ಉಡುಪಿ: 29ರಂದು ಬೃಹತ್ ಶ್ರೀ ಮಹಾಧನ್ವಂತರಿ ಯಾಗ

KannadaprabhaNewsNetwork |  
Published : Nov 25, 2026, 02:45 AM IST
23ಯಾಗ | Kannada Prabha

ಸಾರಾಂಶ

ಸಮಾಜದ ಆರೋಗ್ಯ ಮತ್ತು ಲೋಕಕಲ್ಯಾಣಕ್ಕಾಗಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬೃಹತ್ ಸಂಖ್ಯೆಯ ಭಕ್ತಾಭಿಮಾನಿಗಳ ಭಾಗವಹಿಸುವಿಕೆಯಲ್ಲಿ ನ. 29ರಂದು ನಗರದ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಐತಿಹಾಸಿಕ ಶ್ರೀ ಮಹಾ ಧನ್ವಂತರಿ ಮಹಾಯಾಗವನ್ನು ಆಯೋಜಿಸಲಾಗಿದೆ ಎಂದು ಯಾಗದ ಸ್ವಾಗತ ಸಮಿತಿಯ ಅಧ್ಯಕ್ಷ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಉಡುಪಿ: ಸಮಾಜದ ಆರೋಗ್ಯ ಮತ್ತು ಲೋಕಕಲ್ಯಾಣಕ್ಕಾಗಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬೃಹತ್ ಸಂಖ್ಯೆಯ ಭಕ್ತಾಭಿಮಾನಿಗಳ ಭಾಗವಹಿಸುವಿಕೆಯಲ್ಲಿ ನ. 29ರಂದು ನಗರದ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಐತಿಹಾಸಿಕ ಶ್ರೀ ಮಹಾ ಧನ್ವಂತರಿ ಮಹಾಯಾಗವನ್ನು ಆಯೋಜಿಸಲಾಗಿದೆ ಎಂದು ಯಾಗದ ಸ್ವಾಗತ ಸಮಿತಿಯ ಅಧ್ಯಕ್ಷ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸನಾತನ ಸಂಸ್ಥೆಯ ಆಯೋಜನೆಯಲ್ಲಿ ನಡೆಯುತ್ತಿರುವ ಈ ಮಹಾಯಾಗದಲ್ಲಿ ಸುಮಾರು 15,000ಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ, ಉಡುಪಿ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳ ಜನರಿಗೂ ಈ ಅಪೂರ್ವ ಯಾಗದಲ್ಲಿ ಭಾಗವಹಿಸುವ ಸದವಕಾಶವಾಗಿದೆ. ಈ ಯಾಗಕ್ಕೆ ಅಂದಾಜು 2 ಕೋಟಿ ರು. ವೆಚ್ಚವಾಗಲಿದೆ ಎಂದರು.

ಆಯೋಜನಾ ಸಮಿತಿಯ ಗುರುಪ್ರಸಾದ್ ಗೌಡ ಅವರು, ಅಂದು ಮಧ್ಯಾಹ್ನ 3 ಗಂಟೆಗೆ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ದೀಪಪ್ರಜ್ವಲನೆಯೊಂದಿಗೆ ಯಾಗಕ್ಕೆ ಚಾಲನೆ ನೀಡಲಿದ್ದಾರೆ. ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀ ಯೋಗಾನಂದ ಸ್ವಾಮೀಜಿ ಹಾಗೂ ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಭಾಗವಹಿಸಲಿದ್ದಾರೆ. ಸಂಜೆ 7ರವರೆಗೆ ಯಾಗ ನಡೆಯಲಿದೆ ಎಂದರು.

ತಮಿಳುನಾಡಿನ 8 - 10 ಮಂದಿ ಶಿವಾಚಾರ್ಯ ವೈದಿಕರು ಆಗಮಿಸಲಿದ್ದಾರೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥದ ಅಂಶ ಮತ್ತು ಕೃಷ್ಣನ ಪವಿತ್ರ ಕ್ಷೇತ್ರಗಳ ಮಣ್ಣು ಮತ್ತು ಜಲವನ್ನು ಈ ಯಾಗದ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದವರು ಹೇಳಿದರು.ಸ್ವಾಗತ ಸಮಿತಿಯ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ರಮೇಶ್ ಶಿಂದೆ, ಶೋಭಾ ಕಾಮತ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಮದ್ಯಪಾನ ಸಂಯಮ ಮಂಡಳಿ ಗೌರವ ಸಲಹೆಗಾರರಾಗಿ ಡಾ.ಗುರುಮಹಾಂತ ಶ್ರೀ ನೇಮಕ
ಜಿಲ್ಲೆಯ 8 ಉಪನೋಂದಣಿ ಕಚೇರಿಗಳಲ್ಲಿ ಲೋಕಾ ಶೋಧಕಾರ್ಯ