ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ, ಕನ್ನಡ ರಾಜ್ಯೋತ್ಸವಕನ್ನಡಪ್ರಭ ವಾರ್ತೆ ಚಳ್ಳಕೆರೆ
ಆಡಳಿತ ಮತ್ತು ಜನರ ನಡುವೆ ಸ್ನೇಹ ಸೇತುವೆಯಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ. ಸಮಾಜದ ಹಿತಕ್ಕಾಗಿ ಶ್ರಮಿಸುವ ಅವರನ್ನು ಗೌರವಿಸುವ ಕೆಲಸ ಆಗಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.ಭಾನುವಾರ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್, ಯಾವುದೇ ತಾರತಮ್ಯವಿಲ್ಲದೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಿಗೆ ಸರ್ಕಾರದ ಜಾಹೀರಾತು, ಸ್ಥಳೀಯ ಪತ್ರಕರ್ತರಿಗೆ ನಿವೇಶನ, ಮನೆ ಮುಂತಾದ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಲ್ಲದೆ, ಮುಖ್ಯಮಂತ್ರಿಗಳ ಮೇಲೂ ಒತ್ತಡ ಹೇರತ್ತೇನೆಂದು ಭರವಸೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ದಿನೇಶ್‌ಗೌಡಗೆರೆ, ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ತೃಪ್ತಿಕಾರವಾಗಿ ಕಾರ್ಯನಿರ್ವಹಿಸಿಲ್ಲ. ಶಾಸಕರು ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುವಂತೆ ಮನವಿ ಮಾಡಿದರು.ತಾಲೂಕು ಪತ್ರಿಕಾ ಸಂಘದ ಉಪಾಧ್ಯಕ್ಷ ಕರ‍್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಎಲ್ಲಾ ಪತ್ರಕರ್ತರನ್ನು ಗೌರವಿಸುವ ಗುಣ ಶಾಸಕರಲ್ಲಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕೆಂದು ವಿನಂತಿಸಿದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಪರಿಷತ್ ಸದಸ್ಯ ಎಂ.ಎನ್.ಅಹೋಬಲಪತಿ ಮಾತನಾಡಿ, ಪತ್ರಕರ್ತರಿಗೆ ಸೌಲಭ್ಯ ನೀಡುವ ವಿಚಾರದಲ್ಲಿ ಕಡೆಪಕ್ಷ ಮಾಧ್ಯಮದಲ್ಲಿ ೧೦ ವರ್ಷ ಸೇವೆ ಮಾಡಿದವರಿಗೆ ಆದ್ಯತೆ ನೀಡಬೇಕು ಎಂದರು.ರಾಷ್ಟ್ರೀಯ ಮಂಡಳಿ ಸದಸ್ಯ ಹೆಂಜಾರಪ್ಪ ಮಾತನಾಡಿ, ಯಾವುದೇ ತಾರತಮ್ಯವಿಲ್ಲದೆ ರಾಜ್ಯ, ಪ್ರಾದೇಶಿಕ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪತ್ರಿಕೆಗಳಿಗೆ ಕಡೆಪಕ್ಷ ತಿಂಗಳಿಗೆ ಎರಡ್ಮೂರಾದರೂ ಸರ್ಕಾರದಿಂದ ಜಾಹೀರಾತು ನೀಡಬೇಕೆಂದು ಮನವಿ ಮಾಡಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಿ.ತಿಪ್ಪೇಸ್ವಾಮಿ, ಡಿವೈಎಸ್ಪಿ ಟಿ.ಬಿ.ರಾಜಣ್ಣ, ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ ಮಾತನಾಡಿದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ದಯ್ಯನಕೋಟೆಯ ಬಸವಲಿಂಗಸ್ವಾಮೀಜಿ ವಹಿಸಿದ್ದರು. ಡಾ.ಬಿ.ಚಂದ್ರನಾಯ್ಕ, ಪಿ.ತಿಪ್ಪೇಸ್ವಾಮಿ, ನಾವೆಲ್ಲಾ ಮಹೇಶ್, ಗೋಪನಹಳ್ಳಿ ಶಿವಣ್ಣ, ಅಪ್ಪುವೀರೇಶ್, ಲಕ್ಷ್ಮಣ ಪಾಳೇಗಾರ, ಡಿ.ಕುಮಾರಸ್ವಾಮಿ, ಜೆ.ಮಂಜುನಾಥ, ಎಚ್.ಟಿ.ಮಂಜುನಾಥ ಮುಂತಾದವರನ್ನು ಸನ್ಮಾನಿಸಲಾಯಿತು. ರೈತ ಸಂಘದ ಹಿರಿಯ ಮುಖಂಡ ರೆಡ್ಡಿಹಳ್ಳಿವೀರಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದಕುಮಾರ್, ಪತ್ರಕರ್ತರಾದ ಬೊಮ್ಮಲಿಂಗಪ್ಪ, ರಾಮಾಂಜನೇಯ, ಬೆಳಗೆರೆ ಸುರೇಶ್, ಚಿದಾನಂದಮೂರ್ತಿ, ಗಂಗಾಧರ, ಜೆ.ತಿಮ್ಮಯ್ಯ, ಭಾರತಿಚಿತ್ತಯ್ಯ, ಎಸ್‌ಟಿಡಿ ರಾಜು, ಎಚ್.ಶಿವಮೂರ್ತಿ, ಕೆ.ಚಿತ್ತಯ್ಯ, ಬಿ.ಲೋಕೇಶ್ ಉಪಸ್ಥಿತರಿದ್ದರು.