ಕನ್ನಡಪ್ರಭ ವಾರ್ತೆ ಹಾಸನ
ಸೂರ್ಯ ನಮಸ್ಕಾರ ಮಾಡುವ ಮೂಲಕ ಯೋಗ ಪ್ರಾರಂಭಿಸಿ ವಿವಿಧ ರೀತಿಯ ಯೋಗಗಳನ್ನು ಮಾಡುವ ಮೂಲಕ ಮಕ್ಕಳು ಯೋಗಭ್ಯಾಸ ಹಾಗೂ ಪ್ರಾಣಾಯಾಮ ಮಾಡಿ ಸಂತಸಪಟ್ಟರು. ಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ಅರಿತರು. ಯೋಗವು ಆರೋಗ್ಯಕರ ಜೀವನ ಶೈಲಿಗೆ ಬಹಳ ಮುಖ್ಯ. ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು. ಯೋಗವು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿನಿತ್ಯ ಮಕ್ಕಳು ಕೆಲ ಸಮಯವನ್ನು ಯೋಗಾಸನ ಮತ್ತು ಧ್ಯಾನವನ್ನು ಮಾಡಿ ಸ್ವಾಸ್ಥರಾಗಬೇಕು. ಯೋಗ ಆರೋಗ್ಯಕ್ಕೆ, ಸಂಜೀವಿನಿ ಯೋಗ ಮಾಡಿ ನಿರೋಗಿಗಳಾಗಿ, ಸದೃಢರಾಗಬೇಕೆಂದು ಸ್ಕಾಲರ್ಸ್ ಶಾಲೆಯ ಆಡಳಿತ ಅಧಿಕಾರಿಗಳಾದ ಡಾ. ಎಚ್.ಎನ್. ಚಂದ್ರಶೇಖರ್ ಮಕ್ಕಳಿಗೆ ತಿಳಿಸಿದರು.