ದೇಶದ ಅಭ್ಯುದಯಕ್ಕೆ ಮಾಡುವ ಸೇವೆಯೂ ದೇಶಪ್ರೇಮ

KannadaprabhaNewsNetwork |  
Published : Jul 28, 2024, 02:08 AM IST
ಲೋಕಾಪುರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಲೋಕಾಪುರಸೇನೆ ಸೇರುವುದು ಮಾತ್ರವಲ್ಲ, ದೇಶದ ಅಭ್ಯುದಯಕ್ಕಾಗಿ ಸಲ್ಲಿಸುವ ಪ್ರತಿ ಸೇವೆಯೂ ದೇಶ ಪ್ರೇಮವೆನಿಸುತ್ತದೆ ಎಂದು ಉಪತಹಸೀಲ್ದಾರ್‌ ಸತೀಶ ಬೇವೂರ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾಜಿ ಸೈನಿಕರ ಸಂಘದಿಂದ ಹಮ್ಮಿಕೊಂಡ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯದ ನಂತರ ಐದು ಪ್ರಮುಖ ಯುದ್ಧಗಳು ನಡೆದಿವೆ. ಪಾಕಿಸ್ತಾನ ನಾಲ್ಕು ಯುದ್ದಗಳಲ್ಲಿ ಸೋತಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಲಿದಾನವನ್ನು ಸ್ಮರಿಸಬೇಕು, ಸೈನಿಕರ ನಿಸ್ವಾರ್ಥ ಸೇವೆ ಸ್ಮರಣೀಯ ಎಂದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸೇನೆ ಸೇರುವುದು ಮಾತ್ರವಲ್ಲ, ದೇಶದ ಅಭ್ಯುದಯಕ್ಕಾಗಿ ಸಲ್ಲಿಸುವ ಪ್ರತಿ ಸೇವೆಯೂ ದೇಶ ಪ್ರೇಮವೆನಿಸುತ್ತದೆ ಎಂದು ಉಪತಹಸೀಲ್ದಾರ್‌ ಸತೀಶ ಬೇವೂರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾಜಿ ಸೈನಿಕರ ಸಂಘದಿಂದ ಹಮ್ಮಿಕೊಂಡ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯದ ನಂತರ ಐದು ಪ್ರಮುಖ ಯುದ್ಧಗಳು ನಡೆದಿವೆ. ಪಾಕಿಸ್ತಾನ ನಾಲ್ಕು ಯುದ್ದಗಳಲ್ಲಿ ಸೋತಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಲಿದಾನವನ್ನು ಸ್ಮರಿಸಬೇಕು, ಸೈನಿಕರ ನಿಸ್ವಾರ್ಥ ಸೇವೆ ಸ್ಮರಣೀಯ ಎಂದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಿ.ಎಂ.ಪಾಟೀಲ ಮಾತನಾಡಿ, ದೇಶದ ಮೇಲೆ ಎಷ್ಟೇ ದಾಳಿಗಳಾದರೂ ನಮ್ಮ ಸಾಂಸ್ಕೃತಿಕ ಹಿನ್ನಲೆ ನಾಶಮಾಡಲು ಸಾಧ್ಯವಾಗಿಲ್ಲ. ಕಾರ್ಗಿಲ್‌ ಯುದ್ಧ ಪಾಕಿಸ್ತಾನ ನಮ್ಮ ಬೆನ್ನಿಗೆ ಹಾಕಿದ ಚೂರಿ, ಕ್ಯಾ.ವಿಕ್ರಂ ಬಾತ್ರ, ರಾಜೇಶ ಅಧಿಕಾರಿ, ಕರ್ನಲ್ ರವೀಂದ್ರನಾಥ ಸೇರಿ ಹಲವು ಸೈನಿಕರ ಬಲಿದಾನದ ನಂತರ ನಾವು ಕಾರ್ಗಿಲ್ ಕದನ ಗೆದ್ದೆವು. ಮೊದಲ ಬಾರಿಗೆ ಹುತಾತ್ಮರ ದೇಹಗಳನ್ನು ಮನೆಗೆ ತಲುಪಿಸುವ ಕೆಲಸ ನಡೆಯಿತು. ಇಂದಿಗೂ ಯುದ್ಧ ನಿಂತಿಲ್ಲ ಆದರೆ ಯುದ್ಧದ ರೂಪ ಬದಲಾಗಿದೆ ಎಂದು ತಿಳಿಸಿದರು.

ಬಸವೇಶ್ವರ ವೃತ್ತದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ವಿಶೇಷಪೂಜೆ ಸಲ್ಲಿಸಿ ಘೋಷಣೆಗಳನ್ನು ಮೊಳಗಿಸಿದರು. ದೇಶದ ಪ್ರತೀಕವಾಗಿ ಎಲ್ಲ ಮಾಜಿ ಸೈನಿಕರ ವಿಶೇಷ ವಸ್ತ್ರಗಳನ್ನು ಧರಿಸಿ ಗಮನಸೆಳೆದರು.

ಈ ವೇಳೆ ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಉದ್ಯಮಿ ಎಂ.ಎಂ.ವಿರಕ್ತಮಠ, ಬಸವೇಶ್ವರ ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ಚುಳಕಿ, ಸದಾಶಿವ ಹಗ್ಗದ, ಹೊಳಬಸು ದಂಡಿನ, ವೆಂಕಟೇಶ ತುಳಸಿಗೇರಿ, ಸುನೀಲ ವಸ್ತ್ರದ, ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ತಿಮ್ಮಣ್ಣ ಶಿರಬೂರ, ಉಪಾಧ್ಯಕ್ಷ ಭೀಮಪ್ಪ ಅರಳಿಕಟ್ಟಿ, ಕಾರ್ಯದರ್ಶಿ ವಿಷ್ಣು ಪಾಟೀಲ, ಸದಸ್ಯರಾದ ಸುಭಾಸ ಸೊನ್ನದ, ವಿಠ್ಠಲ ಹಡಪದ, ವೆಂಕಪ್ಪ ಕೊಳಚಿ, ರಂಗಪ್ಪ ತಳವಾರ, ಹುಸೇನಸಾಬ ಕರನಾಚಿ, ರಮೇಶ ಸಿಮಗಿ, ಮಂಜು ನಿಲಗುಂದ, ಚಿದಾನಂದ ಮಾಳಗಿ, ಲಕ್ಷ್ಮಣ ಹುಲಗನ್ನವರ, ಬಾಲಪ್ಪ ಪಾಟೀಲ, ಸತೀಶ ಬಾಲರಡ್ಡಿ, ಅಮೀನ ದಂಡಿನ, ಗೋಪಾಲ ಸಣ್ಣರಾಯಪ್ಪನವರ, ಶಿಕ್ಷಕ ವಿವೇಕ ಮರಾಠಿ ಮುಂತಾದವರು ಇದ್ದರು.--------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ