ಕನ್ನಡಪ್ರಭ ವಾರ್ತೆ ಚಾಮರಾಜನಗರವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ ವಿಶ್ವ ಸಾಹಿತ್ಯಕ್ಕೆ ಶೇಷ್ಠವಾದ ಸಾಹಿತ್ಯ ಎಂದು ಕನ್ನಡಪ್ರಭ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಅವರು ಹೇಳಿದರು.ತಾಲೂಕಿನ ಮರಿಯಾಲ ಗ್ರಾಮದಲ್ಲಿರುವ ಶ್ರೀ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಶ್ರೀಮಠದ ಶ್ರೀ ಬಸವ ವಿದ್ಯಾಪೀಠ ವತಿಯಿಂದ ಹಮ್ಮಿಕೊಂಡಿದ್ದ ಗುರುಬಸವ ವಚನ ಪಾಠಶಾಲೆ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಅವರು ಮಾತನಾಡಿದರು.ವಚನ ಸಾಹಿತ್ಯದಲ್ಲಿ ಶ್ರೇಷ್ಠ ಗುಣಗಳಿದ್ದು, ವಚನ ಸಾಹಿತ್ಯ ರಚನೆ ಮಾಡಿದವರು ಯಾರು ಕೂಡ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದವರಲ್ಲ, ಬಸವಾದಿ ಶರಣರು ತಮ್ಮ ಅನುಭವದಿಂದ ಕಟ್ಟಿಕೊಟ್ಟಂತ ವಚನಗಳಾಗಿವೆ. ಇದು ಜನಸಾಮಾನ್ಯರಿಂದ ಸೃಷ್ಠಿಯಾದ ಸಾಹಿತ್ಯವಾಗಿದೆ ಎಂದರು.ಮೈಸೂರು ಶಿಕ್ಷ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹಾಗೂ ಸಾಹಿತಿ ದೇವರಾಜು ಪಿ. ಚಿಕ್ಕಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ವಚನ ಪಾಠಶಾಲೆ ದಕ್ಷಿಣ ಕರ್ನಾಟಕದಲ್ಲೇ ಸ್ಥಾಪನೆ ಮಾಡಿದ ಮೊದಲ ಶಾಲೆ ಎಂಬ ಕೀರ್ತಿ ಮರಿಯಾಲ ಶ್ರೀಮಠಕ್ಕೆ ಸಲ್ಲಲಿದ್ದು, ಸುವರ್ಣ ಅಕ್ಷರಗಳಲ್ಲಿ ಬರೆಯಲಿದೆ ಎಂದರು.
ಮೈಸೂರು ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಸಂಸ್ಕೃತ ಪಾಠ ಶಾಲೆಗಳನ್ನು ಕೇಳಿದ್ದೇನೆ ವಚನ ಪಾಠಶಾಲೆ ಎಂಬುದನ್ನು ಕೇಳೇ ಇರಲಿಲ್ಲ, ಪ್ರಸ್ತುತದಲ್ಲಿ ವಚನ ಪಾಠಶಾಲೆಗಳು ಅತ್ಯಗತ್ಯವಿದೆ ಎಂದರು.ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಕೆ.ಸಿ ಬಸವಣ್ಣ ಮಾತನಾಡಿ, ಸಮ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯದ ಅಗತ್ಯವಿದ್ದು, ವಚನಗಳು ಸಂಸ್ಕಾರವನ್ನು ಕೊಡಲಿದೆ ಧಾರ್ಮಿಕ ಸಂಸ್ಥೆಗಳಲ್ಲಿ ವಚನ ಪಾಠಶಾಲೆಗಳು ಪ್ರಾರಂಭವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಂ.ಆರ್. ಗಂಗಾಧರ ಹಾಗೂ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಸಿದ್ದಣ್ಣ ಲಂಗೋಟಿ ಅವರು ಮಾತನಾಡಿದರು. ಮರಿಯಾಲ ಮುರುಘರಾದೇಂದ್ರಸ್ವಾಮಿ ಮಹಾಸಂಸ್ಥಾನ ಶ್ರೀಮಠ ಅಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರಸ್ವಾಮಿ ಅವರು ಆಶಿರ್ವಚನ ನೀಡಿದರು.---------------------1ಸಿಎಚ್‌ಎನ್51ಚಾಮರಾಜನಗರ ತಾಲೂಕಿನ ಮರಿಯಾಲ ಗ್ರಾಮದಲ್ಲಿರುವ ಶ್ರೀ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಶ್ರೀಮಠದ ಶ್ರೀ ಬಸವ ವಿದ್ಯಾಪೀಠ ವತಿಯಿಂದ ಹಮ್ಮಿಕೊಂಡಿದ್ದ ಗುರುಬಸವ ವಚನಪಾಠಶಾಲೆ ಉದ್ಘಾಟನಾ ಕಾರ್ಯಕ್ರಮವನ್ನು ಕನ್ನಡಪ್ರಭ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಅವರು ಉದ್ಘಾಟಿಸಿರು.