ಕೊಟ್ಟೂರು: ಅಭಿವೃದ್ಧಿ ಕೆಲಸ ಕಾರ್ಯದಲ್ಲಿ ಯಾವುದೇ ರಾಜಕೀಯ ಮಾಡದೇ ಜನರ ಸೇವೆಯೇ ಜನಪ್ರತಿನಿಧಿ ಮತ್ತು ಜನನಾಯಕರ ಗುರಿಯಾಗಿರಬೇಕು ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ.ಶ್ರೀನಿವಾಸ ಹೇಳಿದರು.
ನಾಗರಕಟ್ಟೆ,ಉಜ್ಜಯಿನಿ, ಕಾಳಾಪುರ ಮತ್ತು ನಿಂಬಳಗೆರೆಗಳಲ್ಲಿ ಈಗಾಗಲೇ ಮನೆ ಮನೆಗೆ ತೆರಳಿ ಕಾರ್ಯಕ್ರಮ ನಡೆಸಿದ್ದೇವು. ಇದೀಗ ಪ್ರಜಾಸೇವಾ ಆಂದೋಲನ ತಾಲೂಕಾಡಳಿತದೊಂದಿಗೆ ಕೈಗೊಂಡಿದ್ದೇವೆ ಎಂದರು.
ಮನೆ ನಿವೇಶನ, ವಿದ್ಯುತ್, ರಸ್ತೆ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ನಮ್ಮ ಧ್ಯೆಯ ಮತ್ತು ಕರ್ತವ್ಯವಾಗಿದೆ. ನಿರಂತರ ವಿದ್ಯುತ್ ಸರಬರಾಜಿಗೆ ಕ್ಷೇತ್ರದಲ್ಲಿ ಹಾಲಿ ಇರುವ ಟಿಸಿಗಳ ಶಕ್ತಿ ತ್ರಿಗುಣಗೊಳಿಸುವ ಕೆಲಸ ಮಾಡಿದ್ದೇವೆ. ತೂಲಹಳ್ಳಿ ಶಾಲಾಭಿವೃದ್ದಿಗೆ ₹50 ಲಕ್ಷ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಾವಜ್ಜಿ ರಾಜೇಂದ್ರಪ್ರಸಾದ್, ಹಾಲನಗೌಡ, ಬಂಡಾರಿಸಿದ್ದೇಶ, ಯರಿಸ್ವಾಮಿ, ಶಾಂತನಗೌಡ, ಹೊಟ್ಟೇರ್ ಅಜ್ಜಯ್ಯ, ತಹಸೀಲ್ದಾರ್ ಅಮರೀಶ ಜಿ.ಕೆ., ತಾಪಂ ಇಓ ಡಾ. ಆನಂದ್ ಕುಮಾರ, ಎಪಿಎಂಸಿ ಕಾರ್ಯದರ್ಶಿ ಎಡಿ ವೀರಣ್ಣ, ಪಿ.ಐ.ಬಿ.ದುರುಗಪ್ಪ, ಮುಖ್ಯ ಪಶುವೈದ್ಯಾಧಿಕಾರಿ ಚಂದ್ರನಾಯ್ಕ,ತೋಟಗಾರಿಕ ಸಹಾಯಕ ನಿರ್ದೇಶಕ ಕುಬೇರಚಾರ್, ಎ.ಇ.ಜಿ.ಬಸವರಾಜ, ಟಿ.ಎಚ್.ಓ.ಪ್ರದೀಪ್, ಗ್ರೇಡ್-2 ತಹಸೀಲ್ದಾರ್ ಎಂ.ಪ್ರತಿಭಾ, ವಿ.ಎ.ಸಿದ್ದೇಶ ಇದ್ದರು.