ಪಸ್ಮಾರ (ಮೂರ್ಛೆ ರೋಗ) ರೋಗ ಮೆದುಳಿನಲ್ಲಿನ ನರಕೋಶಗಳಿಗೆ ಉಂಟಾಗುವ ಹಾನಿ, ಅಸಮತೋಲನ, ನರಗಳ ದೌರ್ಬಲ್ಯದಿಂದ ಬರುವ ಖಾಯಿಲೆ. ದೇಶದಲ್ಲಿ ಸುಮಾರು ೧೨ ಮಿಲಿಯನ್ ಜನರು ಈ ರೋಗ ಪೀಡತರಾಗಿದ್ದಾರೆ. ಪ್ರಾಥಮಿಕ ಹಂತದಲ್ಲಿ ನುರಿತ ವೈದ್ಯರ ಸಲಹೆ ಮತ್ತು ಚಿಕಿತ್ಸೆಯಿಂದ ಇದರಿಂದ ಸಂಪೂರ್ಣ ಗುಣಮುಖರಾಗಬಹುದು ಎಂದು ಬೆಂಗಳೂರು ನಗರ ಮೂಲಕ ಸ್ಪರ್ಶ ಆಸ್ಪತ್ರೆಯ ಹಿರಿಯ ನರರೋಗ ಶಸ್ತ್ರಚಿಕಿತ್ಸಕ ಡಾ.ನಿಹಾಲ್ ಅಹಮದ್ ಹೇಳಿದರು.
ಮಂಗಳೂರು: ಅಪಸ್ಮಾರ (ಮೂರ್ಛೆ ರೋಗ) ರೋಗ ಮೆದುಳಿನಲ್ಲಿನ ನರಕೋಶಗಳಿಗೆ ಉಂಟಾಗುವ ಹಾನಿ, ಅಸಮತೋಲನ, ನರಗಳ ದೌರ್ಬಲ್ಯದಿಂದ ಬರುವ ಖಾಯಿಲೆ. ದೇಶದಲ್ಲಿ ಸುಮಾರು ೧೨ ಮಿಲಿಯನ್ ಜನರು ಈ ರೋಗ ಪೀಡತರಾಗಿದ್ದಾರೆ. ಪ್ರಾಥಮಿಕ ಹಂತದಲ್ಲಿ ನುರಿತ ವೈದ್ಯರ ಸಲಹೆ ಮತ್ತು ಚಿಕಿತ್ಸೆಯಿಂದ ಇದರಿಂದ ಸಂಪೂರ್ಣ ಗುಣಮುಖರಾಗಬಹುದು ಎಂದು ಬೆಂಗಳೂರು ನಗರ ಮೂಲಕ ಸ್ಪರ್ಶ ಆಸ್ಪತ್ರೆಯ ಹಿರಿಯ ನರರೋಗ ಶಸ್ತ್ರಚಿಕಿತ್ಸಕ ಡಾ.ನಿಹಾಲ್ ಅಹಮದ್ ಹೇಳಿದರು.
ಅವರು ಭಾರತೀಯ ವೈದ್ಯಕೀಯ ಸಂಸ್ಥೆ, ಮಂಗಳೂರು ಶಾಖೆ, ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ಸಹಯೋಗದಲ್ಲಿ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ವೈದ್ಯಕೀಯ ಕಾರ್ಯಾಗಾರದಲ್ಲಿ ಅತಿಥಿ ಉಪನ್ಯಾಸ ನೀಡಿದರು.ಗ್ರಾಮೀಣ ಪ್ರದೇಶಗಳ ಅವಿದ್ಯಾವಂತ ಜನರಲ್ಲಿ ಇರುವ ಮೂಢನಂಬಿಕೆಯಂತೆ ಅಪಸ್ಮಾರ ಒಂದು ಶಾಪವಲ್ಲ, ಅದು
ಸಂಪೂರ್ಣವಾಗಿ ಗುಣಪಡಿಸಲಾಗುವ ಖಾಯಿಲೆ ಎಂದು ಜನಜಾಗೃತಿ ಮೂಡಿಸಿದರು.ಸ್ಪರ್ಶ ಆಸ್ಪತ್ರೆಯ ಹಿರಿಯ ನರರೋಗ ಶಾಸ್ತ್ರತಜ್ಞ ಡಾ.ಬಾಲಾಜಿ ಮಾತನಾಡಿ, ಅಪಸ್ಮಾರ ರೋಗದ ಮುಖ್ಯ ಕಾರಣಗಳಾದ ಧೀರ್ಘಕಾಲಿಕ ಮದ್ಯಸೇವನೆ, ಅತಿಯಾದ ಧೂಮ್ರಪಾನ, ನಿದ್ರಾಹೀನತೆ, ತಲೆಗೆ ಗಾಯ, ಅನುವಂಶಿಕಅಂಶಗಳು, ನಿಯಮಿತ ದೈಹಿಕ ವ್ಯಾಯಾಮದ ಕೊರತೆ, ಪೌಷ್ಟಿಕ ಆಹಾರದ ಕೊರತೆ, ಬದಲಾದ ಜೀವನ ಶೈಲಿ ಎಂದರು.
ನಗರದ ಖ್ಯಾತ ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್ ಅವರು ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಮತ್ತು ಲಾಭಾಂಶಗಳಬಗ್ಗೆ ಅತಿಥಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಇಬ್ಬರು ವೈದ್ಯರನ್ನು ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಹಾಗೂ ಸಂಸ್ಥೆಯ ಮಾಜಿ ಕಾರ್ಯದರ್ಶಿಯವರನ್ನು ಸನ್ಮಾನಿಸಲಾಯಿತು.ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಚಕ್ರಪಾಣಿ, ಸಂಸ್ಥೆಯ ಚುನಾಯಿತ ಅಧ್ಯಕ್ಷ ಡಾ.ಉಲ್ಲಾಸ್ ಶೆಟ್ಟಿ, ಕೋಶಾಧಿಕಾರಿ ಡಾ.ಜ್ಯೂಲಿಯನ್ ಸಲ್ಡಾನ್ಹಾ, ವೆನ್‌ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಪ್ರಕಾಶ್, ಸ್ಪರ್ಶ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಅಧಿಕಾರಿ ಅಮೃತೇಶ್ ಇದ್ದರು.
ಅಗಲಿದ ಸಂಸ್ಥೆಯ ಮಾಜಿ ಅಧ್ಯಕ್ಷ ದಿ.ರಾಜೇಶ್ ಬಲ್ಲಾಳ್‌ರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ಅಕ್ಷತಾ ನಿರೂಪಿಸಿದರು.
----