ಹಿರಿಯ ನಾಗರಿಕರಿಗೆ ಸಮ್ಮಾನಗಳು ದೊರೆಯಬೇಕು

KannadaprabhaNewsNetwork |  
Published : Oct 09, 2026, 01:15 AM IST
59 | Kannada Prabha

ಸಾರಾಂಶ

ಹಿರಿಯರ ಅನುಭವದ ಮಾತುಗಳು ಮತ್ತು ಜೀವನಶೈಲಿ ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗುತ್ತಿದೆ

ಕನ್ನಡಪ್ರಭ ವಾರ್ತೆ ಹುಣಸೂರುಹಿರಿಯ ನಾಗರಿಕರಿಗೆ ಸಲ್ಲಬೇಕಾದ ಮೌಲಿಕಯುಕ್ತ ಸಮ್ಮಾನಗಳು ಹಾಗೂ ಗೌರವಗಳು ಯಾವಾಗಲೂ ಲೋಪವಾಗದಂತೆ ದೊರೆಯಬೇಕು ಎಂದು ಸಿವಿಲ್ ಪ್ರಧಾನ ನ್ಯಾಯಾಧೀಶೆ ಅನಿತಾ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲ ಚೇತನರ ಸಬಲಿಕರಣ ಇಲಾಖೆ, ತಾಲೂಕು ಕಾನೂನುಸೇವಾ ಸಮಿತಿ ವಕಿಲರ ಸಂಘ, ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹಿರಿಯರ ಅನುಭವದ ಮಾತುಗಳು ಮತ್ತು ಜೀವನಶೈಲಿ ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗುತ್ತಿದೆ ಎಷ್ಟೇ ತಂತ್ರಜ್ಞಾನ ಮುಂದುವರೆದರು ಗತಕಾಲದ ಹಿರಿಯ ನಾಗರಿಕರ ಓದು ಮತ್ತು ಜ್ಞಾನಕ್ಕೆ ಸರಿಸಾಟಿ ಇಲ್ಲ, ಆದರೆ ಅಂತಹ ಜ್ಞಾನ ದೀವಿಟಿಗೆಗಳಿಗೆ ಇಂದು ಸಲ್ಲಬೇಕಾದ ಗೌರವ ಮತ್ತು ಸೌಕರ್ಯಗಳು ಸಿಗುತ್ತಿಲ್ಲ ಯಾವ ನಾಗರಿಕರು ಎಂದರೆ ಹಿರಿಯ ನಾಗರಿಕರು ತಮ್ಮ ವೃದ್ಧಾಪ್ಯದಲ್ಲಿ ಮಕ್ಕಳ ಹಾಗೂ ಮೊಮ್ಮಕ್ಕಳ ಜೊತೆಯಲ್ಲಿ ಆನಂದವಾಗಿ ಕಾಲ ಕಳೆಯಬೇಕಾಗಿತ್ತು ಅಂತವರು ಇಂದು ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಲ್ಲಿ ಬದುಕುತ್ತಿರುವುದು ಶೋಚನಿಯ ಸಂಗತಿ ಎಂದರು.ವಕೀಲರ ಸಂಘದ ಅಧ್ಯಕ್ಷ ಶಂಕರೇಗೌಡ ಮಾತನಾಡಿ, ಹಿರಿಯ ನಾಗರಿಕರಿಗೆ ನಾವು ನಡೆದುಕೊಳ್ಳುತ್ತಿರುವ ರೀತಿ ರಿವಾಜುಗಳು ಸ್ವಲ್ಪ ಒಪ್ಪುವಂತದ್ದಲ್ಲ, ಅವರಿಗೆ ಅವಕಾಶಗಳನ್ನು ನೀಡಬೇಕು ಅವರು ಸ್ವತಂತ್ರರಾಗಿ ಬದುಕುವ ಯಾವುದೇ ಹಕ್ಕುಗಳನ್ನ ಕಿತ್ತುಕೊಳ್ಳುವಂತಹ ಪರಿಸ್ಥಿತಿ ಬರಬಾರದು ಎಂದು ತಿಳಿಸಿದರು.ಸರ್ಕಾರಿ ಸಹಾ ಅಭಿಯೋಜಕಿ ಪಾರ್ವತಿ, ಎಸಿಡಿಪಿಓ ಸೋಮಯ್ಯ, ಮಾತನಾಡಿದರು. ತಾಪಂ ಕಾರ್ಯನಿರ್ವಾಹಕ ಹೊಂಗಯ್ಯ ಅಧ್ಯಕ್ಷತೆ ವಹಿಸಿದ್ದರು.ದೇವರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಸರ್ಕಾರಿ ಸಹ ಅಭಿಯೋಜಕಿ ಪಾರ್ವತಿ, ವಕೀಲ ಸಂಘದ ಅಧ್ಯಕ್ಷ ಶಿವಣ್ಣಗೌಡ, ಪ್ಯಾನಲ್ ವಕೀಲ ಶಂಕರೇಗೌಡ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಎಸ್ಸೆಸ್ಸೆಕೆ ಪುನಶ್ಚೇತನಕ್ಕೆ ಕೃಷಿಕ ಸಮಾಜ ಆಗ್ರಹ
ಪದವೀಧರರು, ಶಿಕ್ಷಕರ ದನಿಯಾಗುವೆ: ಶಶಿ ಹುಲಿಕಂಟೆಮಠ್