ಪ್ರತಿಫಲಾಕ್ಷೆ ಇಲ್ಲದೇ ಮಾಡಿದ ಸೇವೆ ಜೀವಂತ: ಬಿ.ಜೆ.ಜಗದೀಶ್

KannadaprabhaNewsNetwork | Published : Mar 1, 2024 2:17 AM

ಸಾರಾಂಶ

ಯಾವುದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಮಾಡಿದರೆ ಅವರು ಜನರ ಮನಸ್ಸಿನಲ್ಲಿ ಸದಾ ಜೀವಂತವಾಗಿ ಉಳಿಯುತ್ತಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಜೆ.ಜಗದೀಶ್ ಹೇಳಿದರು.

- ವಯೋನಿವೃತ್ತಿ ಹೊಂದಿದ ಬಿಇಒ ಎಚ್.ಗಂಗಾಧರ್ ಗೆ ಗುರುಭವನದಲ್ಲಿ ಬಿಳ್ಕೊಡುಗೆ । ಅಭಿನಂದನಾ ಸಮಾರಂಭಕನ್ನಡಪ್ರಭ ವಾರ್ತೆ, ಬೀರೂರು.

ಯಾವುದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಮಾಡಿದರೆ ಅವರು ಜನರ ಮನಸ್ಸಿನಲ್ಲಿ ಸದಾ ಜೀವಂತವಾಗಿ ಉಳಿಯುತ್ತಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಜೆ.ಜಗದೀಶ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಗುರುವಾರ ಸಂಜೆ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಸಂಘದಿಂದ ವಯೋನಿವೃತ್ತಿ ಹೊಂದಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗಂಗಾಧರ್ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣ ಇಲಾಖೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ನಿವೃತ್ತಿ ಹೊಂದುವುದು ಕಷ್ಟ ಸಾಧ್ಯ. ಆದರೆ ಬಿಇಒ ಗಂಗಾಧರಪ್ಪನವರು ಶಾಂತ. ಸೌಮ್ಯ ಸ್ವಭಾವದಿಂದ ಕರ್ತವ್ಯ ನಿರ್ವಹಿಸಿ, ತಾಳ್ಮೆ ಮತ್ತು ವಿವೇಚನಾ ಶಕ್ತಿ ಮೂಲಕ ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರ ಮನಗೆದ್ದು ನಿವೃತ್ತಿ ಹೊಂದುತ್ತಿದ್ದಾರೆ. ನಿವೃತ್ತಿ ಜೀವನ ಸುಖಕರವಾಗಿರಲೆಂದರು. ಶಿಕ್ಷಣ ಇಲಾಖೆ ಬಿ.ಆರ್.ಸಿ ಶೇಖರಪ್ಪ, ಸರ್ಕಾರಿ ಸೇವೆಗೆ ಸೇರಿದ ಮೇಲೆ ನಿವೃತ್ತಿ ಸಾಮಾನ್ಯ.ಸರ್ಕಾರಿ ನೌಕರರಿಗೆ ಜವಾಬ್ದಾರಿ ಜಾಸ್ತಿ. ಸಮಾಜ ಸುಧಾರಣೆಗೆ ಮತ್ತು ಪರಿವರ್ತನೆಗೆ ಕೆಲಸ ಮಾಡುವ ಮೂಲಕ ತಮ್ಮ ಇಡೀ ಜೀವನವನ್ನೇ ಮುಡುಪಾಗಿಡುತ್ತೇವೆ. ಗಂಗಾಧರಪ್ಪನವರ ಸ್ಥಿತ ಪ್ರಜ್ಞೆತೆ ಮೂಲಕ ಇಲಾಖೆ ಮತ್ತು ಎಲ್ಲ ಶಿಕ್ಷಕರ ಸಮಸ್ಯೆಗಳನ್ನು ಬಗೆ ಹರಿಸುತ್ತಿರುವುದನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದರು.

ಸರ್ಕಾರಿ ಸೇವಕರು ಸೇವೆಯಲ್ಲಿ ಧೃಡತೆ ಹೊಂದುವ ಮೂಲಕ ಕುಸಿಯುತ್ತಿರುವ ಮೌ ಲ್ಯ ಗಳನ್ನು ಮೇಲೆತ್ತಬೇಕು. ಯಾವ ಮನುಷ್ಯ ತಾಳ್ಮೆ ಮತ್ತು ಮೌನವನ್ನು ಅಳಡಿಸಿಕೊಂಡಿರುತ್ತಾನೆಯೋ ಅವನು ಎಂತಹ ಕ್ಲಿಷ್ಟ ಸಮಸ್ಯೆಗಳನ್ನು ಎದುರಿಸಬಲ್ಲ ಎನ್ನುವುದ್ದಕ್ಕೆ ಬಿಇಒ ಗಂಗಾಧರ್ ಮಾದರಿಯಾಗಿದ್ದಾರೆ ಎಂದರು.

ಲಿಂಗದಹಳ್ಳಿ ಮುಖ್ಯಶಿಕ್ಷಕ ಜೆ.ಎಂ.ಸೋಮಶೇಖರ್ ಮಾತನಾಡಿ, ಮನುಷ್ಯನಿಗೆ ಅಧಿಕಾರ ಶಾಶ್ವತವಲ್ಲ. ತಮ್ಮ ಅವಧಿ ಯಲ್ಲಿ ಏನು ಸಾಧಿಸಿದ್ದೇವೆ, ಏನು ಸಂಪಾದಿಸಿದ್ದೇವೆ ಎನ್ನುವುದು ಮುಖ್ಯ. ಸರಳತೆಯಿಂದ ಕರ್ತವ್ಯ ನಿರ್ವಹಿಸಿ ಶಿಕ್ಷಕರ ಜನಮಾನಸದಲ್ಲಿ ಉಳಿದಿರುವ ಇಂತಹ ಅಧಿಕಾರಿಯನ್ನು ನಾವು ಆದರ್ಶವಾಗಿಟ್ಟುಕೊಂಡು ಕಾರ್ಯನಿರ್ವಹಿಸೋಣ ಎಂದರು.

ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಎಚ್. ಮರುಳಸಿದ್ದಪ್ಪ ಮಾತನಾಡಿ, ನೇರನಡೆ ಮತ್ತು ಉದಾರ ಮನಸ್ಸುಳ್ಳ ಬಿಇಒ ರವರು ಶಿಕ್ಷಕರ ಯಾವುದೇ ಸಮಸ್ಯೆಗಳಿದ್ದರೂ ಸ್ಪಂದಿಸಿ ಅವರಿಗೆ ನೆರವಾಗುತ್ತಿದ್ದರು. ಅವರ ಕ್ರೀಯಾಶೀಲತೆ ನಿವೃತ್ತಿ ನಂತರ ಅವರ ಜೀವನವನ್ನು ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಟ್ಟುಕೊಂಡು ಆರೋಗ್ಯ ಕಾಪಾಡಿ ಕೊಳ್ಳಲಿ ಎಂದು ಆಶಿಸಿದರು.

ಬಿಳ್ಕೊಡುಗೆ ಮತ್ತು ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿಇಒ ಎಚ್.ಗಂಗಾಧರ್ , ಸಮಾಜ ಕಟ್ಟುವ ನಿರಂತರ ಪ್ರಕ್ರಿಯೆಯಲ್ಲಿ ತನ್ನನ್ನು ಸದಾ ತೊಡಗಿಸಿಕೊಂಡಿರುವ ಶಿಕ್ಷಕ ಆ ವೃತ್ತಿ ಅವಲಂಬಿಸಿದ ಮೇಲೆ ಜೀವನ ಪರ್ಯಂತ ಶಿಕ್ಷಕನಾಗಿಯೇ ಇರುತ್ತಾನೆ ಎಂದರು.

ವಿದ್ಯಾರ್ಥಿಗಳಿಗೆ ಜಗತ್ತಿನ ಬದಲಾವಣೆ ಕುರಿತು ಪೂರಕವಾಗಿ ಪಾಠ ಹೇಳಬೇಕಾದ ಶಿಕ್ಷಕ ಅಧ್ಯಯನ ಶೀಲನಾಗಿರ ಬೇಕಾದ್ದು ಅತ್ಯಂತ ಪ್ರಮುಖ. ಎಲ್ಲಾ ಕ್ಷೇತ್ರಗಳಲ್ಲಿ ಸ್ವಾರ್ಥ ಕಾಣಬಹುದು ಆದರೆ ಶಿಕ್ಷಣ ಕ್ಷೇತ್ರದಲ್ಲಿ ಸ್ವಾರ್ಥ ವಿಲ್ಲ. ಮುಂದಿನ ಪೀಳಿಗೆ ತಯಾರು ಮಾಡುವ ಕರ್ತವ್ಯ ಹಾಗೂ ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರ ಕೈಯಲ್ಲಿದೆ. ಆ ಹೊಣೆಗಾರಿಕೆ ಯನ್ನು ಶಿಕ್ಷಕರು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವುದು ಅಗತ್ಯ. ಇಲಾಖೆಯಲ್ಲಿ ಈ ಹುದ್ದೆಗೆ ಬಂದವರು ಶಿಕ್ಷಕರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಕಾರ್ಯನಿರ್ವಹಿಸಿದರೆ ಶಿಕ್ಷಕರು ಕರ್ತವ್ಯ ನಿರ್ವಹಿಸಲು ಉತ್ಸಾಹ ತೋರುತ್ತಾರೆ ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ಬಸಪ್ಪ, ಮೈಲಾರಪ್ಪ, ಬಿ.ಟಿ.ಅಜ್ಜಯ್ಯ, ಭಾಗ್ಯಮ್ಮ, ಆರ್.ಟಿ.ಅಶೋಕ್, ಕೃಷ್ಣಮೂರ್ತಿ, ರಾಮಚಂದ್ರಪ್ಪ ಮಾತನಾಡಿದರು. ವೇದಿಕೆಯಲ್ಲಿ ಗೀತಾಜ್ಞಾನಮೂರ್ತಿ, ರಾಜಪ್ಪ, ವೀರಮಾರುತಿ, ಮೋಹನ್ ರಾಜ್, ಚನ್ನವೀರಕಣವಿ, ಬೆನಕಪ್ಪ, ಜನಾರ್ಧನ್, ಸೀತಾಲಕ್ಷ್ಮಿ,ವಸಂತ್,ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.29 ಬೀರೂರು 1ಬೀರೂರಿನ ಗುರುಭವನದಲ್ಲಿ ಗುರುವಾರ ವಯೋನಿವೃತ್ತಿ ಹೊಂದಿದ ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಗಂಗಾಧರ್ ರವರಿಗೆ ಶಿಕ್ಷಕರ ಸಂಘ ಮತ್ತು ಇಲಾಖೆ ವತಿಯಿಂದ ಗೌರವಿಸಿ ಬೀಳ್ಕೊಡುಗೆ ನೀಡಲಾಯಿತು.

Share this article