ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ಯುವಜನತೆ ಉದ್ಯೋಗ ಅರಸಿ ಬೇರೆ ಊರಿಗೆ ವಲಸೆ ಹೋಗದೆ ತಮ್ಮ ಅನುಭವದ ಜೊತೆಗೆ ಆಧುನಿಕ ಕೌಶಲ್ಯದ ಅನುಭವ ಪಡೆದು ಉದ್ಯಮವನ್ನು ಈ ಭಾಗದಲ್ಲಿ ತೆರೆದು ನಿರುದ್ಯೋಗ ಯುವಜನಕ್ಕೆ ಉದ್ಯೋಗ ನೀಡುವವರಾಗಬೇಕು.
ಕನ್ನಡಪ್ರಭ ವಾರ್ತೆ ಭಟ್ಕಳ
ಮುರುಡೇಶ್ವರದ ಆರ್.ಎನ್.ಎಸ್. ರೂರಲ್ ಪಾಲಿಟೆಕ್ನಿಕ್ ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು, ಎಂಎಸ್ಎಂಇ ನಿರ್ದೇಶನಾಲಯ, ಕೆ.ಸಿ.ಟಿ.ಯು, ಟೆಕ್ಸಾಕ ಬೆಂಗಳೂರು, ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಬೆಂಗಳೂರು, ಆರ್.ಎ.ಎಮ್.ಪಿ ಯೋಜನೆ ಕಾರವಾರ ಹಾಗೂ ಜಿಲ್ಲಾ ಕೈಗಾರಿಕೆ ಕೇಂದ್ರ ಕಾರವಾರ, ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಇನ್ಕುಬೇಷನ್ ಜಾಗೃತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉಸಿರಾ ಇಂಡಸ್ಟ್ರೀಸ್‌ನ ಉದ್ಯಮಿ ಎಂ.ಡಿ. ಮ್ಯಾಥ್ಯೂ ಉದ್ಘಾಟಿಸಿ ಮಾತನಾಡಿ, ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ಯುವಜನತೆ ಉದ್ಯೋಗ ಅರಸಿ ಬೇರೆ ಊರಿಗೆ ವಲಸೆ ಹೋಗದೆ ತಮ್ಮ ಅನುಭವದ ಜೊತೆಗೆ ಆಧುನಿಕ ಕೌಶಲ್ಯದ ಅನುಭವ ಪಡೆದು ಉದ್ಯಮವನ್ನು ಈ ಭಾಗದಲ್ಲಿ ತೆರೆದು ನಿರುದ್ಯೋಗ ಯುವಜನಕ್ಕೆ ಉದ್ಯೋಗ ನೀಡುವವರಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕೌಶಲ್ಯ ಭಾರತ ಮತ್ತು ಜಿಲ್ಲಾ ಕೈಗಾರಿಕೆ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಅರವಿಂದ ಬಾಳೇರಿ ಮಾತನಾಡಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನವ ಉದ್ಯಮಿಗಳು ಆಧುನಿಕ ಕೌಶಲ್ಯವನ್ನು ಅಳವಡಿಸಿಕೊಂಡು ತಮ್ಮ ಕಾರ್ಯ ಕ್ಷಮತೆಯನ್ನು ಹೆಚ್ಚಿಸಿಕೊಂಡು, ಉತ್ಪಾದನೆಯ ವೇಗದ ಜೊತೆಗೆ ದೇಶದ ಆರ್ಥಿಕತೆಗೆ ಕೊಡುಗೆ ನೀಡಬೇಕೆಂದರು.
ರಾಂಪ್ ಯೋಜನೆ ಬಗ್ಗೆ ಸುನಿಲ್ ನಾಯಕ್ ವಿವರಿಸಿದರು. ವ್ಯಕ್ತಿತ್ವ ವಿಕಸನದ ಬಗ್ಗೆ ಮಡಿಕೇರಿಯಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿ ಆರ್.ಕೆ. ಬಾಲಚಂದ್ರ ಸವಿವರವಾಗಿ ಮಾತನಾಡಿದರು. ಅಕ್ವಾಮರೈನ್ ಇನ್ಕುಬೇಷನ್ ಕೇಂದ್ರ ನಿಟ್ಟೆಯ ಮುಖ್ಯಸ್ಥ ಆಶಿಕ್ ಶೆಟ್ಟಿ ಸರ್ಕಾರದ ಯೋಜನೆ ಬಗ್ಗೆ ವಿವರವಾಗಿ ತಿಳಿಸಿದರು. ಉಡುಪಿ ಸಿಡಾಕ್ ನ ಪೃಥ್ವಿರಾಜ್ ಉಪಸ್ಥಿತರಿದ್ದರು. ಮುರ್ಡೇಶ್ವರ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಸಂತೋಷ್ ಆರ್ .ಎ . ಸ್ವಾಗತಿಸಿದರು,ನಾಗವೇಣಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಡುಪಿಯ ಸಿಡಾಕ್‌ನ ಶೃತಿ ನಿರೂಪಿಸಿದರು.
ಮುರುಡೇಶ್ವರ ಪಾಲಿಟೆಕ್ನಿಕ್‌ನ ಉಪಪ್ರಾಚಾರ್ಯ ಕೆ. ಮರಿಸ್ವಾಮಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.