ವಿಜಯಪುರ: ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು ಇದೀಗ ಬೆಳ್ಳಿ ಪದಕ, ಪ್ರಮಾಣ ಪತ್ರ, ಪಾರಿತೋಷಕಗಳನ್ನು ನೀಡಲಾಗುತ್ತಿದೆ ಎಂದು ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ರುದ್ರಮೂರ್ತಿ ತಿಳಿಸಿದರು.
ರ್ದೇಶಕ ಎಸ್ ರುದ್ರಮೂರ್ತಿ ಮಾತನಾಡಿ, ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿದ್ದ ಸಂಸ್ಥೆ ಕಾರ್ಯವ್ಯಾಪ್ತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಗರ ಜಿಲ್ಲೆ, ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ವಿಸ್ತರಿಸುವ ಬಗ್ಗೆ ವಿಷಯ ಮಂಡಿಸಿ ಸಭೆಯ ಒಪ್ಪಿಗೆ ಪಡೆದುಕೊಂಡರು.
ಸಭೆಯಲ್ಲಿ ಸೊಸೈಟಿ ಹಿರಿಯ ಸದಸ್ಯರಾದ ಸಿಬಸಪ್ಪ, ಸಿ ದೇವರಾಜ್, ನಿವೃತ್ತ ಪೌರಾಯುಕ್ತ ವಿ.ಶಿವಕುಮಾರ್, ಡೆಲ್ಲಿ ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ೮೫ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಬೆಳ್ಳಿ ಪದಕ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.ಸಭೆಯಲ್ಲಿ ಸಂಘದ ಆಂತರಿಕ ಲೆಕ್ಕಪರಿಶೋಧಕ ಎಸ್ ಕುಮಾರಸ್ವಾಮಿ, ನಿರ್ದೇಶಕರಾದ ಎಸ್.ಮಂಜುನಾಥ್, ಬಿ. ನರೇಂದ್ರ ಕುಮಾರ್, ಎಸ್.ಮನೋಹರ್ ಬಾಬು, ಎಸ್.ಪುನೀತ್ ಕುಮಾರ್, ಎನ್.ನಾರಾಯಣಸ್ವಾವಿ, ಸಿಎಂ ರಾಮು, ಜೆ. ನಂಜಣ್ಣ, ಕೆ.ಸಿ.ಭಾರತಿ, ಶೀಲರಾಣಿ, ಸಿಇಒ ಎಸ್.ವಿಮಲಾ, ವ್ಯವಸ್ಥಾಪಕರಾದ ಎಂ ಪ್ರೀತಿ ಉಪಸ್ಥಿತರಿದ್ದರು.
ವಿಜಯಪುರದಲ್ಲಿ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ೨೦೨೫- ೨೬ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಸಂಘದ ಹಿರಿಯ ಸದಸ್ಯರಾದ ಸಿ.ಬಸಪ್ಪ, ಸಿ.ದೇವರಾಜ್, ನಿವೃತ್ತ ಪೌರಾಯುಕ್ತ ವಿ.ಶಿವಕುಮಾರ್, ಡೆಲ್ಲಿ ಬಸವರಾಜು ಅವರನ್ನು ಸನ್ಮಾನಿಸಲಾಯಿತು.