ಧಾರವಾಡ:
ಇಪ್ಪತ್ತು ಸಾವಿರಕ್ಕೂ ಹೆಚ್ಚು ಪುಟಗಳಷ್ಟು ಸಾಹಿತ್ಯ ಬರೆದಿದ್ದಾರೆ. ಹದಿನೆಂಟು ಸಾವಿರಕ್ಕಿಂತ ಹೆಚ್ಚು ಪುಟಗಳನ್ನು ಸಂಪಾದನೆ ಮಾಡಿ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಬರೆದವರು ಕನ್ನಡಿಗರಿಲ್ಲ. ನೂರಾರು ಕನ್ನಡ ಚಳವಳಿಗಳಲ್ಲಿ ಭಾಗವಹಿಸಿ ಕನ್ನಡ ಭಾಷೆಯ ಉಳಿವಿಗಾಗಿ ಜೀವ ಸವೆಸಿದವರು. ಶೇಷಗಿರಿಯವರದು ದೈತ್ಯ ಶಕ್ತಿ. ಸಾಹಿತಿಯಾಗಿ, ಚಳವಳಿಗಾರಗಾಗಿ, ಆಡಳಿತಗಾರರಾಗಿ, ಶಿಕ್ಷಕರಾಗಿ ಹೀಗೆ ಬಹುಮುಖವಾಗಿ ಜೀವನದುದ್ದಕ್ಕೂ ಕಾರ್ಯ ಮಾಡಿದರು. ಅವರು ವಿಶಿಷ್ಟ ವ್ಯಕ್ತಿತ್ವ ಯಾರಿಗೂ ಕೇಡು ಬಯಸದೇ ಕನ್ನಡ ನೆಲವನ್ನು ಶ್ರೀಮಂತಗೊಳಿಸಿದವರು. ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಕಾರ್ಯ ಅವೀಸ್ಮರಣೀಯ ಎಂದರು.
ಶೇಷಗಿರಿರಾವ್‌ರ ಬದುಕು-ಬರಹ ಕುರಿತು ಮಾತನಾಡಿದ ಡಾ. ಜಿ.ಎಂ. ಹೆಗಡೆ, ಶೇಷಗಿರಿರಾವ್‌ರು ಹತ್ತಾರು ಕನ್ನಡ ಚಳವಳಿಗಳನ್ನು ಬೆಂಗಳೂರು ನೆಲದಲ್ಲಿ ಕಟ್ಟಿದವರು. ಅಂದಿಗಿಂತ ಇಂದು ಕನ್ನಡ ಚಳವಳಿಗಳ ಅವಶ್ಯಕತೆ ಇದೆ. ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರ ನೇಮಕಾತಿ ಇಲ್ಲ. ಕನ್ನಡ ಪ್ರಾಥಮಿಕ ಶಾಲೆಗಳು ಮುಚ್ಚಿಕೊಳ್ಳುತ್ತಿವೆ. ಇವುಗಳ ವಿರುದ್ಧ ಕನ್ನಡಿಗರು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.ಎಲ್.ಎಸ್. ಮಕ್ಕಳ ಸಾಹಿತ್ಯ ಮೊದಲಗೊಂಡು ಎಲ್ಲ ಸಾಹಿತ್ಯ ಪ್ರಕಾರಗಳನ್ನು ನೀಡಿದರು. ಜ್ಞಾನ ಭಾರತಿ, ಕನ್ನಡ ಭಾರತಿ, ಕಿರಿಯರ ಕರ್ನಾಟಕ ಹೀಗೆ ಬೃಹತ್ ಗ್ರಂಥಗಳನ್ನು ನೀಡಿದಂತೆ ಇನ್ನೊಬ್ಬರು ನೀಡಿಲ್ಲ. ಶೇಷಗಿರಿರಾವ್ ನುಡಿದಂತೆ ಬದುಕಿದರು. ಬದುಕಿದಂತೇ ನುಡಿದರು. ನಿಘಂಟುಗಳ ತಜ್ಞರಾಗಿ ಕನ್ನಡ, ಇಂಗ್ಲಿಷ್ ನಿಘಂಟುಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದರು ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಇದ್ದರು. ಗುರು ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು.