ಆನಂದಕ್ಕೆ ಸೇವೆ, ಅಧ್ಯಾತ್ಮವೂ ಮುಖ್ಯ: ಸದ್ಗುರು ಮಧುಸೂದನ ಸಾಯಿ

KannadaprabhaNewsNetwork | Published : Dec 19, 2024 12:31 AM

ಸಾರಾಂಶ

ಸ್ವಾರ್ಥ ಪ್ರೀತಿಯ ಅನುಭವವೇ ಭಗವಂತನ ದರ್ಶನ. ಪರೋಪಕಾರ ಮತ್ತು ಒಳ್ಳೆಯ ಮಾರ್ಗದಲ್ಲಿ ಸಾಗಬೇಕೆಂಬುದೇ ಗೀತೆಯ ಸಾರ. ಮನಸ್ಸಿನಲ್ಲಿ ಸದಾ ಉದಾತ್ತ. ನಿಸ್ವಾರ್ಥ ಮನೋಭಾವ ಅಗತ್ಯ.

ಯಲ್ಲಾಪುರ: ಆಧ್ಯಾತ್ಮಿಕತೆ ಭಾರತದ ವಿಶೇಷ ಶಕ್ತಿ. ಅಧ್ಯಾತ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಭಾರತ ವಿಶ್ವ ನಾಯಕನಾಗಿ ಹೊರಹೊಮ್ಮಲಿದೆ. ಬದಲಾಗಿ ಇದು ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದು ಜಾಗತಿಕ ಮಾನವತಾವಾದಿ ಸದ್ಗುರು ಮಧುಸೂದನ ಸಾಯಿ ವಿಶ್ಲೇಷಿಸಿದರು.ಪಟ್ಟಣದ ಅಡಿಕೆ ಭವನದಲ್ಲಿ ಮಂಗಳವಾರ ಸಂಜೆ ನಡೆದ ದಿವ್ಯಸಂಜೆ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.ಸೇವೆ ಮತ್ತು ಅಧ್ಯಾತ್ಮ ಬೇರೆ ಬೇರೆ ಅಲ್ಲ. ಮಾನಸಿಕ ಆನಂದಕ್ಕೆ ಸೇವೆ ಮತ್ತು ಅಧ್ಯಾತ್ಮ ಎರಡೂ ಮುಖ್ಯ. ಅಧ್ಯಾತ್ಮ ಮಾರ್ಗದ ಸಾಧಕ ಸೇವೆಯಲ್ಲಿ ಆಸಕ್ತನಿರುತ್ತಾನೆ ಎಂದರು.ಗುರುಕುಲ ಮಾದರಿಯ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದ ಅವರು, ಪಾಶ್ಚಾತ್ಯ ಶಿಕ್ಷಣದ ಅನುಸರಣೆಯಿಂದ ಮಕ್ಕಳಲ್ಲಿ ಹಣವೇ ಯಶಸ್ಸು ಎಂಬ ತಪ್ಪು ಕಲ್ಪನೆ ಬರುತ್ತಿದೆ. ಪ್ರಧಾನ ಶಿಕ್ಷಣದ ಜತೆಗೆ ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನೂ ನೀಡಬೇಕು. ಇವೆರಡು ಜತೆ ಜತೆಯಾಗಿ ಹೋದಾಗ ಮಕ್ಕಳಲ್ಲಿ ನಿರಾಶಾವಾದ, ಖಿನ್ನತೆ ಮಾಯವಾಗುತ್ತದೆ. ಎಲ್ಲ ಪ್ರತಿಭೆಗಳಿಗೂ ಆರ್ಥಿಕ ಲಾಭ ಇರಲಾರದು. ಸಂತೋಷವೇ ನಿಜವಾದ ಯಶಸ್ಸು ಎಂಬುದನ್ನು ಮಕ್ಕಳಿಗೆ ತಿಳಿಸಬೇಕು ಎಂದರು.ನಿಸ್ವಾರ್ಥ ಪ್ರೀತಿಯ ಅನುಭವವೇ ಭಗವಂತನ ದರ್ಶನ. ಪರೋಪಕಾರ ಮತ್ತು ಒಳ್ಳೆಯ ಮಾರ್ಗದಲ್ಲಿ ಸಾಗಬೇಕೆಂಬುದೇ ಗೀತೆಯ ಸಾರ. ಮನಸ್ಸಿನಲ್ಲಿ ಸದಾ ಉದಾತ್ತ. ನಿಸ್ವಾರ್ಥ ಮನೋಭಾವ ಅಗತ್ಯ. ವ್ಯಕ್ತಿ ಸರಿಯಾಗಿದ್ದರೆ ಕುಟುಂಬ ಉಳಿಯುತ್ತದೆ. ಸ್ವಾರ್ಥ ಹೆಚ್ಚಾದಾಗ ಕುಟುಂಬದ ಉಳಿವು ಅಸಾಧ್ಯ. ಕುಟುಂಬದ ಸದಸ್ಯರಿಗಾಗಿ ತ್ಯಾಗ ಮಾಡುವುದನ್ನು ಆರಂಭಿಸವೇಕು. ಚಿಕ್ಕ ಮಕ್ಕಳಲ್ಲಿ ಪ್ರೀತಿ, ಪ್ರೇಮ, ಕರುಣೆ ಇರುತ್ತದೆ. ದೊಡ್ಡವರಾದಂತೆ ಈ ಭಾವ ಬದಲಾಗಲು ಶಿಕ್ಷಣವೂ ಕಾರಣ. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯ ಎಂದರು.ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಸಂವಾದ ನಡೆಸಿಕೊಟ್ಟರು. ಸತ್ಯಸಾಯಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಇಂಚರಾ ಹೆಗಡೆ ತಮ್ಮ ಕಲಿಕಾ ಅನುಭವ ಹಂಚಿಕೊಂಡು, ಶಾಲೆ ನಮಗೆ ಶಾಂತಿಯ ದೇಗುಲದಂತಿದೆ. ಸಾಯಿ ವಿದ್ಯಾ ಸಂಸ್ಥೆಯಲ್ಲಿನ ಓದು ನಮ್ಮ ಜೀವನ ದೃಷ್ಟಿಯಲ್ಲಿ ಗುಣಾತ್ಮಕ ಬದಲಾವಣೆ ತಂದಿದೆ ಎಂದರು. ಅನಿತಾ ರಾಘವೇಂದ್ರ ಹೆಗಡೆ ಸ್ವಾಗತಿಸಿದರು. ಬಿ.ಎನ್. ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಹೆಗಡೆ ವಂದಿಸಿದರು.ಆನಂದಕ್ಕೆ ಸೇವೆ, ಅಧ್ಯಾತ್ಮವೂ ಮುಖ್ಯ: ಸದ್ಗುರು ಮಧುಸೂದನ ಸಾಯಿ

Service, spirituality also important for bliss: Sadhguru Madhusudana Sai

ಯಲ್ಲಾಪುರ ಸುದ್ದಿ, ಅಧ್ಯಾತ್ಮ, ಸದ್ಗುರು ಮಧುಸೂದನ ಸಾಯಿ, ಹರಿಪ್ರಕಾಶ ಕೋಣೆಮನೆ, Yellapur News, Spirituality, Sadguru Madhusudan Sai, Hariprakash Konemane

ನಿಸ್ವಾರ್ಥ ಪ್ರೀತಿಯ ಅನುಭವವೇ ಭಗವಂತನ ದರ್ಶನ. ಪರೋಪಕಾರ ಮತ್ತು ಒಳ್ಳೆಯ ಮಾರ್ಗದಲ್ಲಿ ಸಾಗಬೇಕೆಂಬುದೇ ಗೀತೆಯ ಸಾರ. ಮನಸ್ಸಿನಲ್ಲಿ ಸದಾ ಉದಾತ್ತ. ನಿಸ್ವಾರ್ಥ ಮನೋಭಾವ ಅಗತ್ಯ.

Share this article