ವಿಕಲಚೇತನ ಮಕ್ಕಳ ಸೇವೆಯಿಂದ ದೇವರ ಸೇವೆಯಷ್ಟೇ ಪುಣ್ಯ: ದೀಪಕ್‌ದೊಡ್ಡಯ್ಯ

KannadaprabhaNewsNetwork |  
Published : Dec 28, 2025, 02:15 AM IST
ನಗರದ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯಲ್ಲಿ ಯುರೇಕಾ ಅಕಾಡೆಮಿ ಮತ್ತು ಆಶ್ರಯ ಪೌಂಡೇ ಷನ್ ವತಿಯಿಂದ ಶನಿವಾರ ಆಯೋಜಿಸಿದ್ಧ ವಿಕಲಚೇತನ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್‌ದೊಡ್ಡಯ್ಯ  ಉದ್ಘಾಟಿಸಿದರು  | Kannada Prabha

ಸಾರಾಂಶ

ಚಿಕ್ಕಮಗಳೂರುವಿಕಲಚೇತನ ಮಕ್ಕಳ ಸೇವೆ ಮಾಡಿದರೆ ದೇವರ ಸೇವೆ ಮಾಡಿದಷ್ಟೇ ಪುಣ್ಯ ಲಭಿಸಲಿದೆ. ಪ್ರಪಂಚದ ಅರಿವಿಲ್ಲದ ಮಕ್ಕಳಿಗೆ ವಸಡಿನ ಸಮಸ್ಯೆ ಕಂಡುಬಂದಲ್ಲಿ ಪರಿಹರಿಸಲು ಸದಾಕಾಲ ಜೊತೆಗಿರುತ್ತೇವೆ ಎಂದು ಯುರೇಕಾ ಅಕಾಡೆಮಿ ಸಂಸ್ಥಾಪಕ ಹೇಳಿದರು.

ವಿಕಲಚೇತನ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾ ಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಕಲಚೇತನ ಮಕ್ಕಳ ಸೇವೆ ಮಾಡಿದರೆ ದೇವರ ಸೇವೆ ಮಾಡಿದಷ್ಟೇ ಪುಣ್ಯ ಲಭಿಸಲಿದೆ. ಪ್ರಪಂಚದ ಅರಿವಿಲ್ಲದ ಮಕ್ಕಳಿಗೆ ವಸಡಿನ ಸಮಸ್ಯೆ ಕಂಡುಬಂದಲ್ಲಿ ಪರಿಹರಿಸಲು ಸದಾಕಾಲ ಜೊತೆಗಿರುತ್ತೇವೆ ಎಂದು ಯುರೇಕಾ ಅಕಾಡೆಮಿ ಸಂಸ್ಥಾಪಕ ಹೇಳಿದರು.

ನಗರದ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯಲ್ಲಿ ಯುರೇಕಾ ಅಕಾಡೆಮಿ ಮತ್ತು ಆಶ್ರಯ ಪೌಂಡೇ ಷನ್ ನಿಂದ ಶನಿವಾರ ಆಯೋಜಿಸಿದ್ಧ ವಿಕಲಚೇತನ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾ ಟಿಸಿ ಮಾತನಾಡಿದರು. ಜಗತ್ತಿನಾದ್ಯಂತ ಅನೇಕ ಮಕ್ಕಳು ಅಂಗಾಂಗಗಳು ಬಲಿಷ್ಟವಾಗಿದ್ದರೂ ಜೀವನದ ಸಾಧನೆಯಲ್ಲಿ ಹಿನ್ನೆಡೆ ಅನುಭವಿಸಿದೆ. ಆದರೆ ಆಶಾಕಿರಣ ಮಕ್ಕಳು ಅಂಗಾಂಗಳ ವೈಫಲ್ಯತೆ ನಡುವೆ ವಿಶಿಷ್ಟ ಶಕ್ತಿಯಿಂದಲೇ ದೇಶ-ವಿದೇಶಗಳಲ್ಲಿ ಮನ್ನಣೆ ಗಳಿಸುವಂಥ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.ಒಲಂಪಿಕ್ಸ್‌ನಲ್ಲಿ ಆಶಾಕಿರಣ ಶಾಲೆ ರಕ್ಷಿತಾರಾಜು ಹಾಗೂ ಶವಾಜ್ ಎಂಬ ದೊಡ್ಡಸಾಹಿತಿ ವಿಶ್ವ ಕಪ್ ಕ್ರಿಕೇಟ್‌ನಲ್ಲಿ ಅವಕಾಶ ಲಭಿಸಿದೆ. ವಿಶೇಷವಾಗಿ ಈ ಸಾಧನೆಯಲ್ಲಿ ಆಶಾಕಿರಣ ಪಾಠಶಾಲೆ ಮಕ್ಕಳ ಕೊಡುಗೆ ಬಹಳಷ್ಟಿದೆ. ಹಾಗಾಗಿ ಜಿಲ್ಲೆಯ ಆಶಾಕಿರಣ ಶಾಲೆ ಭವ್ಯ ಮಂದಿರ ಎಂದು ತಿಳಿಸಿದರು.ಮಕ್ಕಳು ಸೇರಿದಂತೆ ದೊಡ್ಡವರಿಗೆ ಹಲ್ಲಿನ ಕಾಳಜಿ ಅತಿಮುಖ್ಯ. ಜೀವನಕ್ಕೆ ಆಹಾರ ಮುಖ್ಯ, ಆಹಾರ ಚೆನ್ನಾಗಿ ಜಗಿಯಲು ಹಲ್ಲುಗಳು ಬಲಿಷ್ಠವಾಗಿರಬೇಕು. ಆಹಾರ ಜೀರ್ಣಕ್ರಿಯೆ ಆರೋಗ್ಯದಿಂದ ಕೂಡಿರಲು ಮನುಷ್ಯನಿಗೆ ಹಲ್ಲು ಕಾರ್ಯ ಬಹಳಷ್ಟಿದೆ. ಹೀಗಾಗಿ ಹಲ್ಲಿನ ಸಮಸ್ಯೆಗಳಿದ್ದಲ್ಲಿ ಶೀಘ್ರವೇ ಬಗೆಹರಿಸಿಕೊಳ್ಳಬೇ ಕು ಎಂದು ಹೇಳಿದರು.ವಿಶೇಷವಾಗಿ ವಿಕಲಚೇತನ ಮಕ್ಕಳ ದೇವಾಲಯದಲ್ಲಿ ಸಂಪೂರ್ಣ ತಜ್ಞ ವೈದ್ಯರ ಕರೆಸಿ ಉಚಿತವಾಗಿ ಮಕ್ಕಳ ಹಲ್ಲಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗಿದೆ. ಮಕ್ಕಳಿಗೆ ಹಲ್ಲುಗಳ ಆರೋಗ್ಯಕ್ಕಾಗಿ ಪೇಸ್ಟ್, ಬ್ರೆಶ್ ಸೇರಿದಂತೆ ಸಲಕರಣೆಗಳನ್ನು ಎಲ್ಲಾ ಮಕ್ಕಳಿಗೆ ವಿತರಿಸಲಾಗಿದೆ ಎಂದರು.ಖ್ಯಾತ ಮಕ್ಕಳ ತಜ್ಞ ಡಾ. ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನವನ ಶರೀರಿದಲ್ಲಿ ಅನೇಕ ಮೂಳೆಗಳಿವೆ, ಇದರಲ್ಲಿ ಅತ್ಯಂತ ಶಕ್ತಿಯುತ ಹಲ್ಲು ಮೂಳೆ. ಇದಕ್ಕಿಂತ ಗಟ್ಟಿಯಾದ ಮೂಳೆ ದೇಹದಲ್ಲಿಲ್ಲ. ಮಕ್ಕಳು ಹಲ್ಲಿನ ಸುರಕ್ಷತೆ ಕಾಪಾಡಲು ವೈದ್ಯರ ಸಲಹೆ ಪಾಲಿಸಬೇಕು ಎಂದು ತಿಳಿಸಿದರು. ಲಿನ್ಸ್ ಇವೆಂಟ್ಸ್ ಉಪಾಧ್ಯಕ್ಷೆ ಪ್ರಿಯಾಂಕ ಭರತ್ ಮಾತನಾಡಿ ಹಲ್ಲುಗಳು ಸೌಂದರ್ಯ ಮತ್ತು ಆರೋ ಗ್ಯದ ಪ್ರತೀಕ. ಹೀಗಾಗಿ ಹಲ್ಲುಗಳನ್ನು ಚೆನ್ನಾಗಿ ಕಾಪಾಡಬೇಕು. ಎಲ್ಲಾ ಮಕ್ಕಳು ಈ ಉಚಿತ ದಂತ ಚಿಕಿ ತ್ಸಾ ಶಿಬಿರದ ಪ್ರಯೋಜನ ಸಂಪೂರ್ಣವಾಗಿ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಇದೇ ವೇಳೆ ದಂತ ಚಿಕಿತ್ಸಾ ಶಿಬಿರದಲ್ಲಿ ಸುಮಾರು 50 ಮಕ್ಕಳು ಭಾಗವಹಿಸಿ ತಪಾಸಣೆಗೆ ಒಳಗಾದ ರು. ಕಾರ್ಯಕ್ರಮದಲ್ಲಿ ದಂತ ವೈದ್ಯೆ ಡಾ.ಭೂಮಿಕಾ ಶೇಖರ್, ಆಶ್ರಯ ಫೌಂಡೇಷನ್ ಅಧ್ಯಕ್ಷೆ ಡಾ.ವರ್ಷ , ಜಿಲ್ಲಾ ಆರೋಗ್ಯ ಇಲಾಖೆ ವ್ಯವಸ್ಥಾಪಕ ವಿ.ವಿನಯ್, ರಂಗನಿರ್ದೇಶಕಿ ಪ್ರತಿಭಾ ನಂದಕುಮಾರ್, ಪ್ರಭಾರಿ ಮುಖ್ಯೋಪಾಧ್ಯಾಯ ಲಕ್ಷ್ಮೇಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ ದಯಾನಂದ್, ನಗರಾಧ್ಯಕ್ಷ ಸಚಿನ್‌ಸಿಂಗ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ