10ರಂದು ಸಂವಿಧಾನ, ನೈತಿಕತೆ ವಿಚಾರ ಸಂಕಿರಣ

KannadaprabhaNewsNetwork |  
Published : Mar 08, 2024, 01:53 AM IST
ಸಂವಿಧಾನ, ನೈತಿಕತೆ ಹಾಗೂ ಮಾನವ ಹಕ್ಕುಗಳ ವಿಚಾರ ಸಂಕಿರಣ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಬಾಗಲಕೋಟೆ ಜಿಲ್ಲೆಯ ರಾಷ್ಟ್ರೀಯ ಸಂಚಾಲಕ ಶಿವರಾಯಪ್ಪ ಜೋಗಿನ ಮತ್ತು ಇನ್ನಿತರರು | Kannada Prabha

ಸಾರಾಂಶ

ಬಾಗಲಕೋಟೆ: ಸಂವಿಧಾನ, ನೈತಿಕತೆ ಹಾಗೂ ಮಾನವ ಹಕ್ಕುಗಳ ವಿಚಾರ ಸಂಕಿರಣವು ಬಾಗಲಕೋಟೆಯ ನವನಗರದ ಡಾ.ಅಂಬೇಡ್ಕರ್ ಭವನದಲ್ಲಿ ಮಾ.10 ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಮೃದ್ಧ ಭಾರತ ಕರ್ನಾಟಕ ಬಾಗಲಕೋಟೆ ಜಿಲ್ಲೆಯ ರಾಷ್ಟ್ರೀಯ ಸಂಚಾಲಕ ಶಿವರಾಯಪ್ಪ ಜೋಗಿನ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಂವಿಧಾನ, ನೈತಿಕತೆ ಹಾಗೂ ಮಾನವ ಹಕ್ಕುಗಳ ವಿಚಾರ ಸಂಕಿರಣವು ಬಾಗಲಕೋಟೆಯ ನವನಗರದ ಡಾ.ಅಂಬೇಡ್ಕರ್ ಭವನದಲ್ಲಿ ಮಾ.10 ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಮೃದ್ಧ ಭಾರತ ಕರ್ನಾಟಕ ಬಾಗಲಕೋಟೆ ಜಿಲ್ಲೆಯ ರಾಷ್ಟ್ರೀಯ ಸಂಚಾಲಕ ಶಿವರಾಯಪ್ಪ ಜೋಗಿನ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸುವರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಎಸ್.ಆರ್.ಪಾಟೀಲ, ಎಸ್.ಜಿ ನಂಜಯ್ಯನಮಠ ಉದ್ಘಾಟಿಸುವರು. ನಿವೃತ್ತ ನ್ಯಾಯಮೂರ್ತಿ, ಸರ್ವೋಚ್ಚ ನ್ಯಾಯಾಲಯ ಹಾಗೂ ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆ, ವಿಶ್ರಾಂತ ಉಪಕುಲಪತಿ ಮಲ್ಲಿಕಾ ಘಂಟಿ, ಸಂಸದ ಪಿ.ಸಿ.ಗದ್ದಿಗೌಡರ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಪಿ.ಎಚ್.ಪೂಜಾರ, ಸಿದ್ದು ಸವದಿ, ಜಗದೀಶ ಗುಡಗುಂಟಿ, ಭೀಮಸೇನ ಚಿಮ್ಮನಕಟ್ಟಿ, ಹಣಮಂತ ನಿರಾಣಿ, ಅಜಯಕುಮಾರ ಸರನಾಯಕ, ಆನಂದ ನ್ಯಾಮಗೌಡ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಎಸ್ಪಿ ಅಮರನಾಥ ರೆಡ್ಡಿ, ಸಿದ್ದು ಕೊಣ್ಣೂ ರ ಭಾಗವಹಿಸುವರು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ದನಗೌಡಾ ಪಾಟೀಲ, ರಾಜು ಮನ್ನಿಕೇರಿ, ಶ್ರವಣ ಖಾತೇದಾ ರ, ಭೀಮನಗೌಡ ಭಜಣ್ಣವರ, ಜಮ್ಮಿರ್ ಗಲಗಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!