ಸೋಮರಡ್ಡಿ ಅಳವಂಡಿ
ಮನೆ ನಿರ್ಮಾಣ ಪ್ರಾರಂಭವಾಗಿಯೇ ಇಲ್ಲ ಎನ್ನುವ ಆಘಾತಕಾರಿ ವಿಷಯ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
2023ರಿಂದ 2026ರ ವರೆಗೆ ಬಸವ ವಸತಿ ಯೋಜನೆ, ದೇವರಾಜ ಅರಸ ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಜ್ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ರಾಜ್ಯಾದ್ಯಂತ ಸರ್ಕಾರ ಸ್ಲಂ ನಿವಾಸಿಗಳು, ಬಡವರಿಗೆ 3.63 ಲಕ್ಷ ಮನೆಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಇದುವರೆಗೂ ನಿರ್ಮಾಣ ಪೂರ್ಣಗೊಂಡಿರುವ ಮನೆಗಳ ಸಂಖ್ಯೆ ಕೇವಲ 23,334! 63,317 ಮನೆಗಳು ನಿರ್ಮಾಣದ ವಿವಿಧ ಹಂತದಲ್ಲಿದ್ದರೆ, 2,75,869 ಮನೆಗಳ ನಿರ್ಮಾಣ ಇನ್ನೂ ಪ್ರಾರಂಭವೇ ಆಗಿಲ್ಲ. ಈ ಪೈಕಿ 482 ಮನೆಗಳು ವಿವಿಧ ಕಾರಣಗಳಿಂದ ರದ್ದಾಗಿವೆ.ನಿರ್ಮಾಣದ ಹಂತದಲ್ಲಿರುವ 63,317 ಮನೆಗಳ ಪೈಕಿ ಬಹುತೇಕ ಮನೆಗಳಿಗೆ ಮೊದಲ ಕಂತಿನ ಹಣ ಮಾತ್ರ ಬಿಡುಗಡೆಯಾಗಿದ್ದು, ಹೀಗಾಗಿ ಬಹುತೇಕ ಮನೆಗಳು ಬುನಾದಿ ಹಂತದಲ್ಲಿಯೇ ಇವೆ. ಅಷ್ಟಕ್ಕೂ ರಾಜ್ಯ ಸರ್ಕಾರ ಆಶ್ರಯ ಮನೆ ನಿರ್ಮಾಣಕ್ಕೆ ನೀಡುವ ಸಹಾಯಧನ ₹1.25 ಲಕ್ಷದಿಂದ ₹ 3.25 ಲಕ್ಷದ ವರೆಗೆ ಮಾತ್ರ. ಆದಾಗ್ಯೂ ಕಂತುಗಳ ರೂಪದಲ್ಲಿ ಹಣ ಬಿಡುಗಡೆಯಾಗುವಲ್ಲಿ ವಿಳಂಬವಾಗುತ್ತಿರುವುದು ನಿರ್ಮಾಣ ಕಾಮಗಾರಿಗೆ ಹಿನ್ನಡೆ ಉಂಟುಮಾಡಿದೆ.
ಪಿಎಂ ಅವಾಸ್ ನನೆಗುದಿಗೆ: ಆಶ್ರಯ ವಸತಿ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. 2024-25ನೇ ಸಾಲಿನಲ್ಲಿ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಕ್ಕೆ 3,35,494 ಮನೆಗಳು ಮಂಜೂರಾಗಿದ್ದರೆ, ಕೇವಲ 17,996 ಮನೆಗಳು ಮಾತ್ರ ಪೂರ್ಣಗೊಂಡಿವೆ. 55,765 ಮನೆಗಳು ನಿರ್ಮಾಣ ಹಂತದಲ್ಲಿ ನನೆಗುದಿಗೆ ಬಿದ್ದಿವೆ. 2,61,733 ಮನೆಗಳು ನಿರ್ಮಾಣವೇ ಪ್ರಾರಂಭವಾಗಿಲ್ಲ.
ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ₹1.25 ಲಕ್ಷದಿಂದ ₹1.50 ಲಕ್ಷ ಮಾತ್ರ ನೀಡುತ್ತದೆ. ನಗರ ಪ್ರದೇಶದಲ್ಲಿ ವರ್ಗವಾರು ಮತ್ತು ಯೋಜನೆವಾರು ₹1.50 ಲಕ್ಷದಿಂದ ₹3-4 ಲಕ್ಷ ಸಹಾಯಧನ ನೀಡುತ್ತದೆ. ಇಷ್ಟು ಕಡಿಮೆ ಮೊತ್ತದಲ್ಲಿ ಮನೆ ನಿರ್ಮಾಣ ಮಾಡಿಸಿಕೊಳ್ಳುವುದು ಅಸಾಧ್ಯ. ಆದರೆ ಫಲಾನುಭವಿಗಳು ಬಂದಷ್ಟಾದರೂ ಬರಲಿ, ಉಳಿದ ಹಣ ಹಾಕಿ ಮನೆ ಕಟ್ಟಿಕೊಂಡರಾಯಿತು ಎಂದು ಆಲೋಚಿಸಿದ್ದಾರೆ. ಸಹಾಯಧನ ಬಾರದೇ ಇರುವುದರಿಂದ ಆಶ್ರಯ ವಸತಿ ಯೋಜನೆ ರಾಜ್ಯದಲ್ಲಿ ಬಹುತೇಕ ವಿಫಲವಾಗಿದೆ.
ಬಸವ ವಸತಿ ಯೋಜನೆ ಅಡಿ ಮನೆ ಮಂಜೂರಿಯಾಗಿದ್ದು ಮೊದಲ ಕಂತು ₹30,000 ಬಿಡುಗಡೆಯಾಗಿದ್ದು, ಇನ್ನು ಬಿಡುಗಡೆಯಾಗಬೇಕಾಗಿರುವ ₹90 ಸಾವಿರ ಇದುವರೆಗೂ ಬಿಡುಗಡೆಯಾಗಿಲ್ಲ. ಹೀಗಾಗಿ ಮನೆ ನಿರ್ಮಾಣ ಪೂರ್ಣಗೊಳಿಸಲು ಆಗಿಲ್ಲ ಎಂದು ಲಿಂಗದಳ್ಳಿ ಗ್ರಾಮದ ಈರಮ್ಮ ಹೇಳಿದರು.ಮೂರು ವರ್ಷಗಳ ಲೆಕ್ಕಾಚಾರ:
ಮಂಜೂರಾದ ಮನೆಗಳು: 5,362
ನಿರ್ಮಾಣ ಹಂತದಲ್ಲಿ: 1,871
ರದ್ದಾದ ಮನೆಗಳು: 200
2. ಬಸವ ವಸತಿ ಯೋಜನೆ – 2024-25ಮಂಜೂರಾದ ಮನೆಗಳು: 15,585
ಪೂರ್ಣಗೊಂಡ ಮನೆಗಳು: 2,638ನಿರ್ಮಾಣ ಹಂತದಲ್ಲಿ: 4,562
ನಿರ್ಮಾಣ ಆರಂಭವಾಗದವು: 8,103ರದ್ದಾದ ಮನೆಗಳು: 282
3. ದೇವರಾಜ ಅರಸು ವಸತಿ ಯೋಜನೆ (ಗ್ರಾ) – 2023-24ಮಂಜೂರಾದ ಮನೆಗಳು: 124
ಪೂರ್ಣಗೊಂಡ ಮನೆಗಳು: 26ನಿರ್ಮಾಣ ಹಂತದಲ್ಲಿ: 60
ನಿರ್ಮಾಣ ಆರಂಭವಾಗದವು: 38ರದ್ದಾದ ಮನೆಗಳು: 0
4. ದೇವರಾಜ ಅರಸು ವಸತಿ ಯೋಜನೆ (ಗ್ರಾ) – 2024-25ಮಂಜೂರಾದ ಮನೆಗಳು: 74
ಪೂರ್ಣಗೊಂಡ ಮನೆಗಳು: 4ನಿರ್ಮಾಣ ಹಂತದಲ್ಲಿ: 35
ನಿರ್ಮಾಣ ಆರಂಭವಾಗದವು: 35ರದ್ದಾದ ಮನೆಗಳು: 0
5. ದೇವರಾಜ ಅರಸು ವಸತಿ ಯೋಜನೆ (ಗ್ರಾ) – 2025-26ಮಂಜೂರಾದ ಮನೆಗಳು: 24
ಪೂರ್ಣಗೊಂಡ ಮನೆಗಳು: 0ನಿರ್ಮಾಣ ಹಂತದಲ್ಲಿ: 7
ನಿರ್ಮಾಣ ಆರಂಭವಾಗದವು: 17ರದ್ದಾದ ಮನೆಗಳು: 0
6. ದೇವರಾಜ ಅರಸು ವಸತಿ ಯೋಜನೆ (ಗ್ರಾ) – Flood – 2024-25ಮಂಜೂರಾದ ಮನೆಗಳು: 2,664
ಪೂರ್ಣಗೊಂಡ ಮನೆಗಳು: 303ನಿರ್ಮಾಣ ಹಂತದಲ್ಲಿ: 531
ನಿರ್ಮಾಣ ಆರಂಭವಾಗದವು: 1,830ರದ್ದಾದ ಮನೆಗಳು: 0
7. ದೇವರಾಜ ಅರಸು ವಸತಿ ಯೋಜನೆ (ಗ್ರಾ) – Flood – 2025-26ಮಂಜೂರಾದ ಮನೆಗಳು: 979
ಪೂರ್ಣಗೊಂಡ ಮನೆಗಳು: 17ನಿರ್ಮಾಣ ಹಂತದಲ್ಲಿ: 115
ನಿರ್ಮಾಣ ಆರಂಭವಾಗದವು: 847ರದ್ದಾದ ಮನೆಗಳು: 0
8. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾ) – 2024-25ಮಂಜೂರಾದ ಮನೆಗಳು: 3,35,494
ಪೂರ್ಣಗೊಂಡ ಮನೆಗಳು: 17,996ನಿರ್ಮಾಣ ಹಂತದಲ್ಲಿ: 55,765
ನಿರ್ಮಾಣ ಆರಂಭವಾಗದವು: 2,61,733ರದ್ದಾದ ಮನೆಗಳು: 0
9. PM-JANMAN – 2023-24ಮಂಜೂರಾದ ಮನೆಗಳು: 1,056
ಪೂರ್ಣಗೊಂಡ ಮನೆಗಳು: 93ನಿರ್ಮಾಣ ಹಂತದಲ್ಲಿ: 236
ನಿರ್ಮಾಣ ಆರಂಭವಾಗದವು: 727ರದ್ದಾದ ಮನೆಗಳು: 0
10. ದೇವರಾಜ ಅರಸು ವಸತಿ ಯೋಜನೆ (ನಗರ) – 2023-24ಮಂಜೂರಾದ ಮನೆಗಳು: 6
ಪೂರ್ಣಗೊಂಡ ಮನೆಗಳು: 3ನಿರ್ಮಾಣ ಹಂತದಲ್ಲಿ: 1
ನಿರ್ಮಾಣ ಆರಂಭವಾಗದವು: 2ರದ್ದಾದ ಮನೆಗಳು: 0
11. ದೇವರಾಜ ಅರಸು ವಸತಿ ಯೋಜನೆ (ನಗರ) – 2024-25ಮಂಜೂರಾದ ಮನೆಗಳು: 3
ಪೂರ್ಣಗೊಂಡ ಮನೆಗಳು: 0ನಿರ್ಮಾಣ ಹಂತದಲ್ಲಿ: 1
ನಿರ್ಮಾಣ ಆರಂಭವಾಗದವು: 2ರದ್ದಾದ ಮನೆಗಳು: 0
12. ದೇವರಾಜ ಅರಸು ವಸತಿ ಯೋಜನೆ (ನಗರ) – Flood – 2024-25ಮಂಜೂರಾದ ಮನೆಗಳು: 237
ಪೂರ್ಣಗೊಂಡ ಮನೆಗಳು: 7ನಿರ್ಮಾಣ ಹಂತದಲ್ಲಿ: 17
ನಿರ್ಮಾಣ ಆರಂಭವಾಗದವು: 213ರದ್ದಾದ ಮನೆಗಳು: 0 13. ದೇವರಾಜ ಅರಸು ವಸತಿ ಯೋಜನೆ (ನಗರ) – Flood – 2025-26
ಮಂಜೂರಾದ ಮನೆಗಳು: 107ಪೂರ್ಣಗೊಂಡ ಮನೆಗಳು: 0
ನಿರ್ಮಾಣ ಹಂತದಲ್ಲಿ: 5ನಿರ್ಮಾಣ ಆರಂಭವಾಗದವು: 102
ರದ್ದಾದ ಮನೆಗಳು: 014. ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) – BLC Non-Convergence – 2023-24
ಮಂಜೂರಾದ ಮನೆಗಳು: 1,287ಪೂರ್ಣಗೊಂಡ ಮನೆಗಳು: 1,176
ನಿರ್ಮಾಣ ಹಂತದಲ್ಲಿ: 111ನಿರ್ಮಾಣ ಆರಂಭವಾಗದವು: 0
ರದ್ದಾದ ಮನೆಗಳು: 0ಒಟ್ಟು
ಮಂಜೂರಾದ ಮನೆಗಳು: 3,63,002ಪೂರ್ಣಗೊಂಡ ಮನೆಗಳು: 23,334
ನಿರ್ಮಾಣ ಹಂತದಲ್ಲಿ: 63,317ನಿರ್ಮಾಣ ಆರಂಭವಾಗದವು: 2,75,869
ರದ್ದಾದ ಮನೆಗಳು: 482