ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ಬನಸಿರಿ ಲಯನ್ಸ್ ವಿದ್ಯಾ ಸಂಸ್ಥೆ ಆವರಣದಲ್ಲಿ ಪ್ರತಿಷ್ಠಿತ ಎಂ.ಜೆ.ಎಫ್. ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ವತಿಯಿಂದ 2026–27ನೇ ಸಾಲಿನ 54ನೇ ನೂತನ ಪದಾಧಿಕಾರಿಗಳ ಪದಗ್ರಹಣ ಅನುಸ್ಥಾಪನಾ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.
ಸೇವಾ ಕಾರ್ಯದಲ್ಲಿ ಲಯನ್ಸ್ ಕ್ಲಬ್ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಲಯನಿಸಂ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಮಾಜ ಸೇವೆಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಲಯನ್ಸ್ ಸಂಸ್ಥೆ ಕೊಡುಗೆ ಬಹು ಮಹತ್ವದ್ದಾಗಿದೆ ಎಂದು ತಿಳಿಸಿದರು.ಸಮಾಜ ಸೇವೆ ಮೂಲಕ ನಾಯಕತ್ವ ಗುಣವನ್ನು ಕ್ಲಬ್ ಮೂಲಕ ಅಳವಡಿಸಿಕೊಳ್ಳುವ ಸದಾವಕಾಶವಿದೆ. ಸದೃಢ ಸಮಾಜ ನಿರ್ಮಾಣದಲ್ಲಿ ಬಹು ಮಹತ್ವದ ಪಾತ್ರ ವಹಿಸುವ ಯುವ ಪೀಳಿಗೆಯನ್ನು ಕೇಂದ್ರೀಕರಿಸಿಕೊಂಡು ಕಾರ್ಯನಿರ್ವಹಿಸುವ ಕ್ಲಬ್ ಸೇವಾ ಕಾರ್ಯ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಕಡೆ ಹೆಚ್ಚಿನ ಗಮನಹರಿಸಬೇಕಾಗಿದೆ. ಪದಾಧಿಕಾರಿಗಳ ನೂತನ ತಂಡಕ್ಕೆ ಶುಭ ಹಾರೈಸಿ, ಸೇವಾ ಕಾರ್ಯಗಳಲ್ಲಿ ಹೆಚ್ಚು ಕ್ರಿಯಾಶೀಲರಾಗುವಂತೆ ಸಲಹೆ ನೀಡಿದರು.
ಸಮಾರಂಭದಲ್ಲಿ ಸೇವಾ ಚಟುವಟಿಕೆಗಳ ಅಂಗವಾಗಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಛತ್ರಿ ಹಾಗೂ ಬೈಸಿಕಲ್‌ಗಳನ್ನು ವಿತರಿಸಲಾಯಿತು. ದಾಸೋಹ ಸೇವೆಗಾಗಿ ಸ್ಟೀಲ್ ಕಂಟೈನರ್‌ಗಳನ್ನು ದಾನವಾಗಿ ನೀಡಲಾಯಿತು. ವಿದ್ಯಾರ್ಥಿಗಳ ಓದುವ ಹವ್ಯಾಸವನ್ನು ಹೆಚ್ಚಿಸುವ ಸದುದ್ದೇಶದಿಂದ ಶಾಲೆಯ ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ನೂತನ ಅಧ್ಯಕ್ಷರಾಗಿ ಲ.ಮಹೇಶ್ ಚಂದ್ ಪ್ರಸಾದ್, ಕಾರ್ಯದರ್ಶಿಯಾಗಿ ಲ.ಸಂಜಿತ್ ಎಚ್.ಬಿ. ಖಜಾಂಚಿಯಾಗಿ ಲ.ರಾಘವೇಂದ್ರ ಪಿ.ರಾಯ್ಕರ್ ನಿರ್ದೇಶಕರಾಗಿ ಲ.ಎಸ್.ಶಿವಾನಂದ ಶಾಸ್ತ್ರಿ,ಲ.ಡಿ.ಕೆ.ಮಲ್ಲಿಕಾರ್ಜುನ್, ಲ.ಕರಿಬಸಪ್ಪ,ಲ.ವಿಶ್ವನಾಥ ಶಾಸ್ತ್ರಿ,ಲ.ಪಾಂಡುರಂಗ ಜಿ.ಶೇಟ್,ಲ.ಮೋಹನ್ ಪಿ.ಸಾನು,ಲ.ಎಂ.ಗಣೇಶ್ ರಾವ್, ಲ.ಎಚ್.ಎಸ್.ಗಜೇಂದ್ರ,ಲ.ವೀರಣ್ಣ ಶಾಸ್ತ್ರಿ,ಲ.ಮಮತಾ ಬಾಲಚಂದ್ರ,ಲ.ಸಪ್ನಾ ರಾಘವೇಂದ್ರ ಸಾನು,ಲ.ಶಿಲ್ಪಾ ಅನಿಲ್ ಪ್ರಸಾದ್ ಹಾಗೂ ಲ.ಪೂಜಾ ಎಸ್.ಶಾಸ್ತ್ರಿ ಅಧಿಕಾರ ವಹಿಸಿಕೊಂಡರು.