ಸರಣಿ ರಜೆ: ಚಿಕ್ಕಮಗಳೂರಲ್ಲಿ ಹೆಚ್ಚಿದ ಪ್ರವಾಸಿಗರು

KannadaprabhaNewsNetwork |  
Published : Nov 02, 2024, 01:36 AM ISTUpdated : Nov 02, 2024, 01:37 AM IST
ಮುಳ್ಳಯ್ಯನಗಿರಿ ರಸ್ತೆಯಲ್ಲಿ ಸರದಿ ಸಾಲಿನಲ್ಲಿ ಸಾಗುತ್ತಿರುವ ಪ್ರವಾಸಿಗರ ವಾಹನಗಳು. | Kannada Prabha

ಸಾರಾಂಶ

ಚಿಕ್ಕಮಗಳೂರು, ಸರಣಿ ರಜೆಗಳಿಂದಾಗಿ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ. ಶುಕ್ರವಾರ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಾಹನಗಳು ಗಿರಿ ಪ್ರದೇಶಕ್ಕೆ ಬಂದಿದ್ದರಿಂದ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಕೆಲ ಸಮಯ ಟ್ರಾಫಿಕ್‌ ಜಾಮ್‌ ಆಗಿತ್ತು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸರಣಿ ರಜೆಗಳಿಂದಾಗಿ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ. ಶುಕ್ರವಾರ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಾಹನಗಳು ಗಿರಿ ಪ್ರದೇಶಕ್ಕೆ ಬಂದಿದ್ದರಿಂದ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಕೆಲ ಸಮಯ ಟ್ರಾಫಿಕ್‌ ಜಾಮ್‌ ಆಗಿತ್ತು.

ದೀಪಾವಳಿ ಹಬ್ಬದ ರಜೆ ಹಾಗೂ ಶ್ರೀ ದೇವಿರಮ್ಮ ಜಾತ್ರ ಮಹೋತ್ಸವದ ಹಿನ್ನಲೆಯಲ್ಲಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಥಂಡಿ ಗಾಳಿ, ಆಗಾಗ ಮಳೆ ಬರುತ್ತಿರುವುದರಿಂದ ಗಿರಿ ಪ್ರದೇಶದಲ್ಲಿ ಮಂಜು ಕವಿದ ವಾತಾವರಣ ಇದ್ದು, ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ.

ಶುಕ್ರವಾರ ಒಂದೇ ದಿನ ಒಂದು ಸಾವಿರಕ್ಕೂ ಹೆಚ್ಚು ಕಾರ್‌ಗಳು, ಬೈಕ್‌ ಹಾಗೂ ಟಿ.ಟಿ. ವಾಹನಗಳು ಗಿರಿ ಪ್ರದೇಶದಲ್ಲಿ ಸಂಚರಿಸಿದ್ದು, ಸುಮಾರು 6 ಸಾವಿರ ಪ್ರವಾಸಿಗರು ಬಂದು ಹೋಗಿದ್ದಾರೆಂದು ಹೇಳಲಾಗುತ್ತಿದೆ. ಒಟ್ಟಾರೆ ಸರಣಿ ರಜೆಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಶೃಂಗೇರಿಯಲ್ಲೂ ಪ್ರವಾಸಿಗರ ದಂಡು

ಕನ್ನಡಪ್ರಭ ವಾರ್ತೆ, ಶೃಂಗೇರಿದೀಪಾವಳಿ ಹಬ್ಬ, ನಾಲ್ಕು ದಿನಗಳ ಸತತ ರಜೆ, ಮಳೆ ನಡುವೆಯೂ ಶೃಂಗೇರಿಯಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ತಾಲೂಕಿನಲ್ಲಿ ಕಳೆದೆರೆಡು ದಿನಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.

ಗುರುವಾರದಿಂದ ಭಾನುವಾರದವರೆಗೂ ಸತತ ನಾಲ್ಕುದಿನಗಳ ರಜೆಯಿರುವುದರಿಂದ ಶೃಂಗೇರಿ ಶಾರದಾ ಪೀಠ,ಸಿರಿಮನೆ ಜನಪಾತ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.ಶುಕ್ರವಾರ ಶ್ರೀಮಠದ ಆವರಣ, ಭೋಜನಾ ಶಾಲೆ, ಶ್ರೀ ಶಾರದಾಂಬಾ ದೇವಾಲಯ, ನರಸಿಂಹವನ, ಬಸ್ ನಿಲ್ದಾಣ, ಗಾಂಧಿ ಮೈದಾನ, ಭಾರತೀ ಬೀದಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಎಲ್ಲೆಲ್ಲೂ ಪ್ರವಾಸಿಗರೇ ಕಂಡುಬರುತ್ತಿದ್ದಾರೆ. ಶುಕ್ರವಾರ ಶ್ರೀ ಮಠದ ಆವರಣ ಭಕ್ತಗಣದಿಂದ ಗಿಜಿಗಿಡುತ್ತಿತ್ತು. ಒಂದೆಡೆ ದೀಪಾವಳಿ, ಮಳೆ ಕಾಟ ಇವೆಲ್ಲದರ ನಡುವೆ ಭಕ್ತರು ಮಾತ್ರ ಶೃಂಗೇರಿಯತ್ತ ಬರುತ್ತಲೇ ಇದ್ದಾರೆ.

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ತಾಲೂಕಿನ ಕಿಗ್ಗಾ ಸಮೀಪದ ಸಿರಿಮನೆ ಜಲಪಾತದಲ್ಲಿಯೂ ಪ್ರವಾಸಿಗರ ದಂಡು ಕಂಡು ಬರುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು , ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಶುಕ್ರವಾರವೂ ಪ್ರವಾಸಿಗರ ನೂಕು ನುಗ್ಗಲು ಕಂಡುಬಂದಿತು. ಕಿಗ್ಗಾದಲ್ಲಿರುವ ಮಳೆ ದೇವರು ಶ್ರೀ ಋಷ್ಯಶೃಂಗೇಶ್ವರ ದೇವಾಲಯಕ್ಕೂ ಕಳೆದ ಕೆಲದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿದ್ದಾರೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ತಾಲೂಕಿನ ವಸತಿಗೃಹಗಳೆಲ್ಲ ಭರ್ತಿಯಾಗುತ್ತಿವೆ.1 ಶ್ರೀ ಚಿತ್ರ 3-

ಶೃಂಗೇರಿ ಶ್ರೀ ಮಠದ ಆವರಣದಲ್ಲಿ ಶುಕ್ರವಾರ ಕಂಡು ಬಂದ ಭಕ್ತಸಾಗರ.ಪೋಟೋ ಫೈಲ್‌ ನೇಮ್‌ 1 ಕೆಸಿಕೆಎಂ 4ಮುಳ್ಳಯ್ಯನಗಿರಿ ರಸ್ತೆಯಲ್ಲಿ ಸರದಿ ಸಾಲಿನಲ್ಲಿ ಸಾಗುತ್ತಿರುವ ಪ್ರವಾಸಿಗರ ವಾಹನಗಳು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ