ಡೇರಿ ಸಿಬ್ಬಂದಿ ಆರೋಗ್ಯ ಕಾಳಜಿ ವಹಿಸಿ: ಬಮೂಲ್‌ ನಿರ್ದೇಶಕ

KannadaprabhaNewsNetwork |  
Published : Jul 04, 2026, 01:30 AM IST
ಫೋಟೋ: 3 ಹೆಚ್‌ಎಸ್‌ಕೆ 3ಹೊಸಕೋಟೆ ತಾಲುಕಿನ ಚಿಕ್ಕಹುಲ್ಲೂರು ಬಳಿ ಇರುವ ಬಮುಲ್ ಶಿಬಿರ ಕಚೇರಿಯಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ಬಮುಲ್ ನಿರ್ದೆಶಕ ಬಿವಿ.ಸತೀಶ್‌ಗೌಡ ಉದ್ಘಾಟಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಆರೋಗ್ಯ ಕಾಳಜಿ ವಹಿಸಬೇಕು ಎಂದು ಬಮೂಲ್ ನಿರ್ದೇಶಕ ಬಿವಿ.ಸತೀಶ್ ಗೌಡ ತಿಳಿಸಿದರು

ಹೊಸಕೋಟೆ: ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಆರೋಗ್ಯ ಕಾಳಜಿ ವಹಿಸಬೇಕು ಎಂದು ಬಮೂಲ್ ನಿರ್ದೇಶಕ ಬಿವಿ.ಸತೀಶ್ ಗೌಡ ತಿಳಿಸಿದರು.

ತಾಲೂಕಿನ ಚಿಕ್ಕಹುಲ್ಲೂರು ಬಳಿ ಬಮೂಲ್ ಹೊಸಕೋಟೆ ಶಿಬಿರ ಕಚೇರಿ ಆವರಣದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಸಹಕಾರ ಯೂನಿಯನ್ ಹಾಗೂ ಎಂವಿಜೆ ಆಸ್ಪತ್ರೆ ಸಹಯೋಗದಲ್ಲು ತಾಲೂಕು ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಹೊಸಕೋಟೆ ಡೇರಿ ಸಿಬ್ಬಂದಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಡಾ.ಪ್ರಮೋದ್ ಮಾತನಾಡಿ, ಪ್ರತಿಯೊಬ್ಬರು ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ ಸೇವನೆ ಹಾಗೂ ದೈನಂದಿನ ವ್ಯಾಯಾಮದ ಮೂಲಕ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳಿದರು. ಶಿಬಿರದಲ್ಲಿ ಸಿಬ್ಬಂದಿಯ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದೊತ್ತಡ, ಸಕ್ಕರೆ ಪ್ರಮಾಣ ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗಳನ್ನು ನಡೆಸಲಾಯಿತು.

ಬೆಂಗಳೂರು ಗ್ರಾಮಾಂತರ ಸಹಕಾರ ಒಕ್ಕೂಟದ ನಿರ್ದೇಶಕ ಮಾಕನಹಳ್ಳಿ ರಮೇಶ್, ಡೇರಿ ವ್ಯವಸ್ಥಾಪಕ ಮಧುಸೂದನ್, ಶಿಬಿರ ಕಚೇರಿ ಮುಖ್ಯಸ್ಥ ವಿನಯ್ ಕುಮಾರ್, ಪಶು ವೈದ್ಯಕೀಯ ಮುಖ್ಯಸ್ಥ ಡಾ.ಸಂತೋಷ್, ವಿಸ್ತರಣಾಧಿಕಾರಿಗಳಾದ ರಮೇಶ್, ಆನಂದ್, ಪವಿತ್ರ ಹಾಗೂ ವಿದ್ಯಾಶ್ರೀ, ತಾಲೂಕು ಡೇರಿ ನೌಕರರ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ತಾಲೂಕು ವ್ಯಾಪ್ತಿಯ ಡೇರಿಗಳ ಸಿಬ್ಬಂದಿ ಹಾಗೂ ಸಿಇಒಗಳು ಉಪಸ್ಥಿತರಿದ್ದರು.

ಫೋಟೋ: 3 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲುಕಿನ ಚಿಕ್ಕಹುಲ್ಲೂರು ಬಳಿ ಇರುವ ಬಮೂಲ್ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಬಮೂಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದ ಸವವಲತ್ತುಗಳನ್ನು ಶ್ರಮಿಕ ವರ್ಗದವರು ಸದ್ಭಳಕೆ ಮಾಡಬೇಕು: ಡಾ.ಕೆ.ಪಿ.ಅಂಶುಮಂತ್
ಸರ್ಕಾರಿ ಜಮೀನು ಅಕ್ರಮ ಖಾತೆ: 9 ಆರೋಪಿಗಳ ಬಂಧನ, ಲೋಕಾಯುಕ್ತ ಪೊಲೀಸರಿಂದ ಕಾರ್ಯಾಚರಣೆ