ಪಕ್ಷಬೇಧ ಮರೆತು ಸಮುದಾಯದ ಪ್ರಗತಿಗೆ ಸಹಕರಿಸಿ

KannadaprabhaNewsNetwork |  
Published : Oct 02, 2026, 02:00 AM IST
ಪೋಟೋ 5 :  ಕೆಂಪಲಿಂಗನಹಳ್ಳಿಯ ವಿವಿಎಸ್ ಸಭಾಂಗಣದಲ್ಲಿ ತಾಲೂಕು ಒಕ್ಕಲಿಗರ ಸಂಘದಿಂದ ಆಯೋಜಿಸಲಾಗಿದ್ದ ವಾರ್ಷಿಕ ಸಭೆಯಲ್ಲಿ ಪ್ರಗತಿ ಪರ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ದಾಬಸ್‍ಪೇಟೆ: ಭೂಮಿ ಹುಟ್ಟುವ ಪ್ರತಿಯೊಬ್ಬರು ನಾಡಿಗೆ, ಪೋಷಕರಿಗೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಶಿವಾನಂದಾಶ್ರಮ ಮಠದ ಶ್ರೀ ರಮಾಣಾನಂದ ನಾಥ ಸ್ವಾಮೀಜಿ ಹೇಳಿದರು

ದಾಬಸ್‍ಪೇಟೆ: ಭೂಮಿ ಹುಟ್ಟುವ ಪ್ರತಿಯೊಬ್ಬರು ನಾಡಿಗೆ, ಪೋಷಕರಿಗೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಶಿವಾನಂದಾಶ್ರಮ ಮಠದ ಶ್ರೀ ರಮಾಣಾನಂದ ನಾಥ ಸ್ವಾಮೀಜಿ ಹೇಳಿದರು.

ತಾಲೂಕು ಒಕ್ಕಲಿಗರ ಸಂಘ ಆಯೋಜಿಸಿದ್ದ ವಾರ್ಷಿಕ ಸಭೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಒಕ್ಕಲಿಗರ ಸಂಘ ತಿಮ್ಮರಾಜು ಅಧ್ಯಕ್ಷತೆಯಲ್ಲಿ 6 ವರ್ಷಗಳಿಂದ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಸಮುದಾಯದ ಜನರು ಹಾಗೂ ಮುಖಂಡರು ಪಕ್ಷಬೇದ ಮರೆತು ಸಹಕಾರ ನೀಡಬೇಕು. ತಾಲೂಕಿನಲ್ಲಿ ಒಕ್ಕಲಿಗ ಸಮಾಜ ದೊಡ್ಡ ಮಟ್ಟದಲ್ಲಿದ್ದರು ಸಮುದಾಯ ಭವನ, ಸಮಾಜಕ್ಕೆ ಒಂದು ಜಾಗವಿಲ್ಲದಿರುವುದು ಬೇಸರ. ಈಗಲಾದರೂ ಸಮುದಾಯಕ್ಕೆ ಬಲ ಬರಲಿ ಎಂದರು.

ಒಕ್ಕಲಿಗರ ತಾಲೂಕು ಅಧ್ಯಕ್ಷ ಬಿ.ಕೆ.ತಿಮ್ಮರಾಜು ಮಾತನಾಡಿ, ತಾಲೂಕಿನಲ್ಲಿ ಒಕ್ಕಲಿಗರ 1.30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಇಲ್ಲಿಯವರೆಗೂ ಒಕ್ಕಲಿಗ ಸಮುದಾಯಕ್ಕೆ ಏನು ಆಗಿಲ್ಲ, ಸಮುದಾಯದ ವಿಚಾರ ಬಂದಾಗ ಸ್ವಾರ್ಥ ಬಿಟ್ಟು ಒಕ್ಕಲಿಗ ಮುಖಂಡರು ಒಂದಾಗಬೇಕು. ಇಲ್ಲದಿದ್ದರೆ ನಮ್ಮ ಮಕ್ಕಳೇ ಮುಂದಿನ ದಿನಗಳಲ್ಲಿ ಸಂಕಷ್ಟ ಅನುಭವಿಸಬೇಕಾಗುತ್ತದೆ. ಸಂಘದಿಂದ ಮುಂದಿನ ದಿನಗಳಲ್ಲಿ ವಸತಿ ನಿಲಯದ ಯೋಜನೆ ರೂಪಿಸಿಸಿದ್ದೇವೆ. ಶಾಸಕರು ನಮಗೆ ಭರವಸೆ ನೀಡಿದ್ದಾರೆ ಎಂದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ: ತಾಲೂಕು ಒಕ್ಕಲಿಗರ ಸಂಘದಿಂದ ಪ್ರಗತಿಪರ ರೈತರಾದ ಗೋಪಾಲಯ್ಯ, ಹನುಮಂತರಾಯಪ್ಪ. ರವಿಗೌಡ,ರಾಜಣ್ಣ, ಗಂಗಪ್ಪ, ಲಕ್ಷ್ಮಣ, ಮುನಿರಾಜು, ಶ್ರೀನಿವಾಸ್, ಶಾಣೆಗೌಡ, ಚಂದ್ರಶೇಖರ್, ಹೊನ್ನೇಗೌಡ, ಕೃಷ್ಣಯ್ಯ, ಕಾಚನಹಳ್ಳಿ ಸಿದ್ದರಾಜು, ಭೀಮರಾಜು, ಮುನಿಯಪ್ಪ, ಸಿದ್ದರಾಜು, ಹಿರಿಯ ವಕೀಲರಾದ ಕೃಷ್ಣಮೂರ್ತಿ, ಆರ್.ಕೆಂಪಯ್ಯ ಸೇರಿದಂತೆ 20 ಸಾಧಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್, ಗೌರವಾಧ್ಯಕ್ಷ ಸಿದ್ದಬೈರಯ್ಯ, ಪ್ರಧಾನ ಕಾರ್ಯದರ್ಶಿ ಪಿ.ಬೈರಪ್ಪ, ಖಜಾಂಚಿ ಹೆಚ್.ಜಿರಾಜು, ಲೆಕ್ಕಪರಿಶೋಧಕ ಅನ್ನದಾನಯ್ಯ, ಉಪಾಧ್ಯಕ್ಷ ಕೃಷ್ಣಮೂರ್ತಿ, ನಿರ್ದೇಶಕರಾದ ಉಮೇಶ್‌ಗೌಡ ಬಸವನಹಳ್ಳಿ ಕೆ.ಜಿ ಭೀಮರಾಜ, ಎಂ.ಎಂಗೌಡ, ಭಾಸ್ಕರ್, ಲಯನ್ ಡಾ.ಕೆ.ಎನ್ ಪ್ರಕಾಶ್, ರಂಗಸ್ವಾಮಿ, ಚಂದ್ರಕುಮಾರ್, ಪ್ರಕಾಶ್, ವಿಜಯ್ ಹೊಸಪಾಳ್ಯ, ರಾಜಶೇಖರ್, ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.

ಪೋಟೋ 5 :

ಕೆಂಪಲಿಂಗನಹಳ್ಳಿಯಲ್ಲಿ ತಾಲೂಕು ಒಕ್ಕಲಿಗರ ಸಂಘ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಪ್ರಗತಿ ಪರ ರೈತರಿಗೆ ಪ್ರಶಸ್ತಿ ಪ್ರದಾನ ಸತ್ಕರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷಯಮುಕ್ತ ಸಮಾಜಕ್ಕಾಗಿ ಆರಂಭಿಕ ಪತ್ತೆ, ಕಡ್ಡಾಯ ನೋಂದಣಿ ಅಗತ್ಯ: ಎಸಿ
ಬಡ ಮಕ್ಕಳ ಅಕ್ಷರದ ಕನಸಿಗೆ ಗಾರೆ ಗೋಪಾಲಣ್ಣನ ಆಸರೆ