ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆ

KannadaprabhaNewsNetwork |  
Published : Aug 31, 2026, 03:00 AM IST
ಮೂಲ್ಕಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಮಸ್ಯೆ  | Kannada Prabha

ಸಾರಾಂಶ

ಮೂಲ್ಕಿ, ಹಳೆಯಂಗಡಿ ಸೇರಿದಂತೆ ಮೂಲ್ಕಿ ಪರಿಸರದ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಪಡಿತರ ಚೀಟಿದಾರರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೂಲ್ಕಿ: ಮೂಲ್ಕಿ, ಹಳೆಯಂಗಡಿ ಸೇರಿದಂತೆ ಮೂಲ್ಕಿ ಪರಿಸರದ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಪಡಿತರ ಚೀಟಿದಾರರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಮಾರು 15 ದಿನಗಳಿಂದ ಈ ಸಮಸ್ಯೆ ಸಾಮಾನ್ಯವಾಗಿದ್ದು, ಪಡಿತರ ಚೀಟಿದಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪಡಿತರ ವಿತರಣೆ ವ್ಯವಸ್ಥೆಯ ಸರ್ವರ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಮಸ್ಯೆಗೆ ಪ್ರಮುಖ ಕಾರಣ ಎಂದು ಪಡಿತರ ಅಂಗಡಿಯೊಂದರ ಸಿಬ್ಬಂದಿ ತಿಳಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ ಪೂರೈಸ ಬೇಕಾದ ಅಕ್ಕಿ ಇನ್ನೂ ಪಡಿತರ ಅಂಗಡಿಗಳಿಗೆ ತಲುಪಿಲ್ಲ, ಹೀಗಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಅಕ್ಕಿಯನ್ನು ಕೇಂದ್ರದ ಪೂರೈಕೆಯಿಂದ ವಿತರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮುಂದಿನ ತಿಂಗಳು ರಾಜ್ಯ ಸರ್ಕಾರದಿಂದ ಅಕ್ಕಿ ಪೂರೈಕೆಯಾಗಲಿದ್ದು, ಇದಕ್ಕಾಗಿ ಎರಡು ಪ್ರತ್ಯೇಕ ಬಿಲ್ಲಿಂಗ್ ಪ್ರಕ್ರಿಯೆ ನಡೆಸಬೇಕಾಗಿದ್ದು, ಪಡಿತರ ವಿತರಣೆಯಲ್ಲಿ ವಿಳಂಬಕ್ಕೆ ಕಾರಣವಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈ ರೀತಿಯ ಸಮಸ್ಯೆ ಆಗಾಗ್ಗೆ ಎದುರಾಗುತ್ತಿದ್ದು, ಎರಡು ಬಿಲ್ ಮಾಡುವ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗುವ ಅನುಮಾನವೂ ಇದೆ. ಕೆಲವೊಮ್ಮೆ ಗೋಧಿ ಪೂರೈಕೆಯಾಗಿದೆ ಎಂದು ಬಿಲ್ ಕಳುಹಿಸಲಾಗುತ್ತದೆ. ಆದರೆ ಪಡಿತರ ಅಂಗಡಿಗಳಿಗೆ ಕಳೆದ ಹಲವು ಸಮಯಗಳಿಂದ ಗೋಧಿ ಪೂರೈಕೆಯಾಗುತ್ತಿಲ್ಲ ಎಂದು ಸೊಸೈಟಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪಸ್ಮಾರ ಶಾಪವಲ್ಲ, ಗುಣಪಡಿಸಲಾಗುವ ಖಾಯಿಲೆ: ಡಾ.ನಿಹಾಲ್ ಅಹಮದ್
ಹಿರಿಯ ನಾಗರಿಕರ ಸಂಘ ಸ್ಥಾಪಿಸಲು ಚಿಂತನೆ: ಯು.ಟಿ.ಖಾದರ್