ಹುಬ್ಬಳ್ಳಿ:
ಸಂಯುತಾ ಪ್ರತಿಷ್ಠಾನ, ನಂಜನಗೂಡು ರಾಯರ ಮಠ, ಟಿಟಿಡಿ ಹಾಗೂ ಗುರುಸಾರ್ವಭೌಮ ದಾಸ ಪ್ರೊಜೆಕ್ಟ್ ಮತ್ತು ಕ್ಷಮತಾ ಸಂಸ್ಥೆಗಳ ಸಹಯೋಗದಲ್ಲಿ ಭವಾನಿನಗರದ ರಾಯರ ಮಠದಲ್ಲಿ ಆಯೋಜಿಸುತ್ತಿರುವ ಕನಕ-ಪುರಂದರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರ ದಾಸರಾಗುವುದು ಸಣ್ಣ ಮಾತಲ್ಲ. ಅಂಥ ದಾಸ್ಯತ್ವ ಬರಬೇಕಾದರೆ ಅನನ್ಯ ಭಕ್ತಿ, ಮತ್ತು ನೈಜಕರ್ಮಗಳ ಸತ್ಫಲಗಳು ಬೇಕು. ಕನಕದಾಸರು ಮತ್ತು ಪುರಂದರದಾಸರು ಮತ್ತು ಶ್ರೀ ಪೀಠದಲ್ಲಿ ಕುಳತ ರಾಯರನ್ನು ಒಟ್ಟಿಗೆ ಸ್ಮರಿಸಿದರೆ ಸಾಕು. ಇಲ್ಲಿಯೇ ಕುಂಭಮೇಳದ ಫಲ ಬಂದಂತೆ ಎಂದು ಅನ್ವಯ ಮಾಡಿದರು. ನಂತರ ಕನಕರ ಮುಂಡಿಗೆಗಳನ್ನು ವಿಸ್ತೃತವಾಗಿ ವಿವರಿಸಿದರು.ವಿನಯಕಾಲನಿಯ ಮಹಾಲಕ್ಷ್ಮಿ ಭಜನಾ ಮಂಡಳಿಯಿಂದ ದಾಸರ ಕೀರ್ತನೆ ಪ್ರಸ್ತುತಗೊಂಡವು.
ಧಾರವಾಡದ ಶ್ರೀತಾರಕೇಶ್ವರ ಭಜನಾ ಮಂಡಳಿಯಿಂದ ದಾಸರ ಕೀರ್ತನೆಗಳ ಭಜನೆ ನಡೆಯಿತು. ಶ್ರೀಮಠದ ವ್ಯವಸ್ಥಾಪಕ ಕೆ. ವೇಣುಗೋಪಾಲಾಚಾರ್ಯ, ವಿಚಾರಣಾಕರ್ತ ಎ.ಸಿ. ಗೋಪಾಲ, ಸಂಯುತಾ ಪ್ರತಿಷ್ಠಾನದ ಅಧ್ಯಕ್ಷ ಪಿ.ಎಸ್. ಪರ್ವತಿ, ಟಿಟಿಡಿ ದಾಸ ಪ್ರೊಜೆಕ್ಟ್ ಸಂಚಾಲಕ ಗೋಪಾಲ ಕುಲಕರ್ಣಿ, ವಿಷ್ಣುತೀರ್ಥ ಕಲ್ಲೂರಕರ, ಮನೋಹರ ಪರ್ವತಿ, ಜನಮೇಜಯ ಉಮ್ಮರ್ಜಿ, ಸುಶೀಲೇಂದ್ರ ಕುಂದರಗಿ, ಬಿಂದುಮಾಧವ ಪುರೋಹಿತ ನೂರಾರು ಭಕ್ತರು ಮಹಿಳಾ ಮಂಡಳಗಳ ಸಾಧಕಿಯರು ಪಾಲ್ಗೊಂಡಿದ್ದರು.