ಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವ ಪ್ರಯುಕ್ತ ''ಮೈಸೂರು ದಸರಾ ಎಷ್ಟೊಂದು ಸುಂದರ; ಶೀರ್ಷಿಕೆಯಡಿ ನಗರದ ಜನ ಚೈತನ್ಯ ಫೌಂಡೇಷನ್ ವತಿಯಿಂದ ಜೆ.ಎಲ್.ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಶುಕ್ರವಾರ ಜನಪ್ರಿಯ ಹಳೆಯ ಕನ್ನಡ ಚಿತ್ರಗೀತೆ ಮತ್ತು ಭಾವಗೀತೆಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಹಿರಿಯ ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ ಉದ್ಘಾಟಿಸಿದರು. ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಜಿ.ಎಚ್. ಶ್ರೀರಂಗ, ರಾಗ ಕ್ರಿಯೇಷನ್ಸ್ ಅದ್ಯಕ್ಷ ಆನಂದಶೆಟ್ಟಿ ಇದ್ದರು. ಫೌಂಡೇಷನ್ ಅಧ್ಯಕ್ಷ ಆರ್. ಲಕ್ಷ್ಮಣ್ ನೇತೃತ್ವದಲ್ಲಿ ಜಾಯ್ಸ್ ವೈಶಾಖ್, ವೈ.ಎಂ. ನಾಗೇಂದ್ರ, ಶಾಂತಕುಮಾರಿ, ನರಸಿಂಹಮೂರ್ತಿ, ಬಿ.ಎಸ್. ವಿಜಯ್ ಆನಂದ್ ಹಾಗೂ ಎಂ. ರೇಖಾ ಮೊದಲಾದವರು ಸುಮಾರು 32 ಗೀತೆಗಳನ್ನು ಹಾಡಿದರು. ಚಿಕ್ಕಪ್ಪಾಜಿ, ಶಿವಕುಮಾರ್- ಕೀ ಬೋರ್ಡ್, ಹೆಬ್ಬಾಡಿ ಮಹದೇವ್- ತಬಲ, ಅರುಣ್ ಕುಮಾರ್- ರಿದಂ ಪ್ಯಾಡ್, ಸಾಥ್ ನೀಡಿದರು. ಮರೆಯೋದುಂಟೆ ಮೈಸೂರು ದೊರೆಯ,..ಮೈಸೂರು ದಸರಾ ಎಷ್ಟೊಂದು ಸುಂದರ, ಮರೆಯೋದುಂಟೆ ಮೈಸೂರು ದೊರೆಯ, ತಿಂಗಳು ಮುಳುಗಿದವೋ, ಆಡಿದವರ ಮನವ ಬಲ್ಲೆ ನೀಡಿದವರ, ಮೂಡಲ ಮನೆಯ ಮುತ್ತಿನ ಹನಿಯ, ಹಚ್ಚೇವು ಕನ್ನಡದ ದೀಪ, ಗುಡಿಸಲ ಜ್ಯೋತಿ ಊರೂರು ಸುತ್ತಿ, ಮೆಲ್ಲುಸಿರೆ ಸವಿಗಾನ, ನಿನದೆ ನೆನಪು ದಿನವು ಮನದಲ್ಲಿ, ಮನೆಯೇ ಮಂತ್ರಾಲಯ, ಮನಸೇ ದೇವಾಲಯ, ಕಾಪಾಡು ಶ್ರೀ ಸತ್ಯನಾರಾಯಣ, ಮಾನಸ ಸರೋವರ, ಆಕಾಶದ ನೀಲಿಯಲಿ, ಸ್ತ್ರೀ ಅಂದರೆ ಅಷ್ಟೇ ಸಾಕೇ, ರಾಮನ ಅವತಾರ ರಘುಕುಲ ಸೋಮನ ಅವತಾರ, ರಂಗಾ ವಿಠಲ ಎಲ್ಲಿ ಮರೆಯಾದೆ, ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ, ತುತ್ತು ಅನ್ನು ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ಬೊಂಬೆ ಹೇಳುತೈತೆ, ನಿಮ್ ಕಡೆ ಸಾಂಬಾರ್ ಅಂದ್ರೆ, ಸಂಗಮ ಸಂಗಮ, ಎಂದೆಂದೂ ನಿನ್ನನು ಮರೆತು ನೋಡು ನೋಡು ಕಣ್ಣಾರೆ ನಿಂತಿಹಳು, ಹೇಳಿ ಹೋಗು ಕಾರಣ, ನೀ ಬಂದು ನಿಂತಾಗ, ನೂರು ಕಣ್ಣು ಸಾಲದು, ಯಾವ ಕವಿಯು ಬರೆಯಲಾರ, ಆಸೆಯ ಭಾವ ಒಲಿವಿನ ಜೀವ, ನಗುವ ನಯನ,. ಬಾರೇ ಬಾರೆ ಚಂದದ ಚೆಲುವಿನ ತಾರೆ ಗೀತೆಗಳನ್ನು ಪ್ರಸ್ತುತಪಡಿಸಿದರು.