ನರಸಿಂಹರಾಜಪುರಸಣ್ಣ, ಸಣ್ಣ ಶ್ರಮಿಕ ಸಮುದಾಯಗಳು ಸರ್ಕಾರದ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಡ ವಾಗಬೇಕು ಎಂದು ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.
- ಮೇದ ಸಮಾಜದ ಅಭಿವೃದ್ದಿಗೆ ದಾನಿ ಭದ್ರಾವತಿಯ ದಾನಿ ಬಿ.ಕೆ.ಜಗನ್ನಾಥ್ 5 ಲಕ್ಷ ದೇಣಿಗೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಸಣ್ಣ, ಸಣ್ಣ ಶ್ರಮಿಕ ಸಮುದಾಯಗಳು ಸರ್ಕಾರದ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಡ ವಾಗಬೇಕು ಎಂದು ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.
ಗುರುವಾರ ಪಟ್ಟಣದ ಮೇದರ ಬೀದಿಯಲ್ಲಿ ಮೇದ ಸಮುದಾಯಕ್ಕೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಸಹೋದರ ಹಾಗೂ ದಾನಿ ಬಿ.ಕೆ.ಜಗನ್ನಾಥ್ ಅವರು ನೀಡಿದ ₹5 ಲಕ್ಷದ ಚೆಕ್‌ನ್ನು ಮುಖಂಡರಿಗೆ ವಿತರಿಸಿ ಮಾತನಾಡಿ ಮೇದ ಸಮುದಾಯ ಅತ್ಯಂತ ಕೆಳಸ್ತರದ ಸಮುದಾಯ. ಈ ಸಮುದಾಯಕ್ಕೆ ಯಾವುದೇ ರಾಜಕೀಯ ಪ್ರಾತಿನಿದ್ಯ ದೊರೆತಿಲ್ಲ. ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಎಂ.ಶ್ರೀನಿವಾಸ್ ಅವರ ಸ್ನೇಹಿತರ ಬಳಗದ ಎಂ.ಎಲ್ಸಿ ಗಳಿಂದ ಸುಮಾರು ₹50 ಲಕ್ಷ ರು. ಅನುದಾನವನ್ನು ಸಮುದಾಯ ಭವನಕ್ಕಾಗಿ ಕೊಡಿಸಿಕೊಟ್ಟಿದ್ದಾರೆ. ಆ ಸಮುದಾಯ ಭವನ ಕಲ್ಯಾಣ ಕಾರ್ಯ ಗಳಿಗೆ ಸದುಪಯೋಗವಾಗುತ್ತಿದೆ. ಅದರಂತೆ ಇಂದು ಮೇದ ಸಮುದಾಯದ ಮೇಲಿನ ಪ್ರೀತಿ, ವಿಶ್ವಾಸದಿಂದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಸಹೋದರ ಹಾಗೂ ದಾನಿ ಬಿ.ಕೆ.ಜಗನ್ನಾಥ್ ₹5 ಲಕ್ಷದ ಚೆಕ್‌ನ್ನು ನೀಡಿದ್ದಾರೆ. ಸಮುದಾಯದ ಮುಖಂಡರು ಸರ್ಕಾರ, ದಾನಿಗಳು ನೀಡಿದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಚೆಕ್ ವಿತರಣೆ ಮಾಡಿ ಮಾತನಾಡಿ ಭದ್ರಾವತಿಯ ದಾನಿ ಬಿ.ಕೆ.ಜಗನ್ನಾಥ್ ಮೇದ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯ. ಈ ಸಮುದಾಯದ ಮೇಲೆ ನನಗೆ ಅಗಾಧ ಪ್ರೀತಿ, ವಿಶ್ವಾಸವಿದೆ. ಇವರು ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಮುಂದೆ ಬರಬೇಕೆಂಬ ಸದುದ್ದೇಶದಿಂದ ನಾನು ₹5 ಲಕ್ಷ ದೇಣಿಗೆ ನೀಡಿದ್ದೇನೆ. ನಾನು ನನ್ನ ಸಹೋದರ, ಶಾಸಕ ಬಿ.ಕೆ.ಸಂಗಮೇಶ್ ಅವರಿಂದಲೂ ಆರ್ಥಿಕ ಸಹಕಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.ಅಧ್ಯಕ್ಷತೆಯನ್ನು ಶ್ರೀ ಅಂತರಘಟ್ಟಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರವೀಣ್ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ತಹಸೀಲ್ದಾರ್ ಸೋಮಶೇಖರ್, ಸಮಾಜದ ಮುಖಂಡ ಶೆಟ್ಟಿಕೊಪ್ಪಎಂ.ಮಹೇಶ್ ಮತ್ತಿತರರು ಇದ್ದರು.