ಸಂಸದ ಕಚೇರಿಯಲ್ಲಿ ಜಿಲ್ಲೆಯ ''ಸಂಜೀವಿನಿ'' ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ಸಂಸದ ಡಾ.ಕೆ.ಸುಧಾಕರ್ ರನ್ನು ಭೇಟಿ ಮಾಡಿ ಅಕ್ಕ ತಿನಿಸುಗಳ ಬಗ್ಗೆ ಮಾಹಿತಿ ಹಂಚಿಕೊಂಡರು | Kannada Prabha

ಸಾರಾಂಶ

ಇಂದು ಎಲ್ಲೆಡೆ ಗ್ಯಾರಂಟಿಗಳ ಬಗ್ಗೆಯೇ ಮಾತು. ಆದರೆ ನನ್ನ ಪ್ರಕಾರ, ಒಬ್ಬ ಮಹಿಳೆಗೆ ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ನೀಡುವುದು ಮತ್ತು ಆಕೆಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಾವು ನೀಡಬಹುದಾದ ಅತ್ಯಂತ ದೊಡ್ಡ ಮತ್ತು ಶಾಶ್ವತವಾದ ಗ್ಯಾರಂಟಿ

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಇಂದು ಎಲ್ಲೆಡೆ ಗ್ಯಾರಂಟಿಗಳ ಬಗ್ಗೆಯೇ ಮಾತು. ಆದರೆ ನನ್ನ ಪ್ರಕಾರ, ಒಬ್ಬ ಮಹಿಳೆಗೆ ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ನೀಡುವುದು ಮತ್ತು ಆಕೆಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಾವು ನೀಡಬಹುದಾದ ಅತ್ಯಂತ ದೊಡ್ಡ ಮತ್ತು ಶಾಶ್ವತವಾದ ಗ್ಯಾರಂಟಿ ಎಂದು ಸಂಸದ ಡಾ.ಕೆ. ಸುಧಾಕರ್ ಹೇಳಿದರು.

ನಗರ ಹೊರವಲಯ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಜಿಲ್ಲೆಯ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ಸಂಸದರನ್ನು ಭೇಟಿ ಮಾಡಿ ಅಕ್ಕ ತಿನಿಸುಗಳ ಬಗ್ಗೆ ಮಾಹಿತಿ ಹಂಚಿಕೊಂಡ ನಂತರ ಅವರು ಮಾತನಾಡಿದರು.

''''''''ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳು'''''''' ಈ ಬ್ರ‍್ಯಾಂಡ್ ಅಡಿಯಲ್ಲಿ ನಮ್ಮ ಜಿಲ್ಲೆಯ ವಿಶಿಷ್ಟ ದೇಸಿ ತಿಂಡಿಗಳಾದ ಚಿಂತಾಮಣಿಯ ಖಾರದ ಕಡಲೆಕಾಯಿ ಬೀಜ, ಪೆರೇಸಂದ್ರದ ಗರಿಗರಿಯಾದ ಚಕ್ಕುಲಿ, ಕೋಡುಬಳೆ ಮತ್ತು ನಿಪ್ಪಟ್ಟುಗಳು, ಆರೋಗ್ಯದಾಯಕವಾದ ರಾಗಿ ಲಾಡು, ಬೆಲ್ಲದ ಕೊಬ್ಬರಿ ಮಿಠಾಯಿ. ಹೀಗೆ ಅನೇಕ ಸ್ವಾದಿಷ್ಟ ತಿನಿಸುಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಶುಚಿಯಾಗಿ ಪ್ಯಾಕ್ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಅಕ್ಕ ತಂಡದ ಸಹೋದರಿಯರ ಮುಖದಲ್ಲಿ ಅಪ್ರತಿಮ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ. ಅವರು ಪ್ರೀತಿಯಿಂದ ತಯಾರಿಸಿರುವ ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳು ಎಂಬ ಉತ್ಪನ್ನಗಳ ಬ್ರ‍್ಯಾಂಡಿಂಗ್ ಮತ್ತು ಗುಣಮಟ್ಟವನ್ನು ಕಂಡು ಅಚ್ಚರಿ ಮತ್ತು ಸಂತೋಷ ಎರಡೂ ಆಯಿತು. ದಿನನಿತ್ಯದ ಸ್ನ್ಯಾಕ್ಸ್ ಗಾಗಿ, ಹಬ್ಬ-ಹರಿದಿನಗಳಲ್ಲಿ ಅಥವಾ ಅತಿಥಿಗಳಿಗೆ ನೀಡುವ ಉಡುಗೊರೆಗಳಲ್ಲಿ ಇಂತಹ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವುದರಿಂದ ಈ ಮಹಿಳಾ ಸಂಘಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ಸಿಗಲಿದೆ ಎಂದು ಸಂಸದರು ತಿಳಿಸಿದರು.

ಈ ವೇಳೆ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು. ಸಾರ್ವಜನಿಕರು ಇದ್ದರು.

ವೋಕಲ್ ಫಾರ್ ಲೋಕಲ್ ಕರೆ ಪ್ರೋತ್ಸಾಹಿಸೋಣ:

ಪ್ರಧಾನಿ ಮೋದಿ ಅವರು ನೀಡಿರುವ ವೋಕಲ್ ಫಾರ್ ಲೋಕಲ್ ಕರೆಯಂತೆ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸೋಣ. ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಎನ್‌ಆರ್‌ ಎಲ್‌ಎಂ-ಅಜೀವಿಕಾ ಯೋಜನೆಯಡಿ ತರಬೇತಿ ಪಡೆದು, ಇಂದು ಉದ್ಯಮಿಗಳಾಗಿ ಬೆಳೆಯುತ್ತಿರುವ ಈ ಸೋದರಿಯರ ಬೆನ್ನಿಗೆ ನಾವೆಲ್ಲರೂ ನಿಲ್ಲೋಣ. ಇವರ ಈ ಪರಿಶ್ರಮಕ್ಕೆ ಮಾರುಕಟ್ಟೆ ಕಲ್ಪಿಸಿಕೊಡಲು ಕೈಜೋಡಿಸೋಣ. ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ಕ್ರಿಯಾಶೀಲರಾಗಿ ಇಂತಹ ಅದ್ಭುತ ಕೆಲಸ ಮಾಡುತ್ತಿರುವ ಎಲ್ಲಾ ಸಾಧಕ ಮಹಿಳೆಯರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಈ ಸಾಧನೆ ಇಡೀ ಸಮಾಜಕ್ಕೆ ಸ್ಫೂರ್ತಿಯಾಗಲಿ ಎಂದು ಸಂಸದ ಸುಧಾಕರ್‌ ಹಾರೈಸಿದರು.

ಸಿಕೆಬಿ-2

ನಗರಹೊರವಲಯ ಜಿಲ್ಲಾಡಳಿತ ಭವನದ ಸಂಸದ ಕಚೇರಿಯಲ್ಲಿ ಜಿಲ್ಲೆಯ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ಸಂಸದ ಡಾ.ಕೆ. ಸುಧಾಕರ್ ಅವರನ್ನು ಭೇಟಿ ಮಾಡಿ ಅಕ್ಕ ತಿನಿಸುಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಧನೆಯಷ್ಟೇ ಅಲ್ಲ, ಸಾರ್ಥಕ ಸೇವೆಯ ಸಮರ್ಪಣೆ
ಸಾಂಸ್ಕೃತಿಕ ಮನಸ್ಸು ಇಲ್ಲದಿರುವುದೇ ಯುದ್ಧಕ್ಕೆ ಕಾರಣ