-ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲದ ಸನ್ಮಾನ ಸಮಾರಂಭ
ಕನ್ನಡಪ್ರಭ ವಾರ್ತೆ ಹಿರಿಯೂರು: ಮಹಾನಾಯಕ ದಲಿತಸೇನೆ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಬಣ, ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದ ಮುಂತಾದ ದಲಿತಪರ ಸಂಘಟನೆಗಳಿಂದ ಒಳ ಮೀಸಲಾತಿ ಜಾರಿಗಾಗಿ ಮಾದಿಗ ದಂಡೋರ ಸಂಘಟನೆಯ ನೇತೃತ್ವದಲ್ಲಿ ಹೋರಾಟ ನಡೆಸಿದ್ದ ಹಿರಿಯ ಹೋರಾಟಗಾರರನ್ನು ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು.
ಬಬ್ಬೂರು ಪರಮೇಶ್ವರಪ್ಪ ಮಾದಿಗ, ಸ್ವಾಮೀಜಿದಾಸ್, ಕೆ.ಗುರುಶ್ಯಾಮಯ್ಯ ಮಾದಿಗ, ಗೂಳ್ಯ ಈಶ್ವರ್, ಹಳೆಯಳನಾಡು ದ್ಯಾಮಣ್ಣ, ದಿ. ಪಟ್ರೆಹಳ್ಳಿ ರಾಮಯ್ಯ ಪರವಾಗಿ ಅವರ ಪುತ್ರ ಶ್ರೀಧರ್,ದಿ. ಕಣಜನಹಳ್ಳಿ ಕರಿಯಪ್ಪನವರ ಪರವಾಗಿ ಅವರ ಪುತ್ರ ದುಷ್ಯಂತ್, ಬೋರನಕುಂಟೆ ಕರಿಯಪ್ಪ, ಮಹೇಶ್, ಹುಚ್ಚವನಹಳ್ಳಿ ತಿಪ್ಪೇಸ್ವಾಮಿ, ರಾಘವೇಂದ್ರ ಎಎಸ್ ಎಸ್, ಆಲೂರು ಕಾಂತರಾಜ್ ಅವರನ್ನು ಸನ್ಮಾನಿಸಲಾಯಿತು.ಮಾದಿಗ ದಂಡೋರ ರಾಜ್ಯ ಜಂಟಿ ಕಾರ್ಯದರ್ಶಿ ಬಬ್ಬೂರು ಪರಮೇಶ್ವರಪ್ಪ ಮಾತನಾಡಿ, ಒಳಮೀಸಲಾತಿ ಜಾರಿಗೆ ಮಾದಿಗ ದಂಡೋರ ಸಂಘಟನೆಯ ಅನೇಕ ಕಾರ್ಯಕರ್ತರು ಪ್ರಾಣ ತೆತ್ತಿದ್ದಾರೆ. ಸುಪ್ರೀಂಕೋರ್ಟ್ ನ ತೀರ್ಪಿನಂತೆ ರಾಜ್ಯದಲ್ಲಿ ಎಬಿಸಿಡಿ ವರ್ಗೀಕರಣ ಬೇಗ ಆಗಬೇಕು. ಇದಕ್ಕೆ ನಮ್ಮ ಸಹೋದರ ಜಾತಿಗಳು ವಿರೋಧ ಮಾಡುವುದನ್ನು ಹಾಗೂ ಇಲ್ಲಸಲ್ಲದ ಪುಕಾರು ಹಬ್ಬಿಸುವುದನ್ನು ನಿಲ್ಲಿಸಬೇಕು ಎಂದರು.
ದಂಡೋರ ರಾಜ್ಯ ಪ್ರ.ಕಾ. ಕೆ.ಗುರುಶ್ಯಾಮಯ್ಯ ಮಾದಿಗ ಮಾತನಾಡಿ, ಆಂಧ್ರ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಒಳಮೀಸಲಾತಿ ವಿಚಾರವನ್ನು ದಿಟ್ಟತನದ ನಿರ್ಧಾರದ ಹಾಗೇ ಸಿದ್ದರಾಮಯ್ಯನವರು ಕೂಡ ನಿರ್ಧಾರ ತೆಗೆದುಕೊಂಡು ಅಹಿಂದ ಮುಖ್ಯಮಂತ್ರಿ ಎನ್ನುವ ಹೆಸರಿಗೆ ಕಳಂಕಬಾರದಂತೆ ನಡೆದುಕೊಳ್ಳಬೇಕು ಎಂದರು.
-----