ದಾಸೇಗೌಡ ಸರಗೂರು
ತಾಲೂಕು ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರು ಹೈರಾಣಾಗಿದ್ದು, ಮತ್ತೊಂದೆಡೆ ಸರ್ಕಾರದ ಹೊಸ ಆದಾಯ ಮಿತಿ ನಿಯಮದಿಂದಾಗಿ ಬಡವರು ಹಾಗೂ ವಿಕಲಚೇತನರ ಮಾಶಾಸನ ಸ್ಥಗಿತಗೊಂಡು ಕಣ್ಣೀರಿಡುವಂತಾಗಿದೆ.
ಬೆಳಗಿನ ಜಾವ 5:30 ರಿಂದಲೇ ಕ್ಯೂ!ತಮ್ಮ ಮತ್ತು ಮಕ್ಕಳ ವಿದ್ಯಾಭ್ಯಾಸ, ಮಾಶಾಸನ, ವಾಸಸ್ಥಳ ದೃಢೀಕರಣ ಮುಂತಾದ ಕಂದಾಯ ಇಲಾಖೆಯ ವಿವಿಧ ಸೇವೆಗಳಿಗಾಗಿ ತಾಲೂಕಿನ ನೂರಾರು ಗ್ರಾಮಗಳಿಂದ ಬರುವ ರೈತರು ಹಾಗೂ ಸಾರ್ವಜನಿಕರು ಬೆಳಗಿನ ಜಾವ 5.30ಕ್ಕೆ ಬಂದು ಕಚೇರಿ ಮುಂಭಾಗ ಕಾದು ಕುಳಿತುಕೊಳ್ಳುತ್ತಿದ್ದಾರೆ. ಬೆಳಗ್ಗೆ 9.30ಕ್ಕೆ ಗೇಟ್ ತೆರೆಯುತ್ತಿದ್ದಂತೆ ನೆಮ್ಮದಿ ಕೇಂದ್ರದ ಮುಂದೆ ನೂಕುನುಗ್ಗಲು ಉಂಟಾಗುತ್ತಿದೆ.
ಬಡವರ ಹೊಟ್ಟೆಗೆ ಮಣ್ಣು ಹಾಕಿದ ''''''''32 ಸಾವಿರ ರೂ.'''''''' ಆದಾಯ ಮಿತಿ!
ಅಧಿಕಾರಿಗಳ ಅಸಹಾಯಕತೆ
ಸ್ಥಳೀಯ ಶಾಸಕರು ಮೈಸೂರಿನಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು, ಕ್ಷೇತ್ರಕ್ಕೆ ಬಂದು ಕಚೇರಿಗಳ ಸ್ಥಿತಿಯನ್ನು ನೋಡಬೇಕು. ತಿಂಗಳಿಗೆ ಲಕ್ಷಾಂತರ ರೂ. ಸಂಬಳ, ಭತ್ಯೆ ಪಡೆಯುವ ಶಾಸಕರು ವಿಧಾನಸೌಧದಲ್ಲಿ ಈ ''''''''ಆದಾಯ ಮಿತಿ'''''''' ನಿಯಮದ ವಿರುದ್ಧ ಧ್ವನಿ ಎತ್ತಿ ಬಡವರಿಗೆ ನ್ಯಾಯ ಕೊಡಿಸಬೇಕು ಎಂದು ಕೆಆರ್‌ಎಸ್ ಪಕ್ಷದ ಸೈನಿಕ ಮಂಜುನಾಥ್ ಆಗ್ರಹಿಸಿದ್ದಾರೆ.
ಕೋಟ್
- ಸಾಗರೆ ನಾಗರಾಜು, ವಿಕಲಚೇತನ ಹೋರಾಟಗಾರ.
ನಾನು ಸಂಪೂರ್ಣ ಅಂಧ. ಮುಂಚೆ 80 ಸಾವಿರ ರೂ. ಆದಾಯ ಪತ್ರ ಇದ್ದಿದ್ದಕ್ಕೆ ಈಗ ಹಣ ನಿಲ್ಲಿಸಿದ್ದಾರೆ. ಕಣ್ಣೇ ಕಾಣದ ನಾನು ಈಗ 32 ಸಾವಿರದ ಆದಾಯ ಪತ್ರ ತರಲು ಎಲ್ಲಿಗೆ ಹೋಗಲಿ? ಮೂರು ತಿಂಗಳಿಂದ ಹಣವಿಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ.
- ಸುರೇಶ್, ಬಿದರಳ್ಳಿ ಗ್ರಾಮ---
ನನ್ನ ಗಂಡನಿಗೆ ವಯಸ್ಸಾಗಿ ಎದ್ದು ಓಡಾಡಲು ಆಗಲ್ಲ. ನನಗೆ ಒಂದು ಕೈ ಇಲ್ಲ. ಬರುತಿದ್ದ ಮಾಶಾಸನ ನಿಂತುಹೋಗಿದೆ. ಕಚೇರಿಗೆ ಬಂದರೆ 32 ಸಾವಿರ ರೂ. ಆದಾಯ ಪತ್ರ ತನ್ನಿ ಎನ್ನುತ್ತಾರೆ, ನಾನು ಏನು ಮಾಡಲಿ?- ರಾಜಮ್ಮ, ಹೊಸಕೆರೆ ಸುಂಡ ಗ್ರಾಮ.