ಐಸಿಎಂಆರ್‌ನ ಎಪಿಡೆಮಿಯಾಲಜಿ ಸಂಶೋಧನೆ । ಐದು ರಾಜ್ಯಗಳಲ್ಲಿ ಸಮೀಕ್ಷೆ । ಸೋಂಕು ತಗುಲಿದವರ ಬಗ್ಗೆ ಮಾಹಿತಿ
ಕೆಎಫ್‌ಡಿ ರೋಗದ ಹರಡುವಿಕೆ ಪ್ರಮಾಣ ಅರ್ಥ ಮಾಡಿಕೊಂಡು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯು ಜಿಲ್ಲೆಯಲ್ಲಿ ಸೀರೋ ಸರ್ವೆ (ರಕ್ತಸಾರ ಸಮೀಕ್ಷೆ) ನಡೆಸಿತು.
ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಸಾಮಾನ್ಯವಾಗಿ ಮಂಗನ ಜ್ವರವೆಂದು ಕರೆಯಲ್ಪಡುವ ಈ ರೋಗವು ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಈ ರೋಗವು ಕೇವಲ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಕಂಡುಬಂದಿತ್ತು. ಈಗ ಇದು ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಹಾಗೂ ಪಕ್ಕದ ರಾಜ್ಯಗಳಲ್ಲಿಯೂ ಹರಡಿದೆ.ಈ ರೋಗದ ಹರಡುವಿಕೆ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ (ಎನ್‌ಐಇ) ವಿಭಾಗವು ಪಶ್ಚಿಮಘಟ್ಟದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಹಾಗೂ ವಯಸ್ಕರಲ್ಲಿ ಕೆಎಫ್‌ಡಿಯ ಸೀರೋ ಸರ್ವೆ (ರಕ್ತಸಾರ ಸಮೀಕ್ಷೆ) ನಡೆಸುತ್ತಿದೆ. ಈ ಸೀರೋ ಸರ್ವೆಯನ್ನು ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡು ಸೇರಿದಂತೆ ಐದು ರಾಜ್ಯಗಳಲ್ಲಿ ನಡೆಸಲಾಗುವುದು.
ಸಮೀಕ್ಷೆ ಯೋಜನೆಯಂತೆ, ಎನ್‌ಐಇ ಚೆನ್ನೈ ತಂಡವು ಉತ್ತರ ಕನ್ನಡ ಜಿಲ್ಲೆಯ 10 ಗ್ರಾಮಗಳು, ಉಡುಪಿ ಜಿಲ್ಲೆಯ 6, ಶಿವಮೊಗ್ಗದ 7, ಕೊಡಗಿನ 8, ಹಾಸನದ 1, ದಕ್ಷಿಣ ಕನ್ನಡದ 14, ಚಿಕ್ಕಮಗಳೂರಿನ 4 ಹಾಗೂ ಬೆಳಗಾವಿಯ 1 ಗ್ರಾಮಗಳಲ್ಲಿ ಸಿರೋ ಸರ್ವೆ ನಡೆಸಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಾ.22 ರಿಂದ ಏ.15ರ ವರೆಗೆ ಸೀರೋ ಸರ್ವೆ ನಡೆಸಲಾಗಿದೆ.
ಹೆಚ್ಚಿನ ಅಪಾಯವಿರುವ ಜಿಲ್ಲೆಗಳಲ್ಲಿ ಮತ್ತು ವಯೋವರ್ಗಗಳಲ್ಲಿ ಲಸಿಕಾಕರಣವನ್ನು ಆದ್ಯತೆಯಾಗಿಸಲು ಈ ಮಾಹಿತಿಯು ಸಹಾಯ ಮಾಡುತ್ತದೆ. ಜೊತೆಗೆ, ಈ ಅಧ್ಯಯನದಿಂದ ದೊರೆಯುವ ಸಾಕ್ಷ್ಯಾಧಾರಗಳು ರೋಗದ ನಿಗಾ ವ್ಯವಸ್ಥೆ ಅಭಿವೃದ್ಧಿಪಡಿಸಲು ಸಹಕರಿಸುತ್ತದೆ.
ಇತ್ತೀಚೆಗೆ ಈ ಸಮೀಕ್ಷೆ ಕುರಿತು ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಐಸಿಎಂಆರ್‌ನ ಎಪಿಡೆಮಿಯಾಲಜಿ ವಿಭಾಗದ ನಿರ್ದೇಶಕ ಡಾ.ಮನೋಜ್ ಮುರೇಕರ್ ನೇತೃತ್ವದಲ್ಲಿ ಕಾರ್ಯಾಗಾರ ನಡೆಸಲಾಯಿತು. ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಬಾಲು ಪಿ.ಎಸ್., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ, ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಡಾ.ಲತಾ ಆರ್ ತೆಲಂಗ್, ಪ್ರಾಂಶುಪಾಲ ಡಾ.ಸಿದ್ದಲಿಂಗಪ್ಪ, ಡೀನ್ ಡಾ.ವಿನಾಯಕ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಮತ್ತಿತರರು ಭಾಗವಹಿಸಿದ್ದರು.ಹೇಗೆ ಸಮೀಕ್ಷೆ?