ಹಿರಿಯ ಕವಿಗಳನ್ನು ಮರೆಯಬಾರದು: ಪ್ರೊ. ಎ.ವಿ. ನಾವುಡ

KannadaprabhaNewsNetwork |  
Published : Nov 25, 2026, 02:45 AM IST
ಉಡುಪಿ ಕಸಾಪ - ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಬಹುಭಾಷಾ ಕವಿಗೋಷ್ಠಿ | Kannada Prabha

ಸಾರಾಂಶ

ನಾಡಿನಲ್ಲಿ ಕವಿಗಳಿಗೆ ಬರಗಾಲವಿಲ್ಲ. ಆದರೇ ಅವರಲ್ಲಿ ಹಿರಿಯ ಕವಿಗಳ ಬಗ್ಗೆ ಓದು ಇಲ್ಲ. ಬೇಂದ್ರೆ, ಕುವೆಂಪು, ಪುತಿನ ಮುಂತಾದ ಕವಿಗಳ ಕಾವ್ಯಾಧ್ಯಯನ ಇಂದಿನ ತಲೆಮಾರಿಗಿಲ್ಲ. ಹಿಂದಣ ಹೆಜ್ಜೆ ಅರಿತು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಕನ್ನಡದ ಪ್ರಸಿದ್ಧ ವಿದ್ವಾಂಸ ಮಂಗಳೂರಿನ ಪ್ರೊ. ಎ.ವಿ. ನಾವುಡ ಕಿವಿಮಾತು ಹೇಳಿದರು.

ಉಡುಪಿ : ನಾಡಿನಲ್ಲಿ ಕವಿಗಳಿಗೆ ಬರಗಾಲವಿಲ್ಲ. ಆದರೇ ಅವರಲ್ಲಿ ಹಿರಿಯ ಕವಿಗಳ ಬಗ್ಗೆ ಓದು ಇಲ್ಲ. ಬೇಂದ್ರೆ, ಕುವೆಂಪು, ಪುತಿನ ಮುಂತಾದ ಕವಿಗಳ ಕಾವ್ಯಾಧ್ಯಯನ ಇಂದಿನ ತಲೆಮಾರಿಗಿಲ್ಲ. ಹಿಂದಣ ಹೆಜ್ಜೆ ಅರಿತು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಕನ್ನಡದ ಪ್ರಸಿದ್ಧ ವಿದ್ವಾಂಸ ಮಂಗಳೂರಿನ ಪ್ರೊ. ಎ.ವಿ. ನಾವುಡ ಕಿವಿಮಾತು ಹೇಳಿದರು.ಉಡುಪಿಯ ಯಕ್ಷಗಾನ ಕಲಾರಂಗದ ವಿಶ್ವಪ್ರಭಾ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನಗಳ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ತಿಂಗಳ ಸಡಗರದ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಕಸಾಪ ಉಡುಪಿ ಘಟಕದ ಅಧ್ಯಕ್ಷ ರವಿರಾಜ ಎಚ್​.ಪಿ. ಸಭಾಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕಸಾಪ ಸ್ಥಾಪಕ ಗೌರವ ಕಾರ್ಯದರ್ಶಿ ರಂಗಪ್ಪಯ್ಯ ಹೊಳ್ಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸಂಸಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಯು. ವಿಶ್ವನಾಥ ಶೆಣೈ, ಕವಿಗೋಷ್ಠಿಯ ಸಂಚಾಲಕ ಜನಾರ್ದನ ಕೊಡವೂರು ಇದ್ದರು.

ಅನಿರುದ್ಧ ಭಟ್​ ಪಣಿಯಾಡಿ ಪ್ರಾರ್ಥಿಸಿದರು. ರಾಜೇಶ ಭಟ್​ ಪಣಿಯಾಡಿ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ ನಿರೂಪಿಸಿದರು. ರಂಜನಿ ವಸಂತ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಹಾಗೂ ಸತೀಶ ಕೊಡವೂರು ಸಮಗ್ರ ನಿರ್ವಹಣೆ ಮಾಡಿದರು. ಕವಿಗೋಷ್ಠಿಯಲ್ಲಿ 22 ಹಿರಿಕಿರಿಯ ಕವಿಗಳು ಪಾಲ್ಗೊಂಡು ಕನ್ನಡ, ಸಂಸ್ಕೃತ, ತುಳು, ಕೊಂಕಣಿ, ಹಿಂದಿ,ಇಂಗ್ಲಿಷ್, ಹವ್ಯಕ, ಶಿವಳ್ಳಿ, ಹವಿಗನ್ನಡ ಭಾಷೆಗಳಲ್ಲಿ ಸ್ವರಚಿತ ಕಾವ್ಯ ವಾಚಿಸಿದರು.

ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾಗಿ ಯಶಸ್ವಿಯಾಗಿ ತನ್ನ ಐದು ವರ್ಷದ ಅವಧಿಯನ್ನು ಪೂರೈಸಿದ ರವಿರಾಜ್ ಎಚ್ ಪಿ. ಅವರನ್ನು ಅವರ ಅಭಿಮಾನಿ ಬಳಗದವರು ಗೌರವಿಸಿ, ಅಭಿನಂದಿಸಿದರು.

ಅಂತಿಮ ಹಂತದಲ್ಲಿರುವ ಕ್ಯಾನ್ಸರ್​ ರೋಗಿಗಳಿಗೆ ಚಿಂತೆ ನಿವಾರಿಸಲು ಅನುಕೂಲವಾಗಲು ಮಣಿಪಾಲ ಟೌನ್​ ರೋಟರಿ ಕ್ಲಬ್​ನಿಂದ ಲೈಬ್ರರಿ ಆರಂಭಿಸುತ್ತಿದ್ದು, ಕಸಾಪ ಉಡಪಿ ಘಟಕದ ಮನೆಯೇ ಗ್ರಂಥಾಲಯ ಅಭಿಯಾನದ 220ನೇ ಸಂಚಿಕೆಯನ್ನು ಆಶಾಲತಾ ಅವರಿಗೆ ಹಸ್ತಾಂತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಮದ್ಯಪಾನ ಸಂಯಮ ಮಂಡಳಿ ಗೌರವ ಸಲಹೆಗಾರರಾಗಿ ಡಾ.ಗುರುಮಹಾಂತ ಶ್ರೀ ನೇಮಕ
ಜಿಲ್ಲೆಯ 8 ಉಪನೋಂದಣಿ ಕಚೇರಿಗಳಲ್ಲಿ ಲೋಕಾ ಶೋಧಕಾರ್ಯ